ಸಲಿಂಗ ವಿವಾಹ ಮಾನ್ಯತೆ ನಿರಾಕರಣೆ: ಅರ್ಜಿ ಮರುಪರಿಶೀಲನೆಗೆ ಸುಪ್ರೀಂ ಒಪ್ಪಿಗೆ
same-sex marriage: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್ ತೀರ್ಪುನ್ನು ಮತ್ತೆ ಮರುಪರಿಶೀಲನೆ ಮಾಡಬೇಕು ಎಂಬ ಅರ್ಜಿಯನ್ನು ನವೆಂಬರ್ 28ಕ್ಕೆ ವಿಚಾರಣೆ ನಡೆಸುವುದಾಗಿ ಇಂದು (ನ.23) ಸುಪ್ರೀಂ ಕೋರ್ಟ್ ಹೇಳಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಭಾರತದ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ ಹಾಗೂ ಮತ್ತಿಬ್ಬರು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ದೆಹಲಿ, ನ.23: ಸಲಿಂಗ ವಿವಾಹಕ್ಕೆ (same-sex marriage) ಮಾನ್ಯತೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್ ತೀರ್ಪುನ್ನು ಮತ್ತೆ ಮರುಪರಿಶೀಲನೆ ಮಾಡಬೇಕು ಎಂಬ ಅರ್ಜಿಯನ್ನು ನವೆಂಬರ್ 28ಕ್ಕೆ ವಿಚಾರಣೆ ನಡೆಸುವುದಾಗಿ ಇಂದು (ನ.23) ಸುಪ್ರೀಂ ಕೋರ್ಟ್ ಹೇಳಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಭಾರತದ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ ಹಾಗೂ ಮತ್ತಿಬ್ಬರು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಈ ಹಿಂದೆ ತೀರ್ಪು ನೀಡಿದ್ದ ಪೀಠದಲ್ಲಿ ತಾರತ್ಯಾಮ ಅಥವಾ ತಪ್ಪಿದೆ. ಹಾಗೂ ಇದನ್ನು ಪರಿಹಾರ ಮಾಡಬೇಕು ಎಂದು ಅವರು ಹೇಳಿದ್ದಾರೆ. ಸಲಿಂಗ ವಿವಾಹದ ಬಗ್ಗೆ ಅನೇಕರಿಗೆ ಒಲವು ಇದೆ. ಇದನ್ನೇ ಅನೇಕರು ಅವಲಂಬಿಸಿದ್ದಾರೆ ಎಂದು ಮುಕುಲ್ ರೋಹಟಗಿ ಸುಪ್ರೀಂ ಕೋರ್ಟಿನ ಮುಂದೆ ಹೇಳಿದ್ದಾರೆ. ಹಾಗಾಗಿ ಈ ಬಗ್ಗೆ ಮತ್ತೆ ಮರುಪರಿಶೀಲನೆ ಮಾಡಿ ವಿಚಾರಣೆ ನಡೆಸಬೇಕು ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ ಯಾವುದೇ ವಿಷಯವನ್ನು ಮರುಪರಿಶೀಲನೆ ಮಾಡುಬೇಕಾದರೆ, ಈ ಬಗ್ಗೆ ಚರ್ಚೆಯಾಗಬೇಕು ಮತ್ತು ಅರ್ಜಿ ಬಗ್ಗೆ ನಮಗೆ ಮನವರಿಕೆಯಾಗಬೇಕು ಅದನ್ನು ನೋಡಿಕೊಂಡು ಮತ್ತೆ ನಿರ್ಧಾರಿಸುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ: ಸಲಿಂಗ ಸಂಬಂಧ ಎಂಬುದು ಕೇವಲ ದೈಹಿಕ ಮಾತ್ರವಲ್ಲ: ಸಿಜೆಐ ಡಿವೈ ಚಂದ್ರಚೂಡ್
ಮರುಪರಿಶೀಲನೆ ಅರ್ಜಿದಾರರಲ್ಲಿ ಒಬ್ಬರಾದ ಉದಿತ್ ಸೂದ್, ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂಬ ಅರ್ಜಿಯನ್ನು ಅಕ್ಟೋಬರ್ 17ರಂದು ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ಪೀಠವು ಸಲಿಂಗ ವಿವಾಹವನ್ನು ನಿರಕಾರಿಸಿದೆ. ಈ ತೀರ್ಪಿನಲ್ಲಿ ದೋಷವಿದೆ. ನಾವು ನೀಡಿದ ದಾಖಲೆಗಳು ಎಲ್ಲವೂ ಸರಿಯಾಗಿದೆ. ಆದರೆ ಈ ತೀರ್ಪಿನಿಂದ ನಮಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಇದೀಗ ಮತ್ತೆ ಸುಪ್ರೀಂ ಈ ತೀರ್ಪನ್ನು ಮತ್ತೆ ಮರುಪರಿಶೀಲನೆ ಮಾಡವಂತೆ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ