Delhi Chalo ಬೆಂಬಲಿಸಿ ರಾಷ್ಟ್ರಪತಿ ಭೇಟಿಗೆ ತೆರಳಿದ ನಿಯೋಗ; ಪ್ರಿಯಾಂಕಾ ಗಾಂಧಿ ವಶಕ್ಕೆ ಪಡೆದು, ಬಿಡುಗಡೆ
ನೂತನ ಕೃಷಿ ಕಾಯ್ದೆಗಳನ್ನು ವಿರುದ್ಧ ಎರಡು ಕೋಟಿ ಸಹಿ ಸಂಗ್ರಹಿಸಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ರಿಗೆ ಸಲ್ಲಿಸಲು ಹೊರಟಿದ್ದ ಕಾಂಗ್ರೆಸ್ ನಿಯೋಗದ ಪ್ರಿಯಾಂಕಾ ಗಾಂಧಿ ಮತ್ತು ಇತರ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದಾರೆ.
ದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ಎರಡು ಕೋಟಿ ಸಹಿ ಸಂಗ್ರಹಿಸಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ರಿಗೆ ಸಲ್ಲಿಸಲು ಹೊರಟಿದ್ದ ಕಾಂಗ್ರೆಸ್ ನಿಯೋಗದ ಪ್ರಿಯಾಂಕಾ ಗಾಂಧಿ ಮತ್ತು ಇತರ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದಾರೆ.
ಪ್ರತಿಭಟನಾ ಱಲಿಗೆ ಅನುಮತಿ ನೀಡಿರಲಿಲ್ಲ. ಆದರೂ ಕಾಂಗ್ರೆಸ್ ನಿಯೋಗ ಱಲಿ ಮೂಲಕ ತೆರಳುತ್ತಿದ್ದರು. ಹೀಗಾಗಿ, ಪ್ರಿಯಾಂಕಾ ಗಾಂಧಿ ಸೇರಿ ಇತರರನ್ನು ವಶಕ್ಕೆ ಪಡೆಯಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ವಿರೋಧಿಸುವವರೆಲ್ಲ ಭಯೋತ್ಪಾದಕರೆಂದು ಬಿಂಬಿಸಲಾಗುತ್ತಿದೆ ಸರ್ಕಾರದ ನಿರ್ಣಯಗಳ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರನ್ನು ಭಯೋತ್ಪಾದರೆಂದು ಬಿಂಬಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಳವಳಿ ನಿರತ ರೈತರನ್ನು ದೇಶದ್ರೋಹಿಗಳೆಂದು ಕರೆಯಲಾಗುತ್ತಿದೆ.ಚಳವಳಿ ನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಮೆರವಣಿಗೆ ಆಯೋಜಿಸಿದ್ದೆವು. ಪ್ರಜಾಪ್ರಭುತ್ವ ಪದ್ಧತಿಯಿಂದಲೇ ಆಯ್ಕೆಯಾದ ಸಂಸದರಿದ್ದ ನಿಯೋಗವನ್ನು ರಾಷ್ಟ್ರಪತಿಗಳ ಭೇಟಿಯಿಂದ ತಡೆಹಿಡಿಯಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಅವರು ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.
ರಾಷ್ಟ್ರಪತಿ ಭವನ ತಲುಪಿದ ರಾಹುಲ್ ಗಾಂಧಿ ನಿಯೋಗದಲ್ಲಿ ರಾಹುಲ್ ಗಾಂಧಿ, ಗುಲಾಂ ನಬೀ ಆಜಾದ್ ಮತ್ತಿತರ ನಾಯಕರು ರಾಷ್ಟ್ರಪತಿ ಭವನ ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಂಡವಾಳಶಾಹಿಗಳ ಪರ ನಿಂತು ಚಳವಳಿ ನಿರತ ರೈತರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಿದ್ದಾರೆ.
ಆದರೆ, ವಿಪಕ್ಷಗಳು ರೈತರ ಪರ ಸದಾ ನಿಲ್ಲಲಿವೆ. ರಾಷ್ಟ್ರಪತಿಗಳ ಬಳಿ ‘ನೂತನ ಕೃಷಿ ಕಾಯ್ದೆಗಳು ರೈತರಿಗೆ ತೊಂದರೆ ಉಂಟುಮಾಡಲಿವೆ. ಇಡೀ ದೇಶದ ರೈತರೇ ಈ ಕಾಯ್ದೆಗಳ ವಿರುದ್ಧ ಬಂಡೆದಿದ್ದಾರೆ’ ಎಂದು ತಿಳಿಸಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು.
Published On - 12:42 pm, Thu, 24 December 20