ದೆಹಲಿ ಮದ್ಯ ನೀತಿ ಪ್ರಕರಣ: ಸಂಜಯ್ ಸಿಂಗ್​​ಗೆ ಇಡಿ ಕಸ್ಟಡಿ ಅ.13ರವರೆಗೆ ವಿಸ್ತರಣೆ

|

Updated on: Oct 10, 2023 | 5:07 PM

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರಿಗೆ ಅಕ್ಟೋಬರ್ 13 ರವರೆಗೆ ಇಡಿ (ಜಾರಿ ನಿರ್ದೇಶನಾಲಯ) ಕಸ್ಟಡಿಯನ್ನು ವಿಸ್ತರಿಸಿದೆ.

ದೆಹಲಿ ಮದ್ಯ ನೀತಿ ಪ್ರಕರಣ: ಸಂಜಯ್ ಸಿಂಗ್​​ಗೆ ಇಡಿ ಕಸ್ಟಡಿ ಅ.13ರವರೆಗೆ ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us on

ದೆಹಲಿ, ಅ.10: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರಿಗೆ ಅಕ್ಟೋಬರ್ 13 ರವರೆಗೆ ಇಡಿ (ಜಾರಿ ನಿರ್ದೇಶನಾಲಯ) ಕಸ್ಟಡಿಯನ್ನು ವಿಸ್ತರಿಸಿದೆ. ದೆಹಲಿ ಮದ್ಯ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಭಾಗವಾಗಿ ಸಂಜಯ್ ಸಿಂಗ್ ಅವರನ್ನು ಇಡಿ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. ಅಕ್ಟೋಬರ್​​ 4ರಂದು ಸಂಜಯ್ ಸಿಂಗ್ ಅವರ ಮನೆಯ ಮೇಲೆ ಕೇಂದ್ರ ತನಿಖಾ ಸಂಸ್ಥೆ ದಾಳಿ ಮಾಡಿತ್ತು. ಆ ದಿನವೇ ಸಂಜೆ ಅವರನ್ನು ಬಂಧಿಸಲಾಗಿತ್ತು. ಸಂಜಯ್ ಸಿಂಗ್ ನಮ್ಮ ತನಿಖೆಗೆ ಸಹಕಾರಿಸುತ್ತಿಲ್ಲ, ಹೀಗಾಗಿ ಹೆಚ್ಚಿನ ತನಿಖೆಗಾಗಿ ಅವರನ್ನು ಸ್ವಲ್ಪ ಸಮಯದ ವರೆಗೆ ಕಸ್ಟಡಿಗೆ ನೀಡಬೇಕು ಎಂದು ಇಡಿ 5 ದಿನಗಳ ಕಾಲಾವಕಾಶವನ್ನು ಕೋರ್ಟ್​​ ಮುಂದೆ ಕೇಳಿತ್ತು.

ಇನ್ನು ಇಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ಈಗಾಗಲೇ ರದ್ದಾದ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಸಂಜಯ್ ಸಿಂಗ್ ಪ್ರಮುಖ ಪಾತ್ರ ಇದೆ ಎಂದು ಹೇಳಿದೆ. ಈ ನೀತಿಗೆ ಸಂಬಂಧಿಸಿದಂತೆ ಸಂಜಯ್ ಸಿಂಗ್ ಅವರು ಮದ್ಯ ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಹಣ ಸ್ವೀಕರ ಮಾಡಿದ್ದಾರೆ ಎಂದು ಹೇಳಿದೆ.

ಈ ಪ್ರಕರಣದಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಂತರ ಬಂಧನವಾದ ಎರಡನೇ ವ್ಯಕ್ತಿ ಸಂಜಯ್​​ ಸಿಂಗ್. ರೆಸ್ಟೋರೆಂಟ್ ಮಾಲೀಕ ದಿನೇಶ್ ಅರೋರಾ ಸಿಂಗ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್​​ ಸಿಂಗ್​​ ಇಬ್ಬರಿಗೂ ಅಪ್ತರಾಗಿದ್ದರು. ಜುಲೈನಲ್ಲಿ, ದಿನೇಶ್ ಅರೋರಾ ಸಿಂಗ್​ನ್ನು ಬಂಧಿಸಲಾಗಿತ್ತು. ಇದರಲ್ಲಿ ಈ ಇಬ್ಬರು ಮನೀಶ್ ಸಿಸೋಡಿಯಾ ಮತ್ತು ಸಂಜಯ್​​ ಸಿಂಗ್​​ ಪಾತ್ರ ಇದೆ ಎಂದು ಇಡಿ ತಿಳಿಸಿದೆ.

ಇದನ್ನೂ ಓದಿ: ದೆಹಲಿಯ ಮದ್ಯ ನೀತಿ ಪ್ರಕರಣ: ಎಎಪಿಯ ಸಂಸದ ಸಂಜಯ್ ಸಿಂಗ್ ಬಂಧನ

2020ರ ದೆಹಲಿ ವಿಧಾನ ಸಭೆ ಚುನಾವಣೆಗೆ ಈ ರೀತಿಯಲ್ಲಿ ಎಎಪಿ ನಾಯಕರು ಹಣ ಸ್ವೀಕರ ಮಾಡಿದ್ದಾರೆ. ಇದರ ಜತೆಗೆ ಇಬ್ಬರು ನಡುವೆ ನಡೆದ ಫೋನ್​​ ಸಂಭಾಷಣೆ ಬಗ್ಗೆ ಇಡಿ ತನ್ನ ವರದಿಯಲ್ಲಿ ತಿಳಿಸಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಎಎಪಿ ನಡುವೆ ಭಾರೀ ಟೀಕೆಗಳನ್ನು ಉಂಟಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:10 pm, Tue, 10 October 23