AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ 19 ಸೋಂಕಿತರ ಚಿಕಿತ್ಸೆಗೆ ಬಳಸಬಹುದಾದ ಕೊಲ್ಚಿಸಿನ್​ ಔಷಧ ಕ್ಲಿನಿಕಲ್​ ಟ್ರಯಲ್​​ಗೆ ಡಿಜಿಸಿಐ ಅನುಮೋದನೆ..

ಕೊಲ್ಚಿಸಿನ್​ ಔಷಧ ಕೊವಿಡ್​ 19 ಸೋಂಕಿತರಿಗೆ ಎಷ್ಟು ಸುರಕ್ಷಿತ, ಪರಿಣಾಮಕಾರಿ ಎಂಬುದನ್ನು ತಿಳಿಯಲು ಎರಡು ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸಲು ಡಿಸಿಜಿಐ ಅನುಮೋದನೆ ನೀಡಿದೆ.

ಕೊವಿಡ್​ 19 ಸೋಂಕಿತರ ಚಿಕಿತ್ಸೆಗೆ ಬಳಸಬಹುದಾದ ಕೊಲ್ಚಿಸಿನ್​ ಔಷಧ ಕ್ಲಿನಿಕಲ್​ ಟ್ರಯಲ್​​ಗೆ ಡಿಜಿಸಿಐ ಅನುಮೋದನೆ..
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 12, 2021 | 5:34 PM

Share

ಕೊಲ್ಚಿಸಿನ್​ ಔಷಧಗಳ ಮೇಲೆ ಕ್ಲಿನಿಕಲ್​ ಟ್ರಯಲ್​ ನಡೆಸಲು ಡ್ರಗ್ಸ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ (DGCI’s), ಕೌನ್ಸಿಲ್​ ಆಫ್​ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ (CSIR) ಮತ್ತು ಹೈದರಾಬಾದ್​​ನ ಲಕ್ಸಾಯ್​ ಲೈಫ್​ ಸೈನ್ಸಸ್​ ಪ್ರೈವೇಟ್​ ಲಿಮಿಟೆಡ್​ಗೆ ಅನುಮೋದನೆ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ. ಕೊಲ್ಚಿಸಿನ್​ ಮಾತ್ರೆಗಳಿಂದ ಕೊವಿಡ್​ 19 ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾಗಿದೆ ಎಂದು ಹೇಳಲಾಗಿದೆ. ಹಾಗೇ ಈ ಔಷಧಗಳು ಕೊವಿಡ್​ 19 ಸೋಂಕಿತರಿಗೆ ಎಷ್ಟು ಸುರಕ್ಷಿತ, ಪರಿಣಾಮಕಾರಿ ಎಂಬುದನ್ನು ತಿಳಿಯಲು ಎರಡು ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸಲು ಡಿಸಿಜಿಐ ಅನುಮೋದನೆ ನೀಡಿದೆ. ಈ ಬಗ್ಗೆ CSIR ಅಧಿಕೃತ ಮಾಹಿತಿ ನೀಡಿದೆ.

CSIRನ ಮಹಾ ನಿರ್ದೇಶಕರ ಸಲಹೆಗಾರ ರಾಮ್​ ವಿಶ್ವಕರ್ಮ ಪಿಟಿಐಗೆ ಮಾಹಿತಿ ನೀಡಿದ್ದು, ಕೊರೊನಾ ಸೋಂಕಿತರು ಹೃದಯ ಸಂಬಂಧಿ ತೊಂದರೆಗೆ ಒಳಗಾಗುತ್ತಾರೆ ಎಂಬುದನ್ನು ಹಲವು ಅಧ್ಯಯನಗಳು ಬಹಿರಂಗಪಡಿಸಿವೆ. ಅಷ್ಟೇ ಅಲ್ಲ, ಅದೆಷ್ಟೋ ಜನ ಕೊರೊನಾ ಸೋಂಕಿಗೆ ಒಳಗಾಗಿ, ನಂತರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸದಾದ ಅಥವಾ ಇರುವುದರಲ್ಲೇ ಯಾವುದು ಉತ್ತಮ ಔಷಧ ಎಂಬುದನ್ನು ಕಂಡುಹಿಡಿಯುವುದು ಅನಿವಾರ್ಯವಾಗಿದೆ. ಅದರಲ್ಲಿ ಈ ಕೊಲ್ಚಿಸಿನ್​ ಔಷಧ, ಹೃದಯ ಸಮಸ್ಯೆ ಇರುವವರಿಗೆ ಅತ್ಯುತ್ತಮ ಔಷಧವಾಗಿದೆ ಎಂದು ಹೇಳಿದ್ದಾರೆ. ಹಾಗೇ, ಲಕ್ಸಾಯ್​ ಲೈಫ್​ ಸೈನ್ಸ್​​ನ ಸಿಇಒ ರಾಮ್​ ಉಪಾಧ್ಯಾಯ ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದು, ಕೊಲ್ಚಿಸಿನ್​ ಔಷಧಗಳ ಕ್ಲಿನಿಕಲ್ ಟ್ರಯಲ್​​ಗಾಗಿ ರೋಗಿಗಳ ದಾಖಲಾತಿ ಪ್ರಕ್ರಿಯೆ ನಡೆದಿದೆ. ಮುಂದಿನ 8-10 ವಾರಗಳಲ್ಲಿ ಟ್ರಯಲ್​ ಮುಗಿಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK To begin soon : ಕಿಚ್ಚನ ಬಿಗ್ ಬಾಸ್ ಮತ್ತೆ ಪ್ರಾರಂಭವಾಗಲಿದ್ಯಾ? ಯಾರೆಲ್ಲಾ ಇರ್ತಾರೆ ಈ ಬಾರಿ?

Published On - 5:31 pm, Sat, 12 June 21

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ