ಜಮ್ಮು ಕಾಶ್ಮೀರದ ಅವಂತಿಪುರದಲ್ಲಿ ನಾಲ್ವರು ಉಗ್ರರ ಸೆರೆ

ಹುಲ್ಲಿನಲ್ಲಿ ಬಚ್ಚಿಟ್ಟಿದ್ದ ಎಕೆ 56 ರೈಫಲ್, ಎಕೆ 56 ಮ್ಯಾಗಜಿನ್ 28 ರೌಂಡ್ ಗುಂಡು, ಹಾಗೂ ಒಂದು ಗ್ರೆನೇಡ್ನನ್ನು ಭದ್ರತಾಪಡೆ ವಶಕ್ಕೆ ಪಡೆದುಕೊಂಡಿದೆ.

ಜಮ್ಮು ಕಾಶ್ಮೀರದ ಅವಂತಿಪುರದಲ್ಲಿ ನಾಲ್ವರು ಉಗ್ರರ ಸೆರೆ
ಶಸ್ತ್ರಾಸ್ತ್ರಗಳನ್ನು ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆದ ಭದ್ರತಾಪಡೆ
sandhya thejappa

| Edited By: sadhu srinath

Dec 24, 2020 | 1:26 PM

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪುರದಲ್ಲಿ ನಾಲ್ಕು ಉಗ್ರರನ್ನು ಪೊಲೀಸರು ಬಂಧಿಸಿ, ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ದಾದ್ಸರಾ ಮತ್ತು ಅವಂತಿಪುರದ ಲಾರ್ಮೋ ಗ್ರಾಮಗಳಲ್ಲಿ ಆಲ್ ಬದರ್ ಸಂಘಟನೆಯ ನಾಲ್ವರು ಉಗ್ರರು ಇದ್ದಾರೆಂಬ ಮಾಹಿತಿ ಆಧಾರದ ಮೇಲೆ 42RR ಮತ್ತು 130 BN CRPF ನೆರವಿನೊಂದಿಗೆ ಪೊಲೀಸ್ ತಂಡ ನಿನ್ನೆ ರಾತ್ರಿಯಿಂದ ಶೋಧ ಕಾರ್ಯಚರಣೆಯನ್ನು ಪ್ರಾರಂಭಿಸಿ ಇದೀಗ ಸೆರೆ ಹಿಡಿದಿದ್ದಾರೆ.

ಅಲ್ಲದೇ ಉಗ್ರರನ್ನು ಸೆರೆ ಹಿಡಿದ ಬಳಿಕ ವಿಚಾರ ನಡೆಸಿ ಹುಲ್ಲಿನಲ್ಲಿ ಬಚ್ಚಿಟ್ಟಿದ್ದ ಎಕೆ 56 ರೈಫಲ್, ಎಕೆ 56 ಮ್ಯಾಗಜಿನ್ 28 ರೌಂಡ್ ಗುಂಡು, ಹಾಗೂ ಒಂದು ಗ್ರೆನೇಡ್ನನ್ನು ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿದೆ.

ದೆಹಲಿಯಲ್ಲಿ ಇಬ್ಬರು ಶಂಕಿತ ಉಗ್ರಗಾಮಿಗಳ ಬಂಧನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada