ಸಂಬಲಪುರದ ಕುಚಿಂಡಾದಲ್ಲಿ ಧರ್ಮೇಂದ್ರ ಪ್ರಧಾನ್ ರೋಡ್​ಶೋ; ಭರ್ಜರಿ ಜನಸ್ತೋಮ

Dharmendra Pradhan Roadshow at Kuchinda of Sambalpur Constituency: ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಧರ್ಮೇಂದ್ರ ಪ್ರಧಾನ್ ಅವರು ಬುಧವಾರ ಒಡಿಶಾದ ಸಂಬಲ್‌ಪುರದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಂಬಲ್ಪುರದ ಕುಚಿಂದಾದಲ್ಲಿ ಅವರು ಮೆಗಾ ರೋಡ್ ಶೋ ನಡೆಸಿದರು. ರೋಡ್ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದರು. ಧರ್ಮೇಂದ್ರ ಪ್ರಧಾನ್ ಅವರು ಸಾರ್ವಜನಿಕರಿಂದ ಸಿಗುತ್ತಿರುವ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.

ಸಂಬಲಪುರದ ಕುಚಿಂಡಾದಲ್ಲಿ ಧರ್ಮೇಂದ್ರ ಪ್ರಧಾನ್ ರೋಡ್​ಶೋ; ಭರ್ಜರಿ ಜನಸ್ತೋಮ
ಧರ್ಮೇಂದ್ರ ಪ್ರಧಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 10, 2024 | 4:49 PM

ಭುವನೇಶ್ವರ್, ಏಪ್ರಿಲ್ 10: ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಧರ್ಮೇಂದ್ರ ಪ್ರಧಾನ್ (Dharmendra Pradhan) ತಾವು ಸ್ಪರ್ಧಿಸಿರುವ ಸಂಬಲಪುರ್ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮುಂದುವರಿಸಿದ್ದಾರೆ. ಒಡಿಶಾ ಜಿಲ್ಲೆಯ ಸಂಬಲ್ಪುರ ಕ್ಷೇತ್ರ ವ್ಯಾಪ್ತಿಯ ಕುಚಿಂದಾದಲ್ಲಿ (Kuchinda, Sambalpur) ಧರ್ಮೇಂದ್ರ ಪ್ರಧಾನ್ ಇಂದು ಬುಧವಾರ (ಏ. 10) ಮೆಗಾ ರೋಡ್ ಶೋ ನಡೆಸಿದರು. ಅವರ ರೋಡ್ ಶೋನಲ್ಲಿ ಅಪಾರ ಸಂಖ್ಯೆಯ ಬೆಂಬಲಿಗರು ಜಮಾಯಿಸಿದ್ದರು. ಬೆಂಬಲಿಗರೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಧರ್ಮೇಂದ್ರ ಪ್ರಧಾನ್ ಪರವಾಗಿ ಘೋಷಣೆಗಳನ್ನು ಕೂಗಿದರು.

ಕೂಚಿಂದಾದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ದೂರದೂರದ ಸ್ಥಳಗಳಿಂದಲೂ ಬಹಳಷ್ಟು ಮಂದಿ ಕಾರ್ಯಕರ್ತರು, ಜನರು ಈ ಸಭೆಗೆ ಬಂದಿದ್ದರು. ರಸ್ತೆಗಳಲ್ಲಿ ಘೋಷಣೆಗಳು ಮೊಳಗಿದವು. ಮತ್ತೊಮ್ಮೆ ಮೋದಿ ಸರ್ಕಾರ್ ಎಂಬ ಘೋಷಣೆ ಎಲ್ಲೆಡೆ ಪ್ರತಿಧ್ವನಿಸಿತು.

ಇದನ್ನೂ ಓದಿ: ಸಮಾಜವಾದಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಅಖಿಲೇಶ್​ ಯಾದವ್

ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಮಹಿಳೆಯರು

ಧರ್ಮೇಂದ್ರ ಪ್ರಧಾನ್ ಅವರ ರೋಡ್ ಶೋನಲ್ಲಿ ಎಲ್ಲಾ ವಯಸ್ಸಿನ ಜನರು ಕಾಣಿಸಿಕೊಂಡರು. ಮಹಿಳೆಯರ ಸಂಖ್ಯೆಯೂ ಹೆಚ್ಚಿತ್ತು. ಈ ಅವಧಿಯಲ್ಲಿ ಧರ್ಮೇಂದ್ರ ಪ್ರಧಾನ್ ಹಲವು ಮಂದಿಯನ್ನು ಮುಖತಃ ಭೇಟಿ ಮಾಡಿ, ಬೆಂಬಲ ನೀಡುತ್ತಿರುವುದಕ್ಕೆ ಧನ್ಯವಾದ ಹೇಳಿದರು.

ಧರ್ಮೇಂದ್ರ ಪ್ರಧಾನ್ ಟ್ವೀಟ್

ವಿಕಸಿತ ಭಾರತ, ವಿಕಸಿತ ಒಡಿಶಾ ತಮ್ಮ ಪಕ್ಷದ ಗುರಿಯಾಗಿದೆ. ಜನರು ಬಿಜೆಪಿಗೆ ಅಪಾರ ಬೆಂಬಲ ನೀಡುತ್ತಿದ್ದಾರೆ ಎಂಬುದಕ್ಕೆ ಈ ಸಮಾವೇಶದಲ್ಲಿ ನೆರೆದಿರುವ ಜನಸ್ತೋಮವೇ ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವರೂ ಆದ ಧರ್ಮೇಂದ್ರ ಪ್ರಧಾನ್ ತಿಳಿಸಿದರು.

ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಬಾನ್ಸುರಿ ಸ್ವರಾಜ್​ ಕಣ್ಣಿಗೆ ಗಾಯ, ಬ್ಯಾಂಡೇಜ್​ ಹಾಕಿಕೊಂಡು ದೇವಸ್ಥಾನದಲ್ಲಿ ಪೂಜೆ

ಸಿಂಧಿ ಸಮುದಾಯವನ್ನು ಶ್ಲಾಘಿಸಿದ ಬಿಜೆಪಿ ಅಭ್ಯರ್ಥಿ ಪ್ರಧಾನ್

ಇದೇ ವೇಳೆ, ಸಂಬಲಪುರದಲ್ಲಿ ಸಿಂಧಿ ಸಮುದಾಯದ ಚೇಟಿ ಚಂದ್ ಹಬ್ಬದಲ್ಲಿ ಪಾಲ್ಗೊಂಡಿದ್ದ ಧರ್ಮೇಂದ್ರ ಪ್ರಧಾನ್, ಆ ಸಮುದಾಯದ ಜನರಿಗೆ ತಮ್ಮ ಎಕ್ಸ್ ಖಾತೆಯಲ್ಲಿ ಕೃತಜ್ಞತೆ ತಿಳಿಸಿದ್ದಾರೆ. ಅಭಿವೃದ್ಧಿ ಹೊಂದಿದ ಸಂಬಲಪುರ್ ಮತ್ತು ಅಭಿವೃದ್ಧಿ ಹೊಂದಿದ ಒಡಿಶಾಗೆ ಮೋದಿ ಗ್ಯಾರಂಟಿಯನ್ನು ಈಡೇರಿಸಲು ನನ್ನ ಸಿಂಧಿ ಸಹೋದರ ಮತ್ತು ಸಹೋದರಿಯರ ಬೆಂಬಲ ಹೀಗೆ ಮುಂದುವರಿಯುತ್ತದೆ ಎಂದು ಆಶಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ