ದೀಪಾವಳಿ ಹಬ್ಬದಂದೇ ಘೋರ ದುರಂತ: ಪ್ರತ್ಯೇಕ ಅಗ್ನಿ ಅವಘಡದಲ್ಲಿ ಹಸುಗೂಸು ಸೇರಿ 12 ಮಂದಿ ಬಲಿ
ದೀಪಾವಳಿ ಹಬ್ಬದಂದೇ ಮಧ್ಯಪ್ರದೇಶದ ಸಿಯೋನಿ ಹಾಗೂ ಕಟ್ನಿ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಗ್ನಿ ಅವಘಡಗಳಲ್ಲಿ ಎರಡು ತಿಂಗಳ ಹಸುಗೂಸು ಸೇರಿದಂತೆ ಒಟ್ಟು 12 ಮಂದಿ ಜೀವಂತವಾಗಿ ಭಸ್ಮವಾಗಿದ್ದಾರೆ. ಎರಡೂ ಘಟನೆಗಳಿಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ಮುಂದುವರಿದಿದೆ.

ಭೋಪಾಲ್, ನವೆಂಬರ್ 09: ದೀಪಾವಳಿ ಸಂಭ್ರಮದ ನಡುವೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಚಿನ್ನದ ವ್ಯಾಪಾರಿಯೊಬ್ಬರಿಗೆ ಸೇರಿದ ಮೂರು ಅಂತಸ್ತಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಜಾನೆ 4ರಿಂದ 4.30ರ ನಡುವೆ ಛಪಾರಾ ಪಟ್ಟಣದ ಮಹಾವೀರ್ ವಾರ್ಡ್‌ನಲ್ಲಿರುವ ಜೈನ ಮಂದಿರದ ಸಮೀಪ ಈ ಘಟನೆ ನಡೆದಿದೆ. ಮನೆ ಚಿನ್ನದ ವ್ಯಾಪಾರಿ ಕುಂದನ್ ಲಾಲ್ ಸೋನಿ ಅವರಿಗೆ ಸೇರಿದ್ದು ಎನ್ನಲಾಗಿದೆ.
ಕಟ್ಟಡದಲ್ಲಿದ್ದ ನಾಲ್ವರ ರಕ್ಷಣೆ
VIDEO | Six members of a family were killed, and four others suffered injuries after a massive fire broke out at the three-storey house of a goldsmith in Madhya Pradesh’s Seoni district early on Monday.
The incident occurred between 4 am and 4.30 am, a day after Diwali, at the house of goldsmith Kundan Lal Soni near a Jain temple in Mahavir Ward in Chhapara town.
(Full video available on PTI Videos – https://t.co/bIyFWTfmBd)
— Press Trust of India (@PTI_News) November 9, 2026
ಮೃತರನ್ನು ಕುಂದನ್ ಲಾಲ್ ಸೋನಿ (75), ಅವರ ಪತ್ನಿ ರಾಜಕುಮಾರಿ ಸೋನಿ (65), ರಿತು ಸೋನಿ (42), ಸ್ಮೃತಿ ಸೋನಿ (40), ಸೂರ್ಯ ಸೋನಿ (45) ಮತ್ತು ಆದಿತ್ಯ ಸೋನಿ (16) ಎಂದು ಗುರುತಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಒಟ್ಟು 10 ಮಂದಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಉಳಿದ ನಾಲ್ವರನ್ನು ಸುರಕ್ಷಿತವಾಗಿ ಕಟ್ಟಡದಿಂದ ಹೊರತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಡಿವೈಡರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು, 5 ಮಂದಿ ಸಜೀವ ದಹನ
ಹಸುಗೂಸು ಸೇರಿ 6 ಮಂದಿ ಸಾವು
VIDEO | Katni, Madhya Pradesh: Six members of a family, including a two-month-old infant, were killed after a fire broke out in a building on Diwali night. Visuals from the incident site.
(Full video available on PTI Videos – https://t.co/d8jp61yd2p) https://t.co/3Dpeb9GFGJ
— Press Trust of India (@PTI_News) November 9, 2026
ಮತ್ತೊಂದೆಡೆ ಕಟ್ನಿ ಜಿಲ್ಲೆಯಲ್ಲಿ ಬರಹಿ ಪ್ರದೇಶದ ಪಾತ್ರೆ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ಬಳಿಕ ಮೂರು ಅಂತಸ್ತಿನ ಕಟ್ಟಡಕ್ಕೆ ವ್ಯಾಪಿಸಿದೆ. ಈ ದುರಂತದಲ್ಲಿ ಎರಡು ತಿಂಗಳ ಹಸುಗೂಸು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸದೆ ಕೆಟ್ಟು ನಿಂತಿದ್ದರಿಂದ ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ವರದಿಗಳು ತಿಳಿಸಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




