
ನವದೆಹಲಿ, ಜೂನ್ 27: ಈಶಾನ್ಯ ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ (Earthquake) ಭೀಕರತೆಗೆ ಭಾರತದ ರಾಜಧಾನಿ ದೆಹಲಿ ಸೇರಿದಂತೆ ಇಡೀ ಉತ್ತರ ಭಾರತದಾದ್ಯಂತ ಶನಿವಾರ ಸಂಜೆ ತೀವ್ರ ಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 6.2 ರಷ್ಟು ತೀವ್ರತೆ ದಾಖಲಾಗಿದೆ. ದೆಹಲಿ, ಎನ್‌ಸಿಆರ್ ವ್ಯಾಪ್ತಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ಸೆಕೆಂಡುಗಳ ಕಾಲ ಭೂಮಿ ತೀವ್ರವಾಗಿ ಕಂಪಿಸಿದೆ. ಇದರಿಂದ ಆತಂಕಗೊಂಡ ಜನರು ತಕ್ಷಣ ಮನೆಯಿಂದ ಆಚೆ ಓಡಿಬಂದಿದ್ದಾರೆ.
ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ (NCS) ಮಾಹಿತಿ ಪ್ರಕಾರ, ಭೂಕಂಪನದ ಕೇಂದ್ರಬಿಂದು ಈಶಾನ್ಯ ಅಫ್ಘಾನಿಸ್ತಾನದ ಕಲಾಫ್ಗನ್‌ನಿಂದ ಸುಮಾರು 81 ಕಿ.ಮೀ ದೂರದಲ್ಲಿದ್ದು, ಭೂಮಿಯ ಆಳದಲ್ಲಿ ಅಂದರೆ ಸುಮಾರು 215 ಕಿ.ಮೀ ಆಳದಲ್ಲಿ ಸೃಷ್ಟಿಯಾಗಿದೆ.
#WATCH | J&K: Earthquake tremors felt in Srinagar and other parts of the region after an earthquake of magnitude 6.2 on the Richter scale occurred in Afghanistan. https://t.co/PRjYYF7S8G pic.twitter.com/93F1AOsalZ
— ANI (@ANI) June 27, 2026
ಭೂಕಂಪನದ ತೀವ್ರತೆ ಹೆಚ್ಚಿದ್ದು ಮತ್ತು ಭೂಮಿಯ ಆಳದಲ್ಲಿ ಸಂಭವಿಸಿದರ ಪರಿಣಾಮ ಭಾರತ ಮಾತ್ರವಲ್ಲದೆ ನೆರೆಯ ಪಾಕಿಸ್ತಾನ, ಚೀನಾ, ತಜಿಕಿಸ್ತಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ತುರ್ಕಮೆನಿಸ್ತಾನ ಸೇರಿದಂತೆ ಒಟ್ಟು ಎಂಟು ದೇಶಗಳ ವ್ಯಾಪ್ತಿಯಲ್ಲಿ ಭೂಕಂಪನದ ತೀವ್ರ ಅನುಭವವಾಗಿದೆ.
ಇನ್ನು ಜಮ್ಮು ಕಾಶ್ಮೀರ ಹಾಗೂ ದೆಹಲಿಯ ಹಲವೆಡೆ ಕಟ್ಟಡಗಳ ಕಂಪನ ಕಂಡು ಜನರು ಗಾಬರಿಗೊಂಡರು. ಸದ್ಯದ ಪ್ರಾಥಮಿಕ ವರದಿಗಳ ಪ್ರಕಾರ, ಉತ್ತರ ಭಾರತದ ಯಾವುದೇ ಭಾಗದಲ್ಲಿ ಪ್ರಾಣಾಪಾಯ ಅಥವಾ ಭಾರೀ ಆಸ್ತಿಪಾಸ್ತಿ ನಷ್ಟ ಸಂಭವಿಸಿದ ಕುರಿತು ವರದಿ ಆಗಿಲ್ಲ. ಆದಾಗ್ಯೂ, ದೆಹಲಿ ಮತ್ತು ಜಮ್ಮು ಕಾಶ್ಮೀರದ ವಿಪತ್ತು ನಿರ್ವಹಣಾ ತಂಡಗಳು ಹಾಗೂ ಸ್ಥಳೀಯ ಆಡಳಿತ ಹೈ ಅಲರ್ಟ್ ಆಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಗಣಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.