ಲಕ್ಷದ್ವೀಪ ಬಿಜೆಪಿ ಘಟಕದಲ್ಲಿ ತಳಮಳ. ಚಿತ್ರ ನಿರ್ಮಾಪಕಿ ಆಯೆಶಾ ಸುಲ್ತಾನಾ ಬೆಂಬಲಿಸಿ ಪದಾಧಿಕಾರಿಗಳ ರಾಜೀನಾಮೆ

ತಾವು ಸಲ್ಲಿಸಿರುವ ರಾಜೀನಾಮೆ ಪತ್ರಗಳಲ್ಲಿ ಸ್ಥಳೀಯ ಪದಾಧಿಕಾರಗಳು, ಸುಲ್ತಾನಾ ಅವರ ವಿರುದ್ಧ ಖಾದರ್ ಮಾಡಿರುವ ಅರೋಪಗಳು ಸತ್ಯಕ್ಕೆ ದೂರವಾಗಿವೆ ಮತ್ತು ಅವರ ಕುಟುಂಬದ ಭವಿಷ್ಯವನ್ನು ಹಾಳು ಮಾಡುವ ಉದ್ದೇಶ ಹೊಂದಿವೆ ಎಂದು ಹೇಳಿದ್ದಾರೆ.

ಲಕ್ಷದ್ವೀಪ ಬಿಜೆಪಿ ಘಟಕದಲ್ಲಿ ತಳಮಳ. ಚಿತ್ರ ನಿರ್ಮಾಪಕಿ ಆಯೆಶಾ ಸುಲ್ತಾನಾ ಬೆಂಬಲಿಸಿ ಪದಾಧಿಕಾರಿಗಳ ರಾಜೀನಾಮೆ
ಅಯಷಾ ಸುಲ್ತಾನಾ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jun 12, 2021 | 8:24 PM

ಲಕ್ಷದ್ವೀಪದ ದ್ವೀಪವೊಂದರಲ್ಲಿ ವಾಸವಾಗಿರುವ ಚಿತ್ರ ನಿರ್ಮಾಪಕಿ ಆಯೆಶಾ ಸುಲ್ತಾನಾ ಅವರ ವಿರುದ್ಧ ರಾಜದ್ರೋಹದ ಪ್ರಕರಣ ದಾಖಲಿಸಿದ ನಂತರ ಭಾರತೀಯ ಜನತಾಪಕ್ಷಕ್ಕೆ ಈ ಕೇಂದ್ರಾಡಳೀತ ಪ್ರದೇಶದಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ. ಅಕೆಯ ವಿರುದ್ದ ಇಲ್ಲಿನ ಪೊಲೀಸ್ ತೆಗೆದುಕೊಂಡಿರುವ ಕ್ರಮ ವಿರೋಧಿಸಿ ಸುಮಾರು ಎರಡು ಡಜನ್​ಗಳಿಗಿಂತ ಹೆಚ್ಚು ಬಿಜೆಪಿ ನಾಯಕರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಲಕ್ಷದ್ವೀಪ ಬಿಜೆಪಿ ಘಟಕದ ಮುಖ್ಯಸ್ಥರಾಗಿರುವ ಸಿ ಅಬ್ದುಲ್ ಖಾದರ್ ಹಾಜಿ ಅವರು ನೀಡಿದ ದೂರಿನ ಆಧಾರದ ಮೇಲೆ ಕವರಟ್ಟಿ ಪೊಲೀಸ್ ಸುಲ್ತಾನಾ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದೆ. ಇತ್ತೀಚಿಗೆ ಮಲೆಯಾಳಂ ಟಿವಿ ಸುದ್ದಿ ವಾಹಿನಿಯೊಂದರಲ್ಲಿ ನಡೆದ ಒಂದು ಚರ್ಚೆಯಲ್ಲಿ ಸುಲ್ತಾನಾ ಅವರು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರನ್ನು ‘ಜೈವಿಕ- ಆಯುಧ’ ಎಂದು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ದೂರು ಸಲ್ಲಿಸಿರುವುದಾಗಿ ಖಾದರ್ ಹೇಳಿದ್ದಾರೆ.

ಪ್ರಫುಲ್ ಪಟೇಲ್ ಅವರು ದ್ವೀಪ ಸಮೂಹದಲ್ಲಿ ಜಾರಿಜೊಳಿಸಲು ಪ್ರಸ್ತಾಪಿಸಿರುವ ಹಲವಾರು ವಿವಾದಾತ್ಮಕ ನಿರ್ಣಯಗಳ ಮೇಲೆ ಚರ್ಚೆ ಆಯೋಜಿಸಲಾಗಿತ್ತು.

ತಾವು ಸಲ್ಲಿಸಿರುವ ರಾಜೀನಾಮೆ ಪತ್ರಗಳಲ್ಲಿ ಸ್ಥಳೀಯ ಪದಾಧಿಕಾರಗಳು, ಸುಲ್ತಾನಾ ಅವರ ವಿರುದ್ಧ ಖಾದರ್ ಮಾಡಿರುವ ಅರೋಪಗಳು ಸತ್ಯಕ್ಕೆ ದೂರವಾಗಿವೆ ಮತ್ತು ಅವರ ಕುಟುಂಬದ ಭವಿಷ್ಯವನ್ನು ಹಾಳು ಮಾಡುವ ಉದ್ದೇಶ ಹೊಂದಿವೆ ಎಂದು ಹೇಳಿದ್ದಾರೆ. ಆಕೆ ದ್ವೀಪ ನಿವಾಸಿಗಳ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದ್ದಾರೆ ಎಂದು ಸುಲ್ತಾನಾ ರನ್ನು ಸಮರ್ಥಿಸಿಕೊಂಡಿದ್ದಾರೆ.

ಆಡಳಿತಾಧಿಕಾರಿ ಪಟೇಲ್ ಅವರ ಪ್ರಜಾಪ್ರಭುತ್ವ-ವಿರೋಧಿ, ಜನ-ವಿರೋಧಿ ಮತ್ತು ಭಯಾನಕ ನೀತಿಗಳು ಸೃಷ್ಟಿಸಬಹದಾದ ಅರಾಜಕತೆ ಬಗ್ಗೆ ಪಕ್ಷದ ಘಟಕಕ್ಕೆ ಸ್ಪಷ್ಟ ಅರಿವಿದೆ ಎಂದು ಅವರು ಪತ್ರಗಳಲ್ಲಿ ಹೇಳಿದ್ದಾರೆ .

ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದವರಲ್ಲಿ, ರಾಜ್ಯ ಬಿಜೆಪಿ ಕಾರ್ಯದರ್ಶಿ, ಅಬ್ದುಲ್ ಹಮೀದ್ ಮುಲ್ಲೀಪುರ, ವಕ್ಫ್ ಬೋರ್ಡಿನ ಸದಸ್ಯ ಉಮ್ಮುಲ್ ಕುಲೂಸ್ ಪುತಿಯಾಪುರ, ಖಾದಿ ನಿಗಮದ ಸದಸ್ಯ ಸೈಫುಲ್ಲಾ ಪಕ್ಕಿಯೋಡಾ, ಚೆತ್ಲಾತ್ ಬಿಜೆಪಿ ಘಟಕದ ಕಾರ್ಯದರ್ಶಿ ಜಬೀರ್ ಸಲೀಹತ್ ಮಂಜಿಲ್ ಮತ್ತು ಇತರ ಕಾರ್ಯಕರ್ತರು ಸೇರಿದ್ದಾರೆ.

ಪ್ರಫುಲ್ ಪಟೇಲ್ ಅವರ ಹಲವಾರು ಹೊಸ ನಿಯಮಗಳ ಭಾಗವಾಗಿರುವ ಬೀಫ್​ ಮತ್ತು ಗೋಹತ್ಯೆ ಮೇಲೆ ನಿಷೇದ, ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವವರಿಗೆ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನುಮತಿ ನಿರಾಕರಣೆ, ಭೂಮಾಲೀಕತ್ವ ಮತ್ತು ಭೂಸಾಗುವಳಿ ನಿಯಮಮಗಳಲ್ಲಿ ಭಾರೀ ಬದಲಾವಣೆಗಳು ಮತ್ತು ದ್ವೀಪ ಸಮೂಹಲದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುವಂತೆ ಮಾಡಿದ ನಿಯಮಗಳ ಸಡಲಿಕೆ ಮೊದಲಾದವುಗಳ ವಿರುದ್ಧ ಲಕ್ಷದ್ವೀಪದ ಬಿಜೆಪಿ ಘಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಈ ದ್ವೀಪಗಳ ನಿವಾಸಿಗಳು ಕಳೆದ ವಾರ ‘ಲಕ್ಷದ್ವೀಪ ಉಳಿಸಿ ವೇದಿಕೆ,’ ಬ್ಯಾನರ್​ನಡಿ ಪಟೇಲ್ ಅವರ ನೀತಿಗಳನ್ನು ವಿರೋಧಿಸಿ 12-ಗಂಟೆ ಅವಧಿಯ ಉಪವಾಸ-ಸತ್ಯಾಗ್ರಹ ನಡೆಸಿ ಚೆತ್ಲಾತ್ ನಿವಾಸಿಯಾಗಿರುವ ಚಿತ್ರ ನಿರ್ಮಾಪಕಿ ಸುಲ್ತಾನಾ ಅವರ ಪರ ಐಕ್ಯತೆಯನ್ನು ಪ್ರದರ್ಶಿಸಿದರು.

ಇದನ್ನೂ ಓದಿ:  Save Lakshadweep ಲಕ್ಷದ್ವೀಪದಲ್ಲಿ ಬೀಫ್ ನಿಷೇಧ, ಗೂಂಡಾ ಕಾಯ್ದೆ, ಮದ್ಯ ಮಾರಾಟಕ್ಕೆ ಅನುಮತಿ: ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಿರ್ಧಾರಕ್ಕೆ ಜನರ ಆಕ್ರೋಶ

ಇದನ್ನೂ ಓದಿ: Lakshadweep ಅಭಿಯಾನ ದಾರಿತಪ್ಪಿಸುವಂತದ್ದು; ಲಕ್ಷದ್ವೀಪದಲ್ಲಿ ಪ್ರಫುಲ್ ಪಟೇಲ್ ಅವರ ಸುಧಾರಣಾ ನೀತಿಗಳನ್ನು ಸಮರ್ಥಿಸಿಕೊಂಡ ಜಿಲ್ಲಾಧಿಕಾರಿ

Published On - 8:01 pm, Sat, 12 June 21