AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivo ಅಕ್ರಮ ಹಣ ವರ್ಗಾವಣೆ ಪ್ರಕರಣ: ನಾಲ್ವರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ

ಗುವಾಂಗ್ವೆನ್ ಕ್ಯಾಂಗ್ ಅಲಿಯಾಸ್ ಆಂಡ್ರ್ಯೂ ಕುವಾಂಗ್ (ಚೀನೀ ಪ್ರಜೆ), ಹರಿ ಓಂ ರಾಯ್ (ಲಾವಾ ಇಂಟರ್‌ನ್ಯಾಶನಲ್‌ನ ವ್ಯವಸ್ಥಾಪಕ ನಿರ್ದೇಶಕ), ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಗಾರ್ಗ್ ಮತ್ತು ಇನ್ನೊಬ್ಬ ವ್ಯಕ್ತಿ ರಾಜನ್ ಮಲಿಕ್ ಎಂಬವರನ್ನು ಬಂಧಿಸಲಾಗಿದೆ. ಸಂಸ್ಥೆಯು ಕಳೆದ ವರ್ಷ ಜುಲೈ 5 ರಂದು ವಿವೋ ಮೊಬೈಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅದಕ್ಕೆ ಸಂಬಂಧಿಸಿದ 23 ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು.

Vivo ಅಕ್ರಮ ಹಣ ವರ್ಗಾವಣೆ ಪ್ರಕರಣ:  ನಾಲ್ವರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ
ವಿವೋ
ರಶ್ಮಿ ಕಲ್ಲಕಟ್ಟ
|

Updated on: Oct 10, 2023 | 4:59 PM

Share

ದೆಹಲಿ ಅಕ್ಟೋಬರ್ 10: ಚೀನಾದ ಮೊಬೈಲ್ ತಯಾರಕ ವಿವೋ (Vivo) ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಗೆ (money laundering) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಚೀನಾದ ಪ್ರಜೆ, ವ್ಯವಸ್ಥಾಪಕ ನಿರ್ದೇಶಕ ಮತ್ತು ಇತರ ಇಬ್ಬರು ಸೇರಿದಂತೆ ನಾಲ್ವರನ್ನು ಬಂಧಿಸಿದೆ ಎಂದು ಏಜೆನ್ಸಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಗುವಾಂಗ್ವೆನ್ ಕ್ಯಾಂಗ್ ಅಲಿಯಾಸ್ ಆಂಡ್ರ್ಯೂ ಕುವಾಂಗ್ (ಚೀನೀ ಪ್ರಜೆ), ಹರಿ ಓಂ ರಾಯ್ (ಲಾವಾ ಇಂಟರ್‌ನ್ಯಾಶನಲ್‌ನ ವ್ಯವಸ್ಥಾಪಕ ನಿರ್ದೇಶಕ), ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಗಾರ್ಗ್ ಮತ್ತು ಇನ್ನೊಬ್ಬ ವ್ಯಕ್ತಿ ರಾಜನ್ ಮಲಿಕ್ ಎಂಬವರನ್ನು ಬಂಧಿಸಲಾಗಿದೆ.

ಸಂಸ್ಥೆಯು ಕಳೆದ ವರ್ಷ ಜುಲೈ 5 ರಂದು ವಿವೋ ಮೊಬೈಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅದಕ್ಕೆ ಸಂಬಂಧಿಸಿದ 23 ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು.

ಆ ಸಮಯದಲ್ಲಿ, ವಿವೋ, GPICPL (M/s ಗ್ರಾಂಡ್ ಪ್ರಾಸ್ಪೆಕ್ಟ್ಸ್ ಇಂಟರ್ನ್ಯಾಷನಲ್ ಕಮ್ಯುನಿಕೇಷನ್ ಪ್ರೈ. ಲಿಮಿಟೆಡ್) ಗೆ ಸಂಬಂಧಿಸಿದ ಕಂಪನಿಯು ಡಿಸೆಂಬರ್ 3, 2014 ರಂದು ROC ಶಿಮ್ಲಾದಲ್ಲಿ ಸೋಲನ್, ಹಿಮಾಚಲ ಪ್ರದೇಶ ಮತ್ತು ಗಾಂಧಿನಗರ, ಜಮ್ಮುವಿನ ನೋಂದಾಯಿತ ವಿಳಾಸಗಳೊಂದಿಗೆ ನೋಂದಾಯಿಸಲ್ಪಟ್ಟಿದೆ ಎಂದು ಇಡಿ ಹೇಳಿತ್ತು.

ಸಿಎ ಆಗಿರುವ ನಿತಿನ್ ಗಾರ್ಗ್ ಅವರ ಸಹಾಯದಿಂದ ಚೀನಾದ ಪ್ರಜೆಗಳಾದ ಝೆಂಗ್‌ಶೆನ್ ಔ, ಬಿನ್ ಲೌ ಮತ್ತು ಜಾಂಗ್ ಜೀ ಅವರು ಈ ಕಂಪನಿಯನ್ನು ಸಂಯೋಜಿಸಿದ್ದಾರೆ. ಬಿನ್ ಲೌ ಅವರು ಏಪ್ರಿಲ್ 26, 2018 ರಂದು ಭಾರತವನ್ನು ತೊರೆದಿದ್ದು ಝೆಂಗ್‌ಶೆನ್ ಔ ಮತ್ತು ಜಾಂಗ್ ಜೀ ಅವರು 2021 ರಲ್ಲಿ ಭಾರತವನ್ನು ತೊರೆದರು.

ಸಲ್ಲಿಸಿದ ದೂರಿನ ಆಧಾರದ ಮೇಲೆ M/s ಗ್ರಾಂಡ್ ಪ್ರಾಸ್ಪೆಕ್ಟ್ ಇಂಟರ್‌ನ್ಯಾಶನಲ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್ (ಇಲ್ಲಿ M/s GPICPL ಎಂದು ಉಲ್ಲೇಖಿಸಲಾಗಿದೆ) ಮತ್ತು ಅದರ ನಿರ್ದೇಶಕರು, ಷೇರುದಾರರು ಮತ್ತು ಪ್ರಮಾಣೀಕರಿಸುವ ವೃತ್ತಿಪರರು ಇತ್ಯಾದಿಗಳ ವಿರುದ್ಧ 2021 ರಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸ್ ಕೇಸ್ ದಾಖಲೆಗಳನ್ನು ಆಧರಿಸಿ ಇಡಿ ಯಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಎಫ್ಐಆರ್ ಪ್ರಕಾರ, ಜಿಪಿಐಸಿಪಿಎಲ್‌ ಮತ್ತು ಅದರ ಷೇರುದಾರರು ಸಂಯೋಜನೆಯ ಸಮಯದಲ್ಲಿ ನಕಲಿ ಗುರುತಿನ ದಾಖಲೆಗಳು ಮತ್ತು ಸುಳ್ಳು ವಿಳಾಸಗಳನ್ನು ಬಳಸಿದ್ದಾರೆ.

ಇದನ್ನೂ ಓದಿ:  ದೆಹಲಿ ಮದ್ಯ ನೀತಿ ಪ್ರಕರಣ: ಸಂಜಯ್ ಸಿಂಗ್​​ಗೆ ಇಡಿ ಕಸ್ಟಡಿ ಅ.13ರವರೆಗೆ ವಿಸ್ತರಣೆ

ನಿರ್ದೇಶಕರು ಉಲ್ಲೇಖಿಸಿರುವ ವಿಳಾಸಗಳು ಅವರಿಗೆ ಸೇರಿದ್ದಲ್ಲ, ಆದರೆ ವಾಸ್ತವವಾಗಿ ಇದು ಸರ್ಕಾರಿ ಕಟ್ಟಡ ಮತ್ತು ಹಿರಿಯ ಅಧಿಕಾರಿಯ ಮನೆ ಎಂದು ತನಿಖೆಯಿಂದ ತಿಳಿದುಬಂದಿದ್ದರಿಂದ ಆರೋಪಗಳು ನಿಜವೆಂದು ಕಂಡುಬಂದಿದೆ ಎಂದು ಇಡಿ ಕಳೆದ ವರ್ಷ ಹೇಳಿಕೆಯಲ್ಲಿ ತಿಳಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ