ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಆಕ್ಸಿಜನ್ ಸಿಲಿಂಡರ್ಗಳ ಕೊರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರದಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ, ’ಆಕ್ಸಿಜನ್ ಸಂಕಷ್ಟದಿಂದ ದೆಹಲಿಯನ್ನು ಪಾರು ಮಾಡುವಂತೆ ಕೆಲ ರಾಜ್ಯಗಳಿಗೆ ಫೋನ್ ಮಾಡಿ’ ಎಂದು ಎರಡೂ ಕೈ ಜೋಡಿಸಿ ಅತ್ಯಂತ ವಿನಮ್ರತೆಯಿಂದ ಮನವಿ ಮಾಡಿದರು. ಆದರೆ ವಾಸ್ತವ ಸಂಗತಿಯೇನೆಂದರೆ, ಇಂಥ ಸಂಕಷ್ಟದ ಸ್ಥಿತಿಯಲ್ಲೂ ಕೇಜ್ರಿವಾಲ್ ರಾಜಕಾರಣ ಮಾಡುವುದನ್ನು ನಿಲ್ಲಿಸಿಲ್ಲ. ಕೇಂದ್ರ ಆರೋಗ್ಯ ಸಚಿವಾಲಯವು, ದೆಹಲಿ ಹೈಕೋರ್ಟ್ಗೆ ವಾಸ್ತವ ಸಂಗತಿಯನ್ನು ಮಂಗಳವಾರದಂದು ವಿವರಿಸಿದೆ. ಪಿಎಂ ಕೇರ್ಸ್ ನಿಧಿ ಯೋಜನೆಯಡಿ ಕೇಂದ್ರವು ಕೇಜ್ರಿವಾಲ್ ಸರ್ಕಾರಕ್ಕೆ ಡಿಸೆಂಬರ್ 2020ರಲ್ಲೇ 8 ಪಿಎಸ್ಎ (ಪ್ರೆಶರ್ ಸ್ವಿಂಗ್ ಅಬ್ಸಾರ್ಪ್ಷನ್) ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ಅನುದಾನವನ್ನು ಮಂಜೂರು ಮಾಡಿದೆ. ಆದರೆ ಡಿಸೆಂಬರ್ನಿಂದ ಇಲ್ಲಿಯವರೆಗೆ ದೆಹಲಿ ಸರ್ಕಾರವು ಕೇವಲ ಒಂದು ಘಟಕವನ್ನು ಮಾತ್ರ ಸ್ಥಾಪಿಸಿದೆ, ಎಂದು ಹೈಕೋರ್ಟ್ಗೆ ತಿಳಿಸಲಾಗಿದೆ.
ಇದಕ್ಕೆ ಉತ್ತರವಾಗಿ ನ್ಯಾಯಾಲಯವು ರಾಷ್ಟ್ರದ ರಾಜಧಾನಿ ಎದುರಿಸುತ್ತಿರುವ ಆಕ್ಸಿಜನ್ ಸಮಸ್ಯೆ ಕುರಿತಂತೆ ದೆಹಲಿ ಮತ್ತು ಕೇಂದ್ರ ಸರ್ಕಾರಗಳೆರಡನ್ನೂ ತರಾಟೆಗೆ ತೆಗೆದುಕೊಂಡಿದೆ.
Delhi High Court order of 23 April.
Shortage of Oxygen supply to Delhi.
Oxygen had to come from Rourkela,Durgapur,
Kalingnagar.
Empty cryogenic tanks airlifted,being filled,Railways to transport.
But GNCTD has not made arrangements 4 Cryogenic tanks 4 transport of oxygen to Delhi pic.twitter.com/Wl7m0bVhpl— Monika Arora (@advmonikaarora) April 24, 2021
ದೆಹಲಿಯ ಎರಡು ಆಸ್ಪತ್ರೆಗಳು- ಸತ್ಯವತಿ ರಾಜಾ ಹರಿಶ್ಚಂದ್ರ ಆಸ್ಪತ್ರೆ ಮತ್ತು ವರ್ಧಮಾನ್ ಮಹಾವೀರ್ ಮೆಡಿಕಲ್ ಕಾಲೇಜು ಮತ್ತು ಸಫ್ದರ್ಜಂಗ್ ಆಸ್ಪತ್ರೆಗಳು ಪಿಎಸ್ಎ ಘಟಕ ಸ್ಥಾಪಿಸಲು ಜಾಗವನ್ನೆ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿ ನಿಪುನ್ ವಿನಾಯಕ್ ಹೇಳಿರುವುದನ್ನು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಆ ಎರಡು ಆಸ್ಪತ್ರೆಗಳು ಈಗ ಜಾಗವನ್ನು ತೋರಿಸಿದ್ದು, ಘಟಕಕ್ಕೆ ಸಂಬಂಧಿಸಿದ ಉಪಕರಣಗಳನ್ನು ಏಪ್ರಿಲ್ 30 ರಂದು ಸ್ಥಾಪಿಸುವ ಸಾಧ್ಯತೆಯಿದೆ. ಮಿಕ್ಕಿದ ಆಸ್ಪತ್ರೆಗಳು ಕೇಂದ್ರ ಸರ್ಕಾರದ ಯೋಜನೆಗೆ ಬದ್ಧರಾಗುವಂತೆ ನ್ಯಾಯಾಲವು ಆದೇಶಿಸಿದ್ದು, ಮುಂದಿನ ವಿಚಾರಣೆ ಸಂದರ್ಭದಲ್ಲಿ ಆಸ್ಪತ್ರೆಗಳ ಬದ್ಧತಾ ವರದಿಯನ್ನು ಸಲ್ಲಿಸುವಂತೆ ಹೇಳಿದೆ.
ಆಮ್ಲಜನಕದ ವಿತರಣೆಯನ್ನು ಪ್ರತಿದಿನ ಮಾನಿಟರ್ ಮಾಡುವಂತೆ ಮತ್ತು ಅದರ ಸದ್ವಿನಿಯೋಗ ಆಗುತ್ತಿರುವುದನ್ನು ಖಾತರಿಪಡಿಸಿಕೊಳ್ಳುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದೆ.
ದೆಹಲಿ ಪ್ರತಾಪ್ಗಂಜ್ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯು ತನ್ನಲ್ಲಿ ಆಕ್ಸಿಜನ್ ಅಪಾಯಕಾರಿ ಅನ್ನುವಷ್ಟು ತಳಮಟ್ಟ ತಲುಪಿದೆ ಎಂದು ಮನವಿ ಸಲ್ಲಿಸಿದ ನಂತರ ದೆಹಲಿ ಹೈಕೋರ್ಟ್ ಒಂದು ತುರ್ತು ವಿಚಾರಣೆಯನ್ನು ನಡೆಸಿತು. ನಂತರ ನ್ಯಾಯಾಲಯವು, ಕೇಂದ್ರ ಸರ್ಕಾರಕ್ಕೆ, ಹೇಗಾದರೂ ಮಾಡಿ ಎಂತಾದರೂ ಮಾಡಿ ವೈದ್ಯಕೀಯ ಉದ್ದೇಶಗಳಿಗೆ ಆಮ್ಲಜನಕ ಒದಗಿಸುವ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿತು.
ಆಮ್ಲಜನಕ ತಯಾರಿಸುವ ಘಟಕಗಳು ಅದನ್ನು ಉತ್ಪಾದಿಸಲಾಗದೆ ತಾತ್ಕಾಲಿಕವಾಗಿ ಮುಚ್ಚುವಂಥ ಪರಿಸ್ಥಿತಿ ಎದುರಾದರೂ ಚಿಂತೆಯಿಲ್ಲ, ಅದರ ಸರಬರಾಜು ನಿಲ್ಲಕೂಡದು ಎಂದು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದೆ. ಜನರು ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ನೋಡುವುದು ಸಾಧ್ಯವಿಲ್ಲ, ಈ ಅಂಶವನ್ನು ಸರ್ಕಾರಗಳು ಮನಗಾಣಬೇಕು ಎಂದು ನ್ಯಾಯಾಲಯ ಹೇಳಿದೆ.
ಕೊವಿಡ್-19 ಪ್ರಕರಣಗಳು ಅಂಕೆ ಮೀರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ, ತೀವ್ರ ಆಮ್ಲಜನಕ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಮುಖ್ಯಮಂತ್ರಿ ಕೇಜ್ರವಾಲ್ ಅವರು ಕೆಲವೇ ದಿನಗಳಿಂದ ಈ ಸಮಸ್ಯೆಯ ಬಗ್ಗೆ ಮಾತಾಡುತ್ತಿದ್ದಾರೆ. ನಿನ್ನೆ ಅಂದರೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರು ಕೊವಿಡ್ ಪ್ರಕರಣಗಳು ಜಾಸ್ತಿಯಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಸದರಿ ಸಭೆಯಲ್ಲಿ ಕೇಜ್ರಿವಾಲ್ ಅವರು, ಆಕ್ಸಿಜನ್ ಎಕ್ಸಪ್ರೆಸ್ ಯೋಜನೆಯಡಿಯಲ್ಲಿ ದೆಹಲಿಗೆ ಆಕ್ಸಿಜನ್ ಸರಬರಾಜು ಆಗುತ್ತಿಲ್ಲವೆಂದು ಹೇಳಿದರು. ಆದರೆ, ಬಾರತೀಯ ರೇಲ್ವೆ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ ದೆಹಲಿ ಸರ್ಕಾರ ಆಕ್ಸಿಜನ್ ಸರಬರಾಜು ಮಾಡುವಂತೆ ಇದುವರೆಗೆ ಅದನ್ನು ಸಂಪರ್ಕಿಸಿಲ್ಲ
ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಮಾತ್ರ ಅಕ್ಸಿಜನ್ ಟ್ಯಾಂಕರ್ಗಳು ಬೇಕೆಂದು ಸಂಪರ್ಕಿಸಿವೆ, ಮತ್ತು ಮಧ್ಯಪ್ರದೇಶ ಸರ್ಕಾರ ಸಹ ಅಂಥ ಇಚ್ಛೆಯನ್ನು ವ್ಯಕ್ತಪಡಿಸಿದೆ ಎಂದು ರೇಲ್ವೇಸ್ ತಿಳಿಸಿದೆ. ಆದರೆ ದೆಹಲಿ ಸರ್ಕಾರದಿಂದ ಯಾವುದೇ ಬೇಡಿಕೆ ಬಂದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ICMR Guidelines for Covid Treatment: ವಯಸ್ಕರ ಕೋವಿಡ್- 19 ಚಿಕಿತ್ಸೆಗಾಗಿ ಹೊಸ ಮಾರ್ಗದರ್ಶಿ ಸೂತ್ರ ವಿತರಿಸಿದ ಏಮ್ಸ್
(Despite PM Cares grants received for 8 oxygen plants, Delhi CM Kejriwal has set up just one)