ಭಯೋತ್ಪಾದನೆಗೆ ಜಾಗವಿಲ್ಲ ಎಂದು ಆಪರೇಷನ್ ಸಿಂಧೂರ ಸ್ಪಷ್ಟಪಡಿಸಿದೆ; ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಹಲ್ಯಾಬಾಯಿ ಹೇಳಿದಂತೆ ನಾಯಕರು ಜನರ ಜೀವನದಲ್ಲಿ ಸುಧಾರಣೆ ತರಬೇಕು ಎಂದು ಹೇಳಿದರು. ಪ್ರಧಾನ ಮಂತ್ರಿಯವರ ಈ ಭೇಟಿಯು ಮಹಿಳೆಯರ ಸಬಲೀಕರಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತಳಮಟ್ಟದ ಭಾಗವಹಿಸುವಿಕೆಯನ್ನು ಬಲಪಡಿಸುವ ಕೇಂದ್ರ ಸರ್ಕಾರದ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಭೋಪಾಲ್, ಮೇ 31: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಮಹಿಳಾ ಸಶಕ್ತಿಕರಣ ಮಹಾ ಸಮ್ಮೇಳನದಲ್ಲಿ ಭಾಗವಹಿಸಿದರು. ಇದು ಸಮಾಜ ಸುಧಾರಕಿ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆಯನ್ನು ಗುರುತಿಸಲು ಆಯೋಜಿಸಲಾದ ಭವ್ಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಹಲ್ಯಾಬಾಯಿ ಹೇಳಿದಂತೆ ನಾಯಕರು ಜನರ ಜೀವನದಲ್ಲಿ ಸುಧಾರಣೆ ತರಬೇಕು ಎಂದು ಹೇಳಿದರು.
ಸಾಂಪ್ರದಾಯಿಕವಾಗಿ ವಿಬಾಹದ ಬದ್ಧತೆಯ ಸಂಕೇತವಾಗಿದ್ದ ಸಿಂಧೂರ ಇಂದು ನಾರಿ ಶಕ್ತಿ ಮತ್ತು ರಾಷ್ಟ್ರೀಯ ಶೌರ್ಯದ ಸಂಕೇತವಾಗಿದೆ ಎಂದು ಮೋದಿ ಹೇಳಿದರು. ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿದ ಮೋದಿ, ಭಾರತೀಯ ಮಹಿಳೆಯರ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವು ದೇಶದ ಬೆಳೆಯುತ್ತಿರುವ ಶಕ್ತಿ ಮತ್ತು ಸಂಕಲ್ಪವನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದನ್ನು ಮೋದಿ ಎತ್ತಿ ತೋರಿಸಿದರು.
ಇದನ್ನೂ ಓದಿ: ಇಡೀ ಜಗತ್ತೇ ಭಾರತದ ಹೆಣ್ಣಿನ ಸಿಂಧೂರದ ಶಕ್ತಿ ಕಂಡಿದೆ; ಪ್ರಧಾನಿ ಮೋದಿ
VIDEO | PM Narendra Modi (@narendramodi) launches several developmental projects in Bhopal, Madhya Pradesh.
(Source: Third Party)
(Full video available on PTI Videos – https://t.co/dv5TRARJn4)#Bhopal pic.twitter.com/7oFGi80Q6F
— Press Trust of India (@PTI_News) May 31, 2025
ಭಾರತದ ಇಲ್ಲಿಯವರೆಗಿನ ಅತಿದೊಡ್ಡ ಗಡಿಯಾಚೆಗಿನ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಾದ ಆಪರೇಷನ್ ಸಿಂಧೂರ್ ದೇಶವು ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. “ಪಾಕಿಸ್ತಾನ ದಾಳಿ ಮಾಡಿದರೆ ಗುಂಡುಗಳಿಂದಲೇ ಪ್ರತಿಕ್ರಿಯೆ ಇರುತ್ತದೆ” ಎಂದು ಅವರು ಹೇಳಿದರು. ಇದು ರಾಷ್ಟ್ರೀಯ ಭದ್ರತೆಯ ಬಗ್ಗೆ ಭಾರತದ ದೃಢ ನಿಲುವನ್ನು ಬಲಪಡಿಸುತ್ತದೆ. ಈ ಕಾರ್ಯಾಚರಣೆಯು ಭಾರತದ ಸಾರ್ವಭೌಮತ್ವ ಮತ್ತು ಅದರ ಜನರನ್ನು ರಕ್ಷಿಸುವ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಕಾನ್ಪುರದಲ್ಲಿ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಎಚ್ಚರಿಕೆ
Madhya Pradesh: Prime Minister Narendra Modi arrives in Bhopal. He participates in Devi Ahilyabai Mahila Sashaktikaran Mahasammelan, launches projects pic.twitter.com/CMXBiKjnZq
— IANS (@ians_india) May 31, 2025
ಮಧ್ಯಪ್ರದೇಶದಾದ್ಯಂತ ಅಭಿವೃದ್ಧಿ ಯೋಜನೆಗಳನ್ನು ಮೋದಿ ಉದ್ಘಾಟನೆ ಮಾಡಿದರು. ಇದರಲ್ಲಿ ಇಂದೋರ್ ಮೆಟ್ರೋ, ದಾಟಿಯಾ ಮತ್ತು ಸತ್ನಾ ವಿಮಾನ ನಿಲ್ದಾಣಗಳು ಸೇರಿವೆ. ಸರ್ಕಾರದ ಅಡಿಯಲ್ಲಿ ಸ್ಥಾಪಿಸಲಾದ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದು, ಭಾರತದಾದ್ಯಂತ 4 ಕೋಟಿಗೂ ಹೆಚ್ಚು ಮನೆಗಳನ್ನು ಸ್ಥಾಪಿಸಲಾಗಿದೆ. ಈ ಮನೆಗಳ ಮಾಲೀಕರು ಹೆಚ್ಚಾಗಿ ಮಹಿಳೆಯರೇ ಆಗಿದ್ದಾರೆ ಎಂದು ಹೇಳಿದ್ದಾರೆ. ಪ್ರತಿ ಮನೆಗೆ ನೀರು ಸರಬರಾಜು, ಅನಿಲ ಸಂಪರ್ಕ, ವಿದ್ಯುತ್ ಮತ್ತು ವೈದ್ಯಕೀಯ ಕಲ್ಯಾಣ ಯೋಜನೆಗಳ ಮೂಲಕ ಸಮಾಜದಲ್ಲಿ ಪ್ರಗತಿಯನ್ನು ತರುವತ್ತ ಪ್ರಸ್ತುತ ಸರ್ಕಾರ ಕೆಲಸ ಮಾಡಿದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








