ದೆಹಲಿ ಮಳೆಗೆ ಮನೆಗೆ ನುಗ್ಗಿದ ನೀರು, ಎಸ್​​ಪಿ ಸಂಸದರನ್ನು ಎತ್ತಿಕೊಂಡು ಕಾರಿನಲ್ಲಿ ಕುಳ್ಳಿರಿಸಿದ ಸಿಬ್ಬಂದಿ: ವಿಡಿಯೋ ನೋಡಿ

ದೆಹಲಿಯಲ್ಲಿ ಮೊದಲ ಮಳೆಯೇ ಸಂಕಷ್ಟ ತಂದಿದೆ. ರಾಜಧಾನಿಯ ಐಷಾರಾಮಿ ಏರಿಯಾಗಳಲ್ಲಿ ವಾಸವಾಗಿರುವ ರಾಜಕೀಯ ಮುಖಂಡರು, ಮಂತ್ರಿಗಳೂ ಪ್ರವಾಹದ ಸಮಸ್ಯೆ ಎದುರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಎಸ್​ಪಿ ಸಂಸದ ರಾಮ್ ಗೋಪಾಲ್ ಯಾದವ್ ಮನೆಗೆ ನೀರು ನುಗ್ಗಿದ ಪರಿಣಾಮ ಅವರನ್ನು ಸಿಬ್ಬಂದಿ ಹೆಗಲಲ್ಲಿ ಎತ್ತಿಕೊಂಡು ಕಾರಿನಲ್ಲಿ ಕೂರುವಂತೆ ಮಾಡಬೇಕಾಯಿತು. ವಿಡಿಯೋ ಇಲ್ಲಿದೆ ನೋಡಿ.

ದೆಹಲಿ ಮಳೆಗೆ ಮನೆಗೆ ನುಗ್ಗಿದ ನೀರು, ಎಸ್​​ಪಿ ಸಂಸದರನ್ನು ಎತ್ತಿಕೊಂಡು ಕಾರಿನಲ್ಲಿ ಕುಳ್ಳಿರಿಸಿದ ಸಿಬ್ಬಂದಿ: ವಿಡಿಯೋ ನೋಡಿ
ಎಸ್​​ಪಿ ಸಂಸದರನ್ನು ಎತ್ತಿಕೊಂಡು ಕಾರಿನಲ್ಲಿ ಕುಳ್ಳಿರಿಸಿದ ಸಿಬ್ಬಂದಿ (ವಿಡಿಯೋ ಸ್ಕ್ರೀನ್​​ಗ್ರ್ಯಾಬ್)Image Credit source: ANI
Follow us
|

Updated on:Jun 28, 2024 | 11:46 AM

ನವದೆಹಲಿ, ಜೂನ್ 28: ದೆಹಲಿಯಲ್ಲಿ ಸುರಿದ ಮೊದಲ ಮಳೆ ಸಾರ್ವಜನಿಕರಿಗೆ ಮತ್ತು ಗಣ್ಯ ವ್ಯಕ್ತಿಗಳಿಗೂ ತೊಂದರೆ ಕೊಟ್ಟಿದೆ. ದೆಹಲಿಯ ಅತ್ಯಂತ ಐಷಾರಾಮಿ ಪ್ರದೇಶಗಳಲ್ಲಿ ವಾಸಿಸುವ ರಾಜಕೀಯ ನಾಯಕರನ್ನೂ ಮಳೆಯ ಅಬ್ಬರ ಬಿಟ್ಟಿಲ್ಲ. ಶುಕ್ರವಾರ ಬೆಳಗ್ಗೆ ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಅವರ ಮನೆಗೂ ನೀರು ನುಗ್ಗಿದ್ದು, ಮನೆಯ ಆವರಣ ಜಲಾವೃತಗೊಂಡಿತು. ಸಂಸತ್ತಿಗೆ ತೆರಳಲು ಹೊರಟಿದ್ದ ಅವರನ್ನು ಬಳಿಕ ಸಿಬ್ಬಂದಿಯು ಎತ್ತಿಕೊಂಡು ಹೋಗಿ ಕಾರಿನಲ್ಲಿ ಕುಳ್ಳಿರಿಸಬೇಕಾಯಿತು.

ಸಂಸತ್ ಅಧಿವೇಶನದ ಕಾರಣ ರಾಮ್ ಗೋಪಾಲ್ ಅವರು ಸಂಸತ್ತಿಗೆ ತೆರಳಲು ಮನೆಯಿಂದ ಹೊರಟಿದ್ದು, ಅಷ್ಟರಲ್ಲಿ ಮನೆಯೊಳಗೆ ಮತ್ತು ಹೊರಭಾಗದಲ್ಲೆಲ್ಲ ನೀರು ತುಂಬಿತ್ತು. ಬಳಿಕ ಅವರ ಸಿಬ್ಬಂದಿ ಅವರನ್ನು ತೋಳುಗಳಲ್ಲಿ ಎತ್ತಿಕೊಂಡು ಸಾಗಿಸಬೇಕಾಯಿತು. ನೌಕರರು ಅವರನ್ನು ಎತ್ತಿಕೊಂಡು ಕರೆತಂದು ಕಾರಿನಲ್ಲಿ ಕೂರಿಸಿದರು. ಇದಾದ ನಂತರ ರಾಮ್ ಗೋಪಾಲ್ ಯಾದವ್ ಸಂಸತ್ತಿಗೆ ತೆರಳಿದರು.

ಸಂಸದರನ್ನು ಹೆಗಲಿನಲ್ಲಿ ಎತ್ತಿಕೊಂಡು ಹೋಗುತ್ತಿರುವ ಸಿಬ್ಬಂದಿ

ನಾನು ಸಂಸತ್ತಿಗೆ ಹೋಗಲು ಇಷ್ಟೆಲ್ಲ ಸಾಹಸ ಮಾಡಬೇಕಾಯಿತು ಎಂದು ಘಟನೆಯ ನಂತರ ರಾಮ್ ಗೋಪಾಲ್ ಯಾದವ್ ಮಳೆಯಿಂದ ಎದುರಿಸಿದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಜತೆಗೆ, ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿ ಪಾಲಿಕೆ ವಿರುದ್ಧ ಯಾದವ್ ಆಕ್ರೋಶ

ನಾನು ನಾಲ್ಕು ಗಂಟೆಯಿಂದ ಎನ್‌ಡಿಎಂಸಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ. ಪಂಪ್ ತಂದು ನೀರು ತೆಗೆದರೆ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಇಡೀ ಬಂಗಲೆ ನೀರಿನಿಂದ ತುಂಬಿದೆ. ಎರಡು ದಿನಗಳ ಹಿಂದೆಯಷ್ಟೇ ಫ್ಲೋರಿಂಗ್ ಮಾಡಿದ್ದೇವೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ಮೇಲ್ಛಾವಣಿ ಕುಸಿದು ಓರ್ವ ಸಾವು, ಹಲವರಿಗೆ ಗಾಯ!

ವಾಸ್ತವವಾಗಿ ಎನ್‌ಡಿಎಂಸಿ ಮಳೆಗೆ ಸಿದ್ಧವಾಗಿಲ್ಲ. ಇಷ್ಟು ತಡವಾಗಿ ಮಳೆ ಸುರಿದರೂ ಚರಂಡಿ ಸ್ವಚ್ಛಗೊಳಿಸಿಲ್ಲ. ಎಲ್ಲೆಲ್ಲಿ ಚರಂಡಿ ಸಮಸ್ಯೆ ಇದೆ, ಹಿಂದೆ ಸಮಸ್ಯೆ ಆಗಿತ್ತು ಎಂಬುದು ಎನ್‌ಡಿಎಂಸಿ ನೌಕರರಿಗೂ ಗೊತ್ತು. ಚರಂಡಿಗಳನ್ನು ಸಮರ್ಪಕವಾಗಿ ಇರಿಸಿಕೊಂಡರೆ ಈ ಪರಿಸ್ಥಿತಿ ಬರುವುದಿಲ್ಲ. ನಮ್ಮ ನಿವಾಸದ ಪಕ್ಕದಲ್ಲಿಯೇ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ನೀತಿ ಆಯೋಗ್‌ನ ಸದಸ್ಯರ ಬಂಗಲೆ ಇದೆ. ಸಚಿವರು, ನೌಕಾಪಡೆಯ ಅಡ್ಮಿರಲ್‌ಗಳಿದ್ದಾರೆ. ಎಲ್ಲರಿಗೂ ಸಮಸ್ಯೆ ಆಗಿದೆ ಎಂದು ರಾಮ್ ಗೋಪಾಲ್ ಯಾದವ್ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:42 am, Fri, 28 June 24

ತಾಜಾ ಸುದ್ದಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ