AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶ ರಾಜ್ಯಸಭೆ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳ ನಾಮಪತ್ರ ರದ್ದು; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವಿರೋಧ ಆಯ್ಕೆ

ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಹರ್ದೀಪ್ ಸಿಂಗ್ ಪುರಿ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಕಣದಲ್ಲಿದ್ದ ಉಳಿದ ಇಬ್ಬರು ಅಭ್ಯರ್ಥಿಗಳ ನಾಮಪತ್ರಗಳು ಪರಿಶೀಲನೆ ವೇಳೆ ರದ್ದಾದ ಹಿನ್ನೆಲೆಯಲ್ಲಿ, ಪುರಿ ಅವರು ಏಕೈಕ ಅಭ್ಯರ್ಥಿಯಾಗಿ ಉಳಿದುಕೊಂಡಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಇಂದು ಚುನಾವಣಾಧಿಕಾರಿಗಳು ಅವರನ್ನು ವಿಜೇತ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಕೇಂದ್ರ ಸಚಿವ ಎಲ್. ಮುರುಗನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ರಾಜ್ಯಸಭಾ ಸ್ಥಾನ ತೆರವಾಗಿತ್ತು. ಹರ್ದೀಪ್ ಸಿಂಗ್ ಪುರಿ ಅವರು ಪ್ರಸ್ತುತ ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದು, ಅವರ ಅವಧಿ ನವೆಂಬರ್ 25ಕ್ಕೆ ಕೊನೆಗೊಳ್ಳಲಿದೆ.

ಮಧ್ಯಪ್ರದೇಶ ರಾಜ್ಯಸಭೆ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳ ನಾಮಪತ್ರ ರದ್ದು; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವಿರೋಧ ಆಯ್ಕೆ
ಹರ್ದೀಪ್ ಸಿಂಗ್ ಪುರಿImage Credit source: PTI
ಸುಷ್ಮಾ ಚಕ್ರೆ
|

Updated on:Nov 05, 2026 | 8:53 PM

Share

ಭೋಪಾಲ್, ನವೆಂಬರ್ 5: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಹರ್ದೀಪ್ ಸಿಂಗ್ ಪುರಿ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ನಡೆಯಬೇಕಿದ್ದ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಇಂದು (ನ. 5) ಚುನಾವಣಾಧಿಕಾರಿ ಉಮೇಶ್ ಶರ್ಮಾ ಅವರು ಪುರಿ ಅವರನ್ನು ವಿಜೇತ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಎದುರಾಳಿಗಳ ನಾಮಪತ್ರ ರದ್ದು:

ಚುನಾವಣಾ ಕಣದಲ್ಲಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜಕುಮಾರ್ ಲೋಹಾನಿ ನಿಗದಿತ ಅವಧಿಯೊಳಗೆ ಅಫಿಡವಿಟ್ ಸಲ್ಲಿಸದ ಕಾರಣ ಅವರ ನಾಮಪತ್ರ ರದ್ದಾಗಿದೆ. ಪಕ್ಷೇತರ ಅಭ್ಯರ್ಥಿ ಕಾಂತೆ ಸಾಯಣ್ಣ ಅವರ ನಾಮಪತ್ರ ಪರಿಶೀಲನೆ ವೇಳೆ ರದ್ದುಗೊಂಡಿತು. ಇದರಿಂದಾಗಿ ಕಣದಲ್ಲಿದ್ದ ಏಕೈಕ ಅಭ್ಯರ್ಥಿಯಾದ ಹರ್ದೀಪ್ ಸಿಂಗ್ ಪುರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ಎಪ್‌ಸ್ಟೀನ್ ವಿವಾದ ಹಾಗೂ ಕಾಂಗ್ರೆಸ್ ಟೀಕೆಗಳಿಗೆ ಬಿಜೆಪಿ ತಿರುಗೇಟು: ಹರ್ದೀಪ್ ಸಿಂಗ್ ಪುರಿಗೆ ಮಧ್ಯಪ್ರದೇಶದಿಂದ ರಾಜ್ಯಸಭಾ ಟಿಕೆಟ್

ಕೇಂದ್ರ ಸಚಿವ ಎಲ್. ಮುರುಗನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಈ ರಾಜ್ಯಸಭಾ ಸ್ಥಾನ ತೆರವಾಗಿತ್ತು. ಮಧ್ಯಪ್ರದೇಶದ ಬಿಜೆಪಿ ರಾಜ್ಯ ಅಧ್ಯಕ್ಷ ಹೇಮಂತ್ ಖಂಡೇಲ್ವಾಲ್ ಅವರು ಭೋಪಾಲ್‌ನ ವಿಧಾನಸೌಧದಲ್ಲಿ ಪುರಿ ಅವರ ಪರವಾಗಿ ಆಯ್ಕೆಯ ಅಧಿಕೃತ ಪ್ರಮಾಣಪತ್ರವನ್ನು ಸ್ವೀಕರಿಸಿದರು.

ವಿಪಕ್ಷ ಕಾಂಗ್ರೆಸ್ ಮತ್ತು ಎದುರಾಳಿ ಅಭ್ಯರ್ಥಿಗಳು ಹರ್ದೀಪ್ ಸಿಂಗ್ ಪುರಿ ಅವರ ‘ಫಾರ್ಮ್ 26’ ಅಫಿಡವಿಟ್ ಅಪೂರ್ಣವಾಗಿದೆ ಎಂದು ಆಕ್ಷೇಪ ಎತ್ತಿ, ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದ್ದರು. ಆದರೆ ಆಕ್ಷೇಪಣೆಯನ್ನು ಪರಿಶೀಲಿಸಿದ ಚುನಾವಣಾಧಿಕಾರಿ, ಪುರಿ ಅವರ ನಾಮಪತ್ರವು ಜನಪ್ರಾತಿನಿಧ್ಯ ಕಾಯ್ದೆಯ ನಿಯಮಾವಳಿಗಳಿಗೆ ಬದ್ಧವಾಗಿದ್ದು, ಯಾವುದೇ ಲೋಪವಿಲ್ಲ ಎಂದು ಸ್ಪಷ್ಟಪಡಿಸಿ ಆಕ್ಷೇಪಣೆಯನ್ನು ವಜಾಗೊಳಿಸಿದ್ದರು.

ಇದನ್ನೂ ಓದಿ: ಉತ್ತರ ಪ್ರದೇಶ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೇರಿ 8 ಹಾಲಿ ಸದಸ್ಯರಿಗಿಲ್ಲ ಟಿಕೆಟ್

ರಾಜಕೀಯ ಪ್ರವೇಶಿಸುವ ಮೊದಲು ಹರ್ದೀಪ್ ಸಿಂಗ್ ಪುರಿ 1974ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (ಐಎಫ್​ಎಸ್​) ಅಧಿಕಾರಿಯಾಗಿದ್ದರು. ಸಂಯುಕ್ತ ರಾಷ್ಟ್ರಸಂಘದಲ್ಲಿ ಭಾರತದ ಖಾಯಂ ಪ್ರತಿನಿಧಿ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ 2013ರಲ್ಲಿ ನಿವೃತ್ತರಾದರು.

2014ರ ಜನವರಿ 2ರಂದು ಬಿಜೆಪಿಗೆ ಸೇರ್ಪಡೆಗೊಂಡ ಹರ್ದೀಪ್ ಸಿಂಗ್ ಪುರಿ, ಮೋದಿ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಈ ಮೊದಲು ಅವರು ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಹರ್ದೀಪ್ ಸಿಂಗ್ ಪುರಿ ಅವರು ಪ್ರಸ್ತುತ ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದು, ಅವರ ಅವಧಿ ನವೆಂಬರ್ 25ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ, ಕೇಂದ್ರ ಸಚಿವರಾಗಿ ಮುಂದುವರೆಯಲು ಅವರು ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು.

ಹರ್ದೀಪ್ ಸಿಂಗ್ ಪುರಿ ವಿವಾದ:

ಇತ್ತೀಚೆಗೆ ಭಾರತೀಯ ರಾಜಕೀಯದಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಅಮೆರಿಕದ ವಿವಾದಾತ್ಮಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ನಡುವಿನ ಸಂಪರ್ಕದ ಆರೋಪಗಳು ಸುದ್ದಿಯಲ್ಲಿದ್ದವು. ಅಮೆರಿಕದ ನ್ಯಾಯಾಂಗ ಇಲಾಖೆಯು ಜೆಫ್ರಿ ಎಪ್‌ಸ್ಟೀನ್ ಸಂಬಂಧಿತ ಸಾರ್ವಜನಿಕ ದಾಖಲೆಗಳು ಮತ್ತು ಇಮೇಲ್‌ಗಳನ್ನು ಬಿಡುಗಡೆ ಮಾಡಿದಾಗ, ಅದರಲ್ಲಿ ಹರ್ದೀಪ್ ಸಿಂಗ್ ಪುರಿ ಅವರ ಹೆಸರು ಹಾಗೂ ಇಮೇಲ್ ವ್ಯವಹಾರಗಳು ಉಲ್ಲೇಖವಾಗಿದ್ದವು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ವಿಪಕ್ಷಗಳ ನಾಯಕರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ಸಚಿವರೊಬ್ಬರು ಎಪ್‌ಸ್ಟೀನ್ ಜೊತೆ ಸಂಪರ್ಕದಲ್ಲಿದ್ದರು ಎಂದು ಆರೋಪಿಸಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಒಟ್ಟಿಗೆ ಇರುವ ಕೆಲ ಹಳೆಯ ಫೋಟೋಗಳು ವೈರಲ್ ಆಗಿ ವಿಪಕ್ಷಗಳ ಕಟು ಟೀಕೆಗೆ ಗುರಿಯಾಗಿದ್ದವು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸಂಪೂರ್ಣ ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ್ದರು. ತಾವು 2013-14ರ ಸಮಯದಲ್ಲಿ ‘ಇಂಟರ್ನ್ಯಾಷನಲ್ ಪೀಸ್ ಇನ್ಸ್ಟಿಟ್ಯೂಟ್’ (ಸಂಸ್ಥೆಯಲ್ಲಿದ್ದಾಗ, ಸಂಸ್ಥೆಯ ಡೆಲಿಗೇಷನ್ ಭಾಗವಾಗಿ ಜೆಫ್ರಿ ಎಪ್‌ಸ್ಟೀನ್ ಅವರನ್ನು ಕೇವಲ ಮೂರ್ನಾಲ್ಕು ಬಾರಿ ಭೇಟಿಯಾಗಿದ್ದಾಗಿ ತಿಳಿಸಿದ್ದರು. ಈ ಭೇಟಿಗಳು ಕೇವಲ ವೃತ್ತಿಪರ ಮಾತುಕತೆಗಳಾಗಿದ್ದವೇ ಹೊರತು, ಎಪ್‌ಸ್ಟೀನ್ ಎಸಗಿದ ಯಾವುದೇ ಅಕ್ರಮ ಅಥವಾ ಲೈಂಗಿಕ ಅಪರಾಧ ಕೃತ್ಯಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:52 pm, Thu, 5 November 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!