Heatwave: ಭಾರತದಲ್ಲಿ ಬೇಸಿಗೆಯ ಧಗೆ ಹೆಚ್ಚಳ; ಏಪ್ರಿಲ್‌ನಿಂದ ಜೂನ್‌ವರೆಗೆ ಬಿಸಿಲಿಗೆ ಮೈಯೊಡ್ಡುವ ಮುನ್ನ ಎಚ್ಚರ!
ಏಪ್ರಿಲ್-ಜೂನ್ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗಲಿದ್ದು, ಹಲವು ರಾಜ್ಯಗಳಲ್ಲಿ ಹೆಚ್ಚಿನ ಬಿಸಿಲಿನ ದಿನಗಳು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಏಪ್ರಿಲ್ ನಿಂದ ಜೂನ್ ತಿಂಗಳವರೆಗೆ ಭಾರತವು ಸಾಮಾನ್ಯಕ್ಕಿಂತ ಹೆಚ್ಚಿನ ಬೇಸಿಗೆಯನ್ನು ಅನುಭವಿಸಲಿದೆ. ಅದರಲ್ಲೂ ವಿಶೇಷವಾಗಿ ಮಧ್ಯ, ಪೂರ್ವ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಶಾಖದ ಅಲೆಯ ದಿನಗಳು ತೀವ್ರವಾಗಿ ಏರಿಕೆಯಾಗಲಿವೆ ಎಂದು ಐಎಂಡಿ ಎಚ್ಚರಿಸಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ.

ನವದೆಹಲಿ, ಮಾರ್ಚ್ 31: ಏಪ್ರಿಲ್‌ನಿಂದ ಜೂನ್ ತಿಂಗಳವರೆಗೆ ಉತ್ತರ ಮತ್ತು ಪೂರ್ವ ಭಾರತದ ಹೆಚ್ಚಿನ ಭಾಗಗಳು, ಮಧ್ಯ ಭಾರತ ಮತ್ತು ವಾಯುವ್ಯ ಭಾರತದ ಬಯಲು ಪ್ರದೇಶಗಳು ಸಾಮಾನ್ಯಕ್ಕಿಂತ 2ರಿಂದ 4 ಹೆಚ್ಚು ಉಷ್ಣ ಅಲೆಯ (Heatwave) ದಿನಗಳನ್ನು ಅನುಭವಿಸುವ ನಿರೀಕ್ಷೆಯಿದೆ. ಸಾಮಾನ್ಯವಾಗಿ, ಏಪ್ರಿಲ್ ನಿಂದ ಜೂನ್ ವರೆಗೆ ಭಾರತದಲ್ಲಿ 4ರಿಂದ 7 ಶಾಖದ ಅಲೆಯ ದಿನಗಳು ದಾಖಲಾಗುತ್ತವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಇಂದು ಏಪ್ರಿಲ್ ಮತ್ತು ಜೂನ್ ನಡುವೆ ಭಾರತದಲ್ಲಿ ಬೇಸಿಗೆಯ ಬಿಸಿಲಿನ ಸ್ಥಿತಿಯ ಬಗ್ಗೆ ಎಚ್ಚರಿಸಿದೆ. ಹೀಗಾಗಿ, ನಾಳೆಯಿಂದ ಜೂನ್ ತಿಂಗಳವರೆಗೆ ದೇಶದಲ್ಲಿ ಶಾಖದ ಅಲೆಯ ದಿನಗಳು ಬಹುತೇಕ ದ್ವಿಗುಣಗೊಳ್ಳುತ್ತವೆ.
“ಏಪ್ರಿಲ್‌ನಿಂದ ಜೂನ್‌ವರೆಗೆ, ಉತ್ತರ ಮತ್ತು ಪೂರ್ವ ಭಾರತದ ಹೆಚ್ಚಿನ ಭಾಗಗಳು, ಮಧ್ಯ ಭಾರತ ಮತ್ತು ವಾಯುವ್ಯ ಭಾರತದ ಬಯಲು ಪ್ರದೇಶಗಳು ಸಾಮಾನ್ಯಕ್ಕಿಂತ ಎರಡರಿಂದ ನಾಲ್ಕು ಹೆಚ್ಚು ಶಾಖದ ಅಲೆಯ ದಿನಗಳನ್ನು ಅನುಭವಿಸುವ ನಿರೀಕ್ಷೆಯಿದೆ” ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಸಾಮಾನ್ಯವಾಗಿ, ಈ ಅವಧಿಯಲ್ಲಿ ಭಾರತವು 4ರಿಂದ 7 ಶಾಖದ ಅಲೆಯ ದಿನಗಳನ್ನು ದಾಖಲಿಸುತ್ತದೆ. ಆದರೆ ಮುಂಬರುವ ಬೇಸಿಗೆಯಲ್ಲಿ ಹಲವಾರು ಪ್ರದೇಶಗಳಲ್ಲಿ ಆ ಸಂಖ್ಯೆಯು ದ್ವಿಗುಣಗೊಳ್ಳಬಹುದು ಎನ್ನಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದಿನ 5 ದಿನಗಳವರೆಗೆ ತೀವ್ರ ಶಾಖದ ಅಲೆ: ಹವಾಮಾನ ಇಲಾಖೆ ಎಚ್ಚರಿಕೆ
ವಾಯುವ್ಯ ಭಾರತವು ಸಾಮಾನ್ಯ ಸಂಖ್ಯೆಯ 2 ಪಟ್ಟು ಹೆಚ್ಚು ಶಾಖದ ಅಲೆಯ ದಿನಗಳನ್ನು ಎದುರಿಸಬಹುದು ಎಂದು ಐಎಂಡಿಯ ಈಗಾಗಲೇ ಎಚ್ಚರಿಸಿತ್ತು. ತೀವ್ರ ಶಾಖದ ಹೊರೆಯನ್ನು ಭರಿಸುವ ನಿರೀಕ್ಷೆಯಿರುವ ರಾಜ್ಯಗಳಲ್ಲಿ ರಾಜಸ್ಥಾನ, ಗುಜರಾತ್, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಢ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಉತ್ತರ ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಭಾಗಗಳು ಸೇರಿವೆ. ಏಪ್ರಿಲ್‌ನಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಕಂಡುಬರುವ ಸಾಧ್ಯತೆಯಿದೆ. ದಕ್ಷಿಣ ಮತ್ತು ವಾಯುವ್ಯ ಭಾಗಗಳಲ್ಲಿ ಕೆಲವೇ ಪ್ರದೇಶಗಳು ಮಾತ್ರ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸುವ ನಿರೀಕ್ಷೆಯಿದೆ.
ಹೆಚ್ಚುತ್ತಿರುವ ತಾಪಮಾನವು ವಿದ್ಯುತ್ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ನಿರೀಕ್ಷಿತ ಶಾಖದ ಉಲ್ಬಣದೊಂದಿಗೆ ತಜ್ಞರು ವಿದ್ಯುತ್ ಬೇಡಿಕೆಯಲ್ಲಿ ಅನುಗುಣವಾದ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬೇಸಿಗೆಯ ತಿಂಗಳುಗಳಲ್ಲಿ ಬೇಡಿಕೆ ಶೇ. 9ರಿಂದ 10ರಷ್ಟು ಹೆಚ್ಚಾಗಬಹುದು ಎಂದು ಹವಾಮಾನ ಮುನ್ಸೂಚನೆಗಳು ಸೂಚಿಸುತ್ತವೆ.
ಇದನ್ನೂ ಓದಿ: ಕುಟುಂಬದ ಜೊತೆ ಬೇಸಿಗೆ ರಜೆ ಕಳೆಯಲು ಈ ತಾಣಗಳೇ ಬೆಸ್ಟ್!
ವಾಯುವ್ಯ ಮತ್ತು ಈಶಾನ್ಯದ ಕೆಲವು ಸ್ಥಳಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ, ಅಲ್ಲಿ ತಾಪಮಾನವು ಸಾಮಾನ್ಯ ಅಥವಾ ಸ್ವಲ್ಪ ಕಡಿಮೆ ಇರಬಹುದು. ಈ ಬೇಸಿಗೆಯಲ್ಲಿ ಭಾರತವು ಶೇ. 9ರಿಂದ 10ರಷ್ಟು ಗರಿಷ್ಠ ವಿದ್ಯುತ್ ಬೇಡಿಕೆ ಬೆಳವಣಿಗೆಗೆ ಸಿದ್ಧವಾಗಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. ದೇಶವು ಹೆಚ್ಚಿನ ಸಂಖ್ಯೆಯ ಶಾಖದ ಅಲೆಯ ದಿನಗಳನ್ನು ಅನುಭವಿಸುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ