ತಮಿಳುನಾಡು ವಿತ್ತ ಸಚಿವ ತಿಯಾಗ ರಾಜನ್​​ರಿಂದ ರಾಜ್ಯ ಹಣಕಾಸು ಕುರಿತು ಶ್ವೇತಪತ್ರ ಬಿಡುಗಡೆ

Tamil Nadu: ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಘಟಕಗಳಾದ ವಿದ್ಯುತ್ ಬಳಕೆ ಟಿಎನ್ಇಬಿ (TNEB) ಮತ್ತು ಸಾರ್ವಜನಿಕ ಸಾರಿಗೆ ನಿಗಮವು ವರ್ಷದಿಂದ ವರ್ಷಕ್ಕೆ ಸಾಲವನ್ನು ಹೆಚ್ಚಿಸುತ್ತಿವೆ. ಉದಾಹರಣೆಗೆ, ರಾಜ್ಯ ಬಸ್‌ ಸಂಚರಿಸುವ ಪ್ರತಿ ಕಿಲೋಮೀಟರಿಗೆ ರಾಜ್ಯವು 59.15 ರೂಪಾಯಿಗಳನ್ನು ಕಳೆದುಕೊಳ್ಳುತ್ತಿದೆ

ತಮಿಳುನಾಡು ವಿತ್ತ ಸಚಿವ ತಿಯಾಗ ರಾಜನ್​​ರಿಂದ ರಾಜ್ಯ ಹಣಕಾಸು ಕುರಿತು ಶ್ವೇತಪತ್ರ ಬಿಡುಗಡೆ
ತಿಯಾಗ ರಾಜನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 10, 2021 | 3:01 PM

ಚೆನ್ನೈ: ತಮಿಳುನಾಡಿನ ಡಿಎಂಕೆ ಸರ್ಕಾರವು ಸೋಮವಾರ ರಾಜ್ಯದ ಹಣಕಾಸು ಕುರಿತು ಶ್ವೇತಪತ್ರ ಬಿಡುಗಡೆ  ಮಾಡಿದ್ದು, ಹಿಂದಿನ ಎಐಎಡಿಎಂಕೆ ಸರ್ಕಾರದ ಅವ್ಯವಸ್ಥೆಯಿಂದ ಉಂಟಾದ ಹಣಕಾಸಿನ ಅಸಮತೋಲನ ಮತ್ತು ಹೆಚ್ಚುತ್ತಿರುವ ಸಾಲವನ್ನು ಇದು ಎತ್ತಿತೋರಿಸಿದೆ. ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತಿಯಾಗ ರಾಜನ್ ಅವರು ಹಿಂದಿನ ಎಐಎಡಿಎಂಕೆ ಸರ್ಕಾರದ “ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ಕೌಶಲ್ಯದ ಕೊರತೆ” ಭಾರೀ ಸಾಲದ ಹೊರೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ತಮಿಳುನಾಡಿಗೆ ಜಿಎಸ್​​ಟಿ ಬಾಕಿಗಳು ಇದ್ದಾಗಲೂ ರಾಜ್ಯದ ಸ್ವಂತ ತೆರಿಗೆ ಆದಾಯವನ್ನು ಕಡಿಮೆ ಮಾಡಿದೆ. ಹಣಕಾಸಿನ ಕುಸಿತವು ರಾಜ್ಯವನ್ನು ಬೆಳವಣಿಗೆಯ ಹಾದಿಗೆ ತರಲು ಡಿಎಂಕೆಗೆ ಒಂದು ತಲೆಮಾರಿನ ಸುಧಾರಣೆಗಳನ್ನು ಆರಂಭಿಸಲು ಒಂದು ಅಪರೂಪದ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಶ್ವೇತಪತ್ರದ ಪ್ರಕಾರ ರಾಜ್ಯದ ಸಾಲದ ಹೊರೆ 5.70 ಲಕ್ಷ ಕೋಟಿಗಳಷ್ಟಿದ್ದು, ಪ್ರತಿ ನಾಗರಿಕ ಮೇಲಿನ ಸಾಲವು 1.10 ಲಕ್ಷದಷ್ಟಿದೆ. ತಮಿಳುನಾಡಿನ ಆದಾಯ ಕೊರತೆಯು ರಾಜ್ಯದ ಹಣಕಾಸಿನ ಕೊರತೆಯ ಶೇಕಡಾವಾರು ಪ್ರಮಾಣದಲ್ಲಿ ಸ್ಥಿರವಾದ ಹೆಚ್ಚಳವನ್ನು ತೋರಿಸುತ್ತಿದೆ. ಆ ಮೂಲಕ ಬಂಡವಾಳದ ವೆಚ್ಚದ ಬದಲಾಗಿ ಪ್ರಸ್ತುತ ಹಣವನ್ನು ಹೊಸ ನಿಧಿಯ ಬಳಕೆಯನ್ನು ಮಾಡುತ್ತಿದೆ.

ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಘಟಕಗಳಾದ ವಿದ್ಯುತ್ ಬಳಕೆ ಟಿಎನ್ಇಬಿ (TNEB) ಮತ್ತು ಸಾರ್ವಜನಿಕ ಸಾರಿಗೆ ನಿಗಮವು ವರ್ಷದಿಂದ ವರ್ಷಕ್ಕೆ ಸಾಲವನ್ನು ಹೆಚ್ಚಿಸುತ್ತಿವೆ. ಉದಾಹರಣೆಗೆ, ರಾಜ್ಯ ಬಸ್‌ ಸಂಚರಿಸುವ ಪ್ರತಿ ಕಿಲೋಮೀಟರಿಗೆ ರಾಜ್ಯವು 59.15 ರೂಪಾಯಿಗಳನ್ನು ಕಳೆದುಕೊಳ್ಳುತ್ತಿದೆ. ಆದರೆ ಪ್ರತಿ ಯೂನಿಟ್ ವಿದ್ಯುತ್‌ಗೆ ರಾಜ್ಯವು 2.36 ರೂಪಾಯಿಗಳನ್ನು ಕಳೆದುಕೊಳ್ಳುತ್ತದೆ. ಅಂದರೆ ಹೆಚ್ಚು ವಿದ್ಯುತ್ ಉತ್ಪಾದನೆ ಮತ್ತು ವಿತರಣೆ, ನಷ್ಟ ಹೆಚ್ಚು.

ಹಣಕಾಸು ಸಚಿವರು 2012-13 ಸಂಖ್ಯೆಗಳೊಂದಿಗೆ ಪರಿಸ್ಥಿತಿಯನ್ನು ವಿವರಿಸಿದ್ದಾರೆ.  ಆಗ ರೂ 1,760 ಕೋಟಿ ಹೆಚ್ಚುವರಿ ಆದಾಯವಿತ್ತು. 2019-20ರ ಆರ್ಥಿಕ ವರ್ಷದಲ್ಲಿ, ಕೊರತೆಯು 35,909 ಕೋಟಿಗೆ ಏರಿದೆ. ಪರಿಸ್ಥಿತಿಯು ಅಪಾಯಕಾರಿಯಾಗಿದ್ದರೂ, ಹಿಂಪಡೆಯಲಾಗದು ಎಂದು ಹೇಳಲಾಗುವುದಿಲ್ಲ. ಪ್ರಸ್ತುತ ಅಧಿಕಾರಾವಧಿ ಮುಗಿಯುವ ಮೊದಲು ಡಿಎಂಕೆ ಸರ್ಕಾರ ಈ  ಪರಿಸ್ಥಿತಿಯನ್ನು ಬದಲಿಸಬಹುದು ಎಂದು ತಿಯಾಗ ರಾಜನ್ ಹೇಳಿದರು.

ಇದನ್ನೂ ಓದಿ:  Ujjwala Scheme 2.0: ಉಜ್ವಲ ಯೋಜನೆಯ ಲಾಭಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

(DMK government in Tamil Nadu released a White Paper on the states finances)

Published On - 3:01 pm, Tue, 10 August 21

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ