ದೃಷ್ಟಿ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ ಸಂಸದ ರಾಘವ್ ಚಡ್ಡಾ

|

Updated on: Apr 30, 2024 | 2:17 PM

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಬಂಧನದ ಬಳಿಕ ಸಂಸದ ರಾಘವ್​ ಚಡ್ಡಾ ನಾಪತ್ತೆಯಾಗಿದ್ದಾರೆ ಎನ್ನುವ ಪ್ರತಿಪಕ್ಷಗಳ ಟೀಕೆಗಳಿಗೆ ಇಂದು ತೆರೆ ಬಿದ್ದಿದೆ. ರಾಘವ್​ ಚಡ್ಡಾ ಅವರು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿರುವುದಿಂದ ಬ್ರಿಟನ್​ಗೆ ತೆರಳಿದ್ದಾರೆ, ಅವರು ದೃಷ್ಟಿ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ಹೇಳಿದರು.

ದೃಷ್ಟಿ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ ಸಂಸದ ರಾಘವ್ ಚಡ್ಡಾ
ರಾಘವ್ ಚಡ್ಡಾ
Follow us on

ಆಮ್​ಆದ್ಮಿ ಪಕ್ಷದ ಸಂಸದ ರಾಘವ್​ ಚಡ್ಡಾ(Raghav Chadha) ದೃಷ್ಟಿ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ ಎಂದು ದೆಹಲಿ ಸಚಿವ ಸೌರಭ್​ ಭಾರದ್ವಾಜ್ ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದಾಗಿನಿಂದ, ಆಮ್​ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಕಾಣೆಯಾಗಿದ್ದಾರೆ ಎಂದು ಪ್ರತಿಪಕ್ಷಗಳು ಆಗಾಗ ದಾಳಿ ನಡೆಸುತ್ತಿವೆ.

ಈ ಕುರಿತು ಸ್ಪಷ್ಟನೆ ನೀಡಿರುವ ಸೌರಭ್​, ರಾಘವ್​  ಕಣ್ಣಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದು  ಬ್ರಿಟನ್​ನಲ್ಲಿದ್ದಾರೆ ಎಂದರು. ರಾಘವ್​ ದೃಷ್ಟಿಯಲ್ಲಿ ಸ್ವಲ್ಪ ಸಮಸ್ಯೆ ಇದೆ, ತುಂಬಾ ಗಂಭೀರ ಕಾಯಿಲೆಯಾಗಿದ್ದು, ಅವರು ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಅದಕ್ಕಾಗಿಯೇ ಅವರು ಚಿಕಿತ್ಸೆಗಾಗಿ ಅಲ್ಲಿಗೆ ಹೋಗಿದ್ದಾರೆ.

ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ, ರಾಜಕೀಯಕ್ಕೆ ಮರಳುತ್ತಾರೆ ಎಂದು ಹೇಳಿದ್ದಾರೆ. ರಾಘವ್ ಚಡ್ಡಾ ಗಂಭೀರ ಕಣ್ಣಿನ ಕಾಯಿಲೆ, ರೆಟಿನಾ ಡಿಟ್ಯಾಚ್‌ಮೆಂಟ್‌ನಿಂದ ಬಳಲುತ್ತಿದ್ದಾರೆ. ಇದಕ್ಕೂ ಮೊದಲು ಸೌರಭ್ ಭಾರದ್ವಾಜ್ ಅವರನ್ನು ರಾಘವ್ ಚಡ್ಡಾ ನಿಮ್ಮೊಂದಿಗೆ ಇದ್ದಾರಾ ಅಥವಾ ಇಲ್ಲವೇ ಎನ್ನುವ ಪ್ರಶ್ನೆ ಕೇಳಲಾಯಿತು.

ಮತ್ತಷ್ಟು ಓದಿ: MP Raghav Chadha: ರಾಜ್ಯಸಭೆಯಲ್ಲಿ ಎಎಪಿ ಪಕ್ಷದ ನಾಯಕನಾಗಿ ಸಂಸದ ರಾಘವ್ ಚಡ್ಡಾ ನೇಮಕ

ಅದಕ್ಕೆ ಸೌರಭ್​ ಮಾತನಾಡಿ, ಅವರು ನಮ್ಮೊಂದಿಗಿಲ್ಲ ಎಂದು ನಿಮಗೆ ಯಾರು ಹೇಳಿದ್ದು, ಅವರು ನಮ್ಮ ಜತೆ ಇಲ್ಲದಿದ್ದರೆ ಇಷ್ಟೊತ್ತಿಗೆ ಬಿಜೆಪಿ ಅವರನ್ನು ಎಲ್ಲೋ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುತ್ತಿತ್ತು ಎಂದರು. ರಾಘವ್ ಚಡ್ಡಾ ವಿರುದ್ಧ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಯೂಟ್ಯೂಬ್ ಚಾನೆಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ .

ಯೂಟ್ಯೂಬ್ ಚಾನೆಲ್ ವಿರುದ್ಧ ಲೂಧಿಯಾನ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಲೂಧಿಯಾನ ಲೋಕಸಭಾ ಕ್ಷೇತ್ರದ ಆಪ್ ಅಭ್ಯರ್ಥಿ ಅಶೋಕ್ ಪಪ್ಪಿ ಪರಾಶರ್ ಅವರ ಪುತ್ರ ವಿಕಾಸ್ ಪರಾಶರ್ ಅವರ ದೂರಿನ ಮೇರೆಗೆ ಕ್ಯಾಪಿಟಲ್ ಟಿವಿ ಹೆಸರಿನ ಯೂಟ್ಯೂಬ್ ಚಾನೆಲ್ ವಿರುದ್ಧ ಲೂಧಿಯಾನದ ಶಿಮ್ಲಾಪುರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ