ಭಾರತ ಎಂದಿಗೂ ಒಂದು ರಾಷ್ಟ್ರವಾಗಿರಲಿಲ್ಲ: ಡಿಎಂಕೆ ನಾಯಕ ಎ ರಾಜಾ ವಿವಾದಾತ್ಮಕ ಹೇಳಿಕೆ
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಸನಾತನ ವಿರೋಧಿ ಹೇಳಿಕೆಗಳಿಗಾಗಿ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಹೀಗಿದ್ದರೂ ಸನಾತನ ಧರ್ಮದ ಬಗ್ಗೆ ಡಿಎಂಕೆ ನಾಯಕರ ವಾಗ್ದಾಳಿ ನಿಂತಿಲ್ಲ. ಭಾರತವು ಒಂದು ರಾಷ್ಟ್ರವಲ್ಲ. ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಭಾರತ ಎಂದಿಗೂ ರಾಷ್ಟ್ರವಾಗಿರಲಿಲ್ಲ, ಅದು ಉಪಖಂಡ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಸನಾತನ ಧರ್ಮದ ಬಗ್ಗೆ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಡಿಎಂಕೆ ನಾಯಕ ಎ ರಾಜಾ ಇದೀಗ ಭಾರತ ಎಂದಿಗೂ ಒಂದು ರಾಷ್ಟ್ರವಾಗಿರಲಿಲ್ಲ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತವು ಒಂದು ರಾಷ್ಟ್ರವಲ್ಲ, ಈ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ, ಭಾರತ ಒಂದು ಉಪಖಂಡ ಎಂದು ಹೇಳಿದ್ದಾರೆ.
ಮಾರ್ಚ್ 4 ರಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರ ಸನಾತನ ವಿರೋಧಿ ಹೇಳಿಕೆಗಾಗಿ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವ ಸಮಯದಲ್ಲಿ ರಾಜಾ ಅವರ ಹೇಳಿಕೆ ಹೊರಬಿದ್ದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡ ನೀವು ಈಗ ಪರಿಹಾರ ಕೇಳುತ್ತಿದ್ದೀರಿ, ನೀವು ಸಾಮಾನ್ಯರಲ್ಲ, ರಾಜಕಾರಣಿ’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಹನುಮಂತನನ್ನು ಕೋತಿಗೆ ಹೋಲಿಸಿರುವ ರಾಜಾ ನಾವೆಲ್ಲರೂ ರಾಮನ ಶತ್ರುಗಳು. ರಾಮಾಯಣ ಮತ್ತು ರಾಮನಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳಿದರು. ಭಗವಾನ್ ಹನುಮಂತನನ್ನು ಕೋತಿಗೆ ಹೋಲಿಸಿದ ಅವರು ಜೈ ಶ್ರೀ ರಾಮ್ ಘೋಷಣೆಯನ್ನು ಅಸಹ್ಯಕರ ಎಂದು ಕರೆದಿದ್ದಾರೆ.
ರಾಜಾ ಸಂಪೂರ್ಣ ಹೇಳಿಕೆ ಏನು? ಭಾರತ ಎಂದಿಗೂ ರಾಷ್ಟ್ರವಾಗಿರಲಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಎ ರಾಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಒಂದು ರಾಷ್ಟ್ರ ಎಂದರೆ ಒಂದು ಭಾಷೆ, ಒಂದು ಸಂಪ್ರದಾಯ ಮತ್ತು ಒಂದು ಸಂಸ್ಕೃತಿ. ಆಗ ಮಾತ್ರ ಅದು ರಾಷ್ಟ್ರವಾಗುತ್ತದೆ. ಭಾರತ ಒಂದು ರಾಷ್ಟ್ರವಲ್ಲ, ಆದರೆ ಒಂದು ಉಪಖಂಡ.
ಮತ್ತಷ್ಟು ಓದಿ: Stalin: ನೀವೊಬ್ರು ಮಿನಿಸ್ಟರು, ಜವಾಬ್ದಾರಿ ಇರಲಿ: ಸನಾತನ ಧರ್ಮ ಅಳಿಸಬೇಕೆಂದಿದ್ದ ಉದಯನಿಧಿ ಸ್ಟಾಲಿನ್ಗೆ ಸುಪ್ರೀಂ ತರಾಟೆ
ಭಾರತವನ್ನು ಉಪಖಂಡ ಎಂದು ಕರೆಯಲು ಕಾರಣವನ್ನು ವಿವರಿಸಿದ ಅವರು, “ಇಲ್ಲಿ ತಮಿಳು ಒಂದು ರಾಷ್ಟ್ರ ಮತ್ತು ದೇಶವಾಗಿದೆ. ಮಲಯಾಳಂ ಒಂದು ಭಾಷೆ, ಒಂದು ರಾಷ್ಟ್ರ ಮತ್ತು ಒಂದು ದೇಶ. ಒರಿಯಾ ಒಂದು ರಾಷ್ಟ್ರ, ಒಂದು ಭಾಷೆ ಮತ್ತು ಒಂದು ದೇಶ. ಈ ಎಲ್ಲಾ ರಾಷ್ಟ್ರಗಳು ಸೇರಿ ಭಾರತವನ್ನು ಮಾಡಿದರೆ ಭಾರತ ದೇಶವಲ್ಲ. ಇದೊಂದು ಉಪಖಂಡ.
ತಮಿಳುನಾಡು, ಕೇರಳ ಮತ್ತು ದೆಹಲಿ ವಿಭಿನ್ನ ಸಂಸ್ಕೃತಿಗಳನ್ನು ಹೊಂದಿವೆ ಅಲ್ಲಿ ಅನೇಕ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳಿವೆ. ತಮಿಳುನಾಡಿಗೆ ಬಂದರೆ ಅಲ್ಲೊಂದು ಸಂಸ್ಕೃತಿ ಇದೆ. ಕೇರಳದಲ್ಲಿ ಇನ್ನೊಂದು ಸಂಸ್ಕೃತಿ ಇದೆ. ದೆಹಲಿಯಲ್ಲಿ ಇನ್ನೊಂದು ಸಂಸ್ಕೃತಿ ಇದೆ. ಒರಿಯಾದಲ್ಲಿ ಇನ್ನೊಂದು ಸಂಸ್ಕೃತಿ ಇದೆ.
ಮಣಿಪುರದ ಜನರು ನಾಯಿ ಮಾಂಸ ತಿನ್ನುತ್ತಾರೆ, ಈ ಸತ್ಯವನ್ನು ಒಪ್ಪಿಕೊಳ್ಳಿ. ಒಂದು ಸಮುದಾಯವು ಗೋಮಾಂಸ ತಿಂದರೆ ನಿಮಗೇನು ಸಮಸ್ಯೆ? ಅವರು ನಿಮ್ಮನ್ನು ತಿನ್ನಲು ಕೇಳಿದ್ದಾರೆಯೇ? ಆದ್ದರಿಂದ, ವಿವಿಧತೆಯಲ್ಲಿ ಏಕತೆಯ ಹೊರತಾಗಿಯೂ, ನಮ್ಮಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ಒಪ್ಪಿಕೊಳ್ಳಿ ಎಂದಿದ್ದಾರೆ. ಈ ಮೊದಲು ಎ ರಾಜಾ ಅವರು ಸನಾತನ ಧರ್ಮವನ್ನು ಎಚ್ಐವಿ ಹಾಗೂ ಕುಷ್ಠರೋಗಕ್ಕೆ ಹೋಲಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ