ಕಾನೂನಾಯ್ತು ದೆಹಲಿ ಮಸೂದೆ: ದೆಹಲಿ ಆಡಳಿತದಲ್ಲಿ ಕೇಂದ್ರದ ಹಿಡಿತ ಬಲಪಡಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಕಿತದೊಂದಿಗೆ ಈ ಮಸೂದೆಗೆ ಅಧಿಕೃತವಾಗಿ ಕಾನೂನಿನ ಮಾನ್ಯತೆ ದೊರೆತಿದೆ. ಈ ಕಾನೂನು ಎಂದಿನಿಂದ ಜಾರಿಗೆ ಬರಲಿದೆ ಎಂಬುದನ್ನು ಗೃಹ ಇಲಾಖೆಯು ಘೋಷಿಸಲಿದೆ.

ಕಾನೂನಾಯ್ತು ದೆಹಲಿ ಮಸೂದೆ: ದೆಹಲಿ ಆಡಳಿತದಲ್ಲಿ ಕೇಂದ್ರದ ಹಿಡಿತ ಬಲಪಡಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ
ರಾಮನಾಥ ಕೋವಿಂದ್​
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 28, 2021 | 11:06 PM

ದೆಹಲಿ: ರಾಷ್ಟ್ರ ರಾಜಧಾನಿಯ ಆಡಳಿತದಲ್ಲಿ ಲೆಫ್ಟಿನೆಂಟ್​ ಗವರ್ನರ್​ಗೆ ಹೆಚ್ಚಿನ ಅಧಿಕಾರ ನೀಡುವ ಜಿಎನ್​ಸಿಟಿಡಿ (ತಿದ್ದುಪಡಿ) ಮಸೂದೆಗೆ (National Capital Territory of Delhi (Amendment) Bill – NCTDB) ಭಾನುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಕಿತ ಸಿಕ್ಕಿದೆ. ಇದರೊಂದಿಗೆ ಈ ಮಸೂದೆಗೆ ಕಾನೂನಿನ ಮಾನ್ಯತೆ ದೊರೆತಿದೆ. ಈ ಕಾನೂನು ಎಂದಿನಿಂದ ಜಾರಿಗೆ ಬರಲಿದೆ ಎಂಬುದನ್ನು ಗೃಹ ಇಲಾಖೆಯು ಘೋಷಿಸಲಿದೆ. ಕಳೆದ ಬುಧವಾರ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿಸಿಕೊಂಡಿತ್ತು. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಸಭಾತ್ಯಾಗ ಮಾಡಿದ್ದವು.

ಈ ಮಸೂದೆಯು ದೆಹಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ (ಆಪ್) ದೊಡ್ಡ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. 2013ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಬಂದ ನಂತರ ಆಪ್ ಸರ್ಕಾರವು ಪದೇಪದೆ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಸಂಘರ್ಷ ಮಾಡಿಕೊಳ್ಳುತ್ತಿತ್ತು.

ಜಿಎನ್​ಸಿಟಿಡಿ (ತಿದ್ದುಪಡಿ) ಮಸೂದೆ (The Government of National Capital Territory of Delhi (Amendment) Bill – GNCTD) ಎಂದೇ ಕರೆಯಲಾಗಿರುವ ಈ ಮಸೂದೆಯು ದೆಹಲಿಯಲ್ಲಿ ಸರ್ಕಾರ ಎಂದರೆ ಲೆಫ್ಟಿನೆಂಟ್ ಗವರ್ನರ್ ಎಂದು ವ್ಯಾಖ್ಯಾನಿಸುತ್ತದೆ. ದೆಹಲಿ ಸರ್ಕಾರವು ಆಡಳಿತಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಲೆಫ್ಟಿನೆಂಟ್ ಜನರಲ್ ಅಭಿಪ್ರಾಯ ತೆಗೆದುಕೊಳ್ಳುವುದು ಕಡ್ಡಾಯಗೊಳಿಸುತ್ತದೆ.

ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿರುವ ಬಗ್ಗೆ ಟ್ವೀಟ್​ಮಾಡಿ ಪ್ರತಿಕ್ರಿಯಿಸಿದ್ದ ಅರವಿಂದ್ ಕೇಜ್ರಿವಾಲ್, ‘ರಾಜ್ಯಸಭೆಯಲ್ಲಿ ಜಿಎನ್​ಸಿಟಿಡಿ ಮಸೂದೆ ಅಂಗೀಕಾರಗೊಂಡಿದೆ. ಇದು ಭಾರತದ ಪ್ರಜಾಪ್ರಭುತ್ವಕ್ಕೆ ಕರಾಳ ದಿನ. ಜನರಿಗೆ ಅವರ ಹಕ್ಕು ಸಿಗುವಂತೆ ಮಾಡಲು ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ. ಎಂಥದ್ದೇ ಅಡೆತಡೆಗಳು ಬಂದರೂ ಸರಿ, ನಮ್ಮ ಒಳ್ಳೆಯ ಕೆಲಸಗಳನ್ನು ಮುಂದುವರಿಸುತ್ತೇವೆ. ನಮ್ಮ ಕೆಲಸಗಳು ನಿಲ್ಲುವುದೂ ಇಲ್ಲ, ತಡವಾಗುವುದೂ ಇಲ್ಲ’ ಎಂದು ಹೇಳಿದ್ದರು.

ಎರಡು ದಿನಗಳ ಚರ್ಚೆ, ವಾಗ್ವಾದಗಳ ನಂತರ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ಸಿಕ್ಕಿತು. ಈ ಮಸೂದೆಯು ಪ್ರಜಾಪ್ರಭುತ್ವವನ್ನು ನಾಶಪಡಿಸಲಿದೆ ಎಂದು ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಮಸೂದೆಯನ್ನು ಉನ್ನತ ಸಮಿತಿಯ ಪರಿಶೀಲನೆಗೆ ಒಳಪಡಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು. ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ಸದನದಲ್ಲಿದ್ದ ಒಟ್ಟು ಸದಸ್ಯರ ಪೈಕಿ 83 ಮಂದಿ ಮಸೂದೆಯ ಪರವಾಗಿ ಮತ್ತು 45 ಮಂದಿ ವಿರುದ್ಧವಾಗಿ ಮತಚಲಾಯಿಸಿದರು. ಮಸೂದೆ ಅಂಗೀಕಾರಗೊಳ್ಳುವ ಕೆಲವೇ ನಿಮಿಷಗಳ ಮೊದಲು ಕಾಂಗ್ರೆಸ್ ಸದನದಿಂದ ಹೊರನಡೆದಿತ್ತು.

‘ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಒಳಗಾದ ಗತಿಯೇ ಇಂದು ಸಂವಿಧಾನಕ್ಕೆ ಆಗಿದೆ. ದೇಶದ ಸಂವಿಧಾನವನ್ನು ತಿದ್ದುಪಡಿಯೇ ಇಲ್ಲದೆ ಬದಲಿಸಲಾಗಿದೆ’ ಎಂದು ಆಪ್​ನ ಸಂಜಯ್​ ಸಿಂಗ್​ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮಸೂದೆಯನ್ನು ಜನರು ಒಪ್ಪಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ರೈತ ಚಳವಳಿಯ ಮಾದರಿಯಲ್ಲಿಯೇ ತೀವ್ರ ಪ್ರತಿಭಟನೆಗಳು ನಡೆಯಲಿವೆ ಎಂದು ಆಪ್ ಸದಸ್ಯರು ಎಚ್ಚರಿಸಿದ್ದ. ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಜನತಾದಳ, ಶಿವಸೇನಾ, ಜನತಾ ದಳ, ವೈಎಸ್​ಆರ್ ಕಾಂಗ್ರೆಸ್ ಮತ್ತು ಅಕಾಲಿದಳ ಪಕ್ಷಗಳೂ ಈ ಮಸೂದೆಯನ್ನು ವಿರೋಧಿಸಿದ್ದವು.

ಇದನ್ನೂ ಓದಿ: Explainer | ದೆಹಲಿ ಸರ್ಕಾರ ಎಂದರೆ ಯಾರು? ಎನ್​ಸಿಟಿಡಿ ಮಸೂದೆ ಅಸಂವಿಧಾನಿಕ ಎಂದು ಕೇಜ್ರಿವಾಲ್ ವಾದಿಸುತ್ತಿರುವುದೇಕೆ?

ಇದನ್ನೂ ಓದಿ: ದೆಹಲಿ ಆಡಳಿತದ ಮೇಲೆ ಕೇಂದ್ರ ಸರ್ಕಾರಕ್ಕೆ ಹತೋಟಿ ಕೊಡುವ ಮಸೂದೆಗೆ ಲೋಕಸಭೆ ಅಸ್ತು

Published On - 11:06 pm, Sun, 28 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್