ಮಾರ್ಚ್ನಲ್ಲಿ ದೆಹಲಿ ಉಷ್ಣಾಂಶ 40.1 ಡಿಗ್ರಿ: ಇದು 76 ವರ್ಷಗಳಲ್ಲೇ ಅಧಿಕ
New Delhi Weather: ರಾಷ್ಟ್ರ ರಾಜಧಾನಿಯಲ್ಲಿ ಬಿಸಿಗಾಳಿಯು ಜನರನ್ನು ಕಾಡುತ್ತಿದೆ. ಹೋಳಿ ಹಬ್ಬದ ದಿನವೇ ದೆಹಲಿಯ ಉಷ್ಣಾಂಶ 40.1 ಡಿಗ್ರಿ ಮುಟ್ಟಿದೆ. ಕಳೆದ 76 ವರ್ಷಗಳಲ್ಲಿ ಮಾರ್ಚ್ ತಿಂಗಳಲ್ಲಿ ಎಂದಿಗೂ ದೆಹಲಿಯಲ್ಲಿ ಈ ಪ್ರಮಾಣದ ಉಷ್ಣಾಂಶ ದಾಖಲಾಗಿರಲಿಲ್ಲ.
ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಸಿಗಾಳಿಯು ಜನರನ್ನು ಕಾಡುತ್ತಿದೆ. ಹೋಳಿ ಹಬ್ಬದ ದಿನವೇ ದೆಹಲಿಯ ಉಷ್ಣಾಂಶ 40.1 ಡಿಗ್ರಿ ಮುಟ್ಟಿದೆ. ಕಳೆದ 76 ವರ್ಷಗಳಲ್ಲಿ ಮಾರ್ಚ್ ತಿಂಗಳಲ್ಲಿ ಎಂದಿಗೂ ದೆಹಲಿಯಲ್ಲಿ ಈ ಪ್ರಮಾಣದ ಉಷ್ಣಾಂಶ ದಾಖಲಾಗಿರಲಿಲ್ಲ. ದೆಹಲಿ ಹವಾಮಾನದ ಮುನ್ಸೂಚನೆ, ಮಾಹಿತಿ ನೀಡುವ ಸಫ್ತಾರ್ಜಂಗ್ ಹವಾಮಾನ ಕಚೇರಿಯು ಇಂದಿನ ಗರಿಷ್ಠ ಉಷ್ಣಾಂಶವನ್ನು 40.1 ಡಿಗ್ರಿ ಎಂದು ಹೇಳಿದೆ. ಇದು ಮಾರ್ಚ್ ತಿಂಗಳ ಸಾಮಾನ್ಯ ಸರಾಸರಿ ಉಷ್ಣಾಂಶಕ್ಕೆ ಹೋಲಿಸಿದರೆ 4 ಡಿಗ್ರಿ ಹೆಚ್ಚು ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿ ಕುಲ್ದೀಪ್ ಶ್ರೀವಾಸ್ತವ.
ಮಾರ್ಚ್ 31, 1945ರ ನಂತರ ದೆಹಲಿಯಲ್ಲಿ ದಾಖಲಾಗಿರುವ ಅತ್ಯಂತ ಬಿಸಿ ದಿನವಿದು. ಅಂದು ಅಂದರೆ ಮಾರ್ಚ್ 31, 1945ರಲ್ಲಿ 40.5 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು ಎನ್ನುತ್ತಾರೆ ಅವರು. ಕಡಿಮೆ ವೇಗದಲ್ಲಿ ಬೀಸುತ್ತಿರುವ ಗಾಳಿ, ಪ್ರಖರ ಬಿಸಿಲು, ಶುಭ್ರ ಆಗಸವು ರಾಜಧಾನಿಯ ಉಷ್ಣಾಂಶ ಹೆಚ್ಚಾಗಲು ಮುಖ್ಯ ಕಾರಣ ಎನ್ನುತ್ತಾರೆ ಅವರು.
ಮಾರ್ಚ್ 29, 1973ರಲ್ಲಿ ದೆಹಲಿ ನಗರವು 39.6 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಿಸಿತ್ತು. ಇದು ಮಾರ್ಚ್ ತಿಂಗಳಲ್ಲಿ ದಾಖಲಾಗಿರುವ 3ನೇ ಗರಿಷ್ಠ ತಾಪಮಾನವಾಗಿದೆ.
ನಜ್ಫಾಗಡ, ನರೇಲಾ, ಪೀತಾಂಪುರ ಮತ್ತು ಪುಸ ಹವಾಮಾನ ಕೇಂದ್ರಗಳಲ್ಲಿ ಗರಿಷ್ಠ ತಾಪಮಾನ 41.5 ಡಿಗ್ರಿ ಸೆಲ್ಷಿಯಸ್ಗಿಂತಲೂ ಹೆಚ್ಚು ದಾಖಲಾಗಿದೆ. ಕನಿಷ್ಠ ತಾಪಮಾನವು 20.6 ಡಿಗ್ರಿಗೆ ಬಂದು ನಿಂತಿದೆ. ಇದೂ ಸಹ ಸರಾಸರಿಗಿಂತಲೂ 3 ಡಿಗ್ರಿ ಹೆಚ್ಚು. ಬಯಲು ಪ್ರದೇಶಗಳಲ್ಲಿ ಉಷ್ಣಾಂಶವು 40 ಡಿಗ್ರಿಗಿಂತಲೂ ಹೆಚ್ಚು ದಾಖಲಾದಾಗ ಮತ್ತು ಸರಾಸರಿ ಉಷ್ಣಾಂಶವು ವಾಡಿಕೆಗಿಂತಲೂ 4.5 ಡಿಗ್ರಿಯಷ್ಟು ಹೆಚ್ಚಿದ್ದಾಗ ಬಿಸಿಗಾಳಿಯನ್ನು ಘೋಷಿಸಲಾಗುತ್ತದೆ.
ವಾಡಿಕೆಗಿಂತಲೂ 6.5 ಡಿಗ್ರಿ ಸೆಲ್ಷಿಯಸ್ನಷ್ಟು ಉಷ್ಣಾಂಶ ಹೆಚ್ಚಾದರೆ ‘ತೀವ್ರ’ ಬಿಸಿಗಾಳಿಯ ಮುನ್ನೆಚ್ಚರಿಕೆ ನೀಡಲಾಗುತ್ತದೆ. ವೇಗವಾಗಿ ಬೀಸುತ್ತಿರುವ ಗಾಳಿಯು ದೆಹಲಿಯ ಉಷ್ಣಾಂಶವನ್ನು ತಗ್ಗಿಸಬಹುದು. ಮಂಗಳವಾರದ ಹೊತ್ತಿಗೆ ಉಷ್ಣಾಂಶವು 38 ಡಿಗ್ರಿ ಸೆಲ್ಷಿಯಸ್ಗೆ ಬರಬಹುದು ಎಂದು ಎಂದು ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕಾನೂನಾಯ್ತು ದೆಹಲಿ ಮಸೂದೆ: ದೆಹಲಿ ಆಡಳಿತದಲ್ಲಿ ಕೇಂದ್ರದ ಹಿಡಿತ ಬಲಪಡಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ
ಇದನ್ನೂ ಓದಿ: ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಆರೋಪಿಗೆ ಸಮಾಜ ಸೇವೆ ಮಾಡಲು ನಿರ್ದೇಶನ ನೀಡಿದ ದೆಹಲಿ ಹೈಕೋರ್ಟ್!
Published On - 10:44 pm, Mon, 29 March 21