Marital rape verdict ವೈವಾಹಿಕ ಅತ್ಯಾಚಾರ; ಭಿನ್ನ ನಿಲುವಿನ ತೀರ್ಪು ಕೊಟ್ಟ ದೆಹಲಿ ಹೈಕೋರ್ಟ್

ವೈವಾಹಿಕ ಅತ್ಯಾಚಾರವು ಸಂವಿಧಾನದ ಆಶಯಗಳ ಉಲ್ಲಂಘನೆ ಎಂದು ನ್ಯಾಯಮೂರ್ತಿ ರಾಜೀವ್ ಶಕ್ಧರ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಆದರೆ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರು ಸೆಕ್ಷನ್ 376 ಬಿ ಮತ್ತು 198 ಬಿ ವಿಧಿಗಳ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದ್ದಾರೆ.

Marital rape verdict ವೈವಾಹಿಕ ಅತ್ಯಾಚಾರ; ಭಿನ್ನ ನಿಲುವಿನ ತೀರ್ಪು ಕೊಟ್ಟ ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 11, 2022 | 3:51 PM

ದೆಹಲಿ: ವೈವಾಹಿಕ ಅತ್ಯಾಚಾರವನ್ನು(marital rape) ಅಪರಾಧ ಎಂದು ಪರಿಗಣಿಸಬೇಕೆಂದು ವಿನಂತಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಅಂತಿಮ ತೀರ್ಪನ್ನು ದೆಹಲಿ ಹೈಕೋರ್ಟ್ (Delhi High Court) ಬುಧವಾರ ನೀಡಿದೆ. ನ್ಯಾಯಮೂರ್ತಿ ರಾಜೀವ್ ಶಕ್ಧರ್ ಮತ್ತು ನ್ಯಾಯಮೂರ್ತಿ ಹರಿಶಂಕರ್ ಅವರಿದ್ದ ದ್ವಿ ಸದಸ್ಯ ನ್ಯಾಯಪೀಠವು ಭಿನ್ನ ನಿಲುವಿನ ತೀರ್ಪು (Split Verdict) ನೀಡಿದ್ದು, ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆಯೆಂದು ಸ್ಪಷ್ಟಪಡಿಸಿದೆ. ವೈವಾಹಿಕ ಅತ್ಯಾಚಾರವು ಸಂವಿಧಾನದ ಆಶಯಗಳ ಉಲ್ಲಂಘನೆ ಎಂದು ನ್ಯಾಯಮೂರ್ತಿ ರಾಜೀವ್ ಶಕ್ಧರ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಆದರೆ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರು ಸೆಕ್ಷನ್ 376 ಬಿ ಮತ್ತು 198 ಬಿ ವಿಧಿಗಳ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದ್ದಾರೆ. ಆದಾಗ್ಯೂ ಈ ವಿಷಯವು ಕಾನೂನಿನ ಗಣನೀಯ ಪ್ರಶ್ನೆಗಳನ್ನು ಒಳಗೊಂಡಿರುವುದರಿಂದ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಇಬ್ಬರೂ ನ್ಯಾಯಾಧೀಶರು ಒಪ್ಪಿಕೊಂಡರು. ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್‌ಗೊಳಿಸುವಂತೆ ಕೋರುವ ಅರ್ಜಿಗಳು 2015 ಮತ್ತು 2017 ರಿಂದ ನ್ಯಾಯಾಲಯದ ಮುಂದೆ ಬಾಕಿ ಉಳಿದಿವೆ. ಆರ್​​ಐಟಿ ಫೌಂಡೇಶನ್ ಮತ್ತು ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ ನ್ಯಾಯಾಲಯದ ಮುಂದೆ ಪ್ರಮುಖ ಅರ್ಜಿದಾರರಾಗಿದ್ದರು.

ಅರ್ಜಿಗಳಿಗೆ ಹೊಸದಾಗಿ ಪ್ರತಿಕ್ರಿಯಿಸಲು ಹೆಚ್ಚಿನ ಸಮಯ ನೀಡುವಂತೆ ಕೇಂದ್ರದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು ಪ್ರಕರಣದ ತೀರ್ಪನ್ನು ಫೆಬ್ರವರಿ 21 ರಂದು ಕಾಯ್ದಿರಿಸಿತ್ತು.

ಈ ವರ್ಷ ಪ್ರಕರಣದಲ್ಲಿ ಯಾವುದೇ ಮೌಖಿಕ ವಾದಗಳನ್ನು ಮಾಡದ ಕೇಂದ್ರವು 2017 ರ ಲಿಖಿತ ನಿಲುವನ್ನು ಅಂತಿಮವಾಗಿ ಪರಿಗಣಿಸಬಾರದು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದು, ಈ ವಿಷಯದ ಬಗ್ಗೆ ಮಧ್ಯಸ್ಥಗಾರರೊಂದಿಗೆ ಮೊದಲು ಸಮಾಲೋಚನೆ ನಡೆಸಲು ಬಯಸಿದೆ. ಆದಾಗ್ಯೂ, ವಿಭಾಗೀಯ ಪೀಠವು “ವಿಷಯವನ್ನು ಹೀಗೆ ಸ್ಥಗಿತಗೊಳಿಸಲು ಬಿಡುವುದಿಲ್ಲ” ಎಂದು ಹೇಳಿದ್ದು  ಸಮಾಲೋಚನೆ ಪ್ರಕ್ರಿಯೆಯು ಮುಂದುವರಿಸಬಹುದು ಎಂದು ಸರ್ಕಾರಕ್ಕೆ ಹೇಳಿದೆ.

ಇದನ್ನೂ ಓದಿ
Image
ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವ ಬಗ್ಗೆ ನಿಲುವು ಸ್ಪಷ್ಟಪಡಿಸಲು ಕಾಲಾವಕಾಶ ಕೇಳಿದ ಕೇಂದ್ರ; ದೆಹಲಿ ಹೈಕೋರ್ಟ್ ನಿರಾಕರಣೆ

ಫೆಬ್ರವರಿ 7 ರಂದು ನ್ಯಾಯಾಲಯವು 2015 ರಿಂದ ಬಾಕಿ ಉಳಿದಿರುವ ಈ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಲು ಕೇಂದ್ರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿತ್ತು. ಸರ್ಕಾರವು 2017 ರಲ್ಲಿ ಅರ್ಜಿಗಳಿಗೆ ಪ್ರತ್ಯುತ್ತರ ನೀಡಿವಿರೋಧಿಸಿದ್ದರೂ, ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗಿನ ವಿಷಯದ ಕುರಿತು ಅದರ ಸಮಾಲೋಚನೆಯ ಫಲಿತಾಂಶಕ್ಕಾಗಿ ಕಾಯಲು ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಜನವರಿಯಲ್ಲಿ ನ್ಯಾಯಾಲಯವನ್ನು ಕೇಳಿದೆ. ಸಮಾಲೋಚನೆ ನಡೆಸಿದ ನಂತರ ನ್ಯಾಯಾಲಯದ ಮುಂದೆ ಹೊಸ ನಿಲುವನ್ನು ದಾಖಲಿಸಲು ಬಯಸುವುದಾಗಿ ಸರ್ಕಾರ ಹೇಳಿತ್ತು. ಜನವರಿ 7 ಮತ್ತು ಫೆಬ್ರವರಿ 21,23ರ ನಡುವೆ ನ್ಯಾಯಾಲಯವು ಐಪಿಸಿಯ ಸೆಕ್ಷನ್ 376 ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಯಿಂದ ತಮ್ಮ ಹೆಂಡತಿಯರೊಂದಿಗೆ ಸಮ್ಮತಿಯಿಲ್ಲದ ಬಲವಂತದ ಸಂಭೋಗ ನಡೆಸುವ ಪುರುಷರನ್ನು ರಕ್ಷಿಸುವ ವಿನಾಯಿತಿ  ಪ್ರಶ್ನಿಸುವ ಅರ್ಜಿಗಳನ್ನು ಆಲಿಸಿತ್ತು.

Published On - 2:54 pm, Wed, 11 May 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ