Email -SMS ಕಡೆಗಣನೆ.. ಏನಿದು ಆದಾಯ ತೆರಿಗೆ ಇಲಾಖೆಯ ಹೊಸ ಎಚ್ಚರಿಕೆ

| Updated By: ಸಾಧು ಶ್ರೀನಾಥ್​

Updated on: Nov 20, 2020 | 1:30 PM

ಬೆಂಗಳೂರು: ಆದಾಯ ತೆರಿಗೆ ಇಲಾಖೆ (ಇನ್​ಕಂ ಟ್ಯಾಕ್ಸ್ ಡಿಪಾರ್ಟ್​ಮೆಂಟ್​​ ) ಕಳುಹಿಸುವ ಎಷ್ಟೋ ಎಸ್ಎಂ​ಎಸ್​ಗಳನ್ನು ಸಾರ್ವಜನಿಕರು ಗಮನಿಸುವುದೇ ಇಲ್ಲ. ಜನರಿಗೆ ಸಹಾಯವಾಗುವಂತಹ ಎಷ್ಟೋ ಮಾಹಿತಿಗಳನ್ನು ಈ-ಮೇಲ್​ ಮೂಲಕ ಕಳಿಸಲಾಗುತ್ತದೆ. ‘ನಾವು ಕಳುಹಿಸುವ ಸಂದೇಶಗಳನ್ನು ಯಾವುದೇ ಕಾರಣಕ್ಕೆ ಕಡೆಗಣಿಸದಿರಿ’ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ. ತೆರಿಗೆ ಮರುಪಾವತಿಯ​ನ್ನು ಜನರು ನೇರವಾಗಿ ಅಕೌಂಟ್​ಗೆ ಹಾಕಬಹುದು.. ಕೊರೊನಾ ಸಂಕಟ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ತೆರಿಗೆ ಮರುಪಾವತಿಯ​ನ್ನು ನೇರವಾಗಿ ಅಕೌಂಟ್​ಗೆ ಹಾಕುವ ಅವಕಾಶವನ್ನು ಜನರಿಗೆ ನೀಡಿದೆ. ಈ […]

Email -SMS ಕಡೆಗಣನೆ.. ಏನಿದು ಆದಾಯ ತೆರಿಗೆ ಇಲಾಖೆಯ ಹೊಸ ಎಚ್ಚರಿಕೆ
Follow us on

ಬೆಂಗಳೂರು: ಆದಾಯ ತೆರಿಗೆ ಇಲಾಖೆ (ಇನ್​ಕಂ ಟ್ಯಾಕ್ಸ್ ಡಿಪಾರ್ಟ್​ಮೆಂಟ್​​ ) ಕಳುಹಿಸುವ ಎಷ್ಟೋ ಎಸ್ಎಂ​ಎಸ್​ಗಳನ್ನು ಸಾರ್ವಜನಿಕರು ಗಮನಿಸುವುದೇ ಇಲ್ಲ. ಜನರಿಗೆ ಸಹಾಯವಾಗುವಂತಹ ಎಷ್ಟೋ ಮಾಹಿತಿಗಳನ್ನು ಈ-ಮೇಲ್​ ಮೂಲಕ ಕಳಿಸಲಾಗುತ್ತದೆ. ‘ನಾವು ಕಳುಹಿಸುವ ಸಂದೇಶಗಳನ್ನು ಯಾವುದೇ ಕಾರಣಕ್ಕೆ ಕಡೆಗಣಿಸದಿರಿ’ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.

ತೆರಿಗೆ ಮರುಪಾವತಿಯ​ನ್ನು ಜನರು ನೇರವಾಗಿ ಅಕೌಂಟ್​ಗೆ ಹಾಕಬಹುದು..
ಕೊರೊನಾ ಸಂಕಟ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ತೆರಿಗೆ ಮರುಪಾವತಿಯ​ನ್ನು ನೇರವಾಗಿ ಅಕೌಂಟ್​ಗೆ ಹಾಕುವ ಅವಕಾಶವನ್ನು ಜನರಿಗೆ ನೀಡಿದೆ. ಈ ಕಾರಣದಿಂದಾಗಿ ತೆರಿಗೆದಾರರಿಗೆ ಈ-ಮೇಲ್​ ಕಳುಹಿಸುವ ಮೂಲಕ ಮಾಹಿತಿ ನೀಡಲಾಗುತ್ತಿದೆ.  ಹಾಗೂ ಇನ್​ಕಂ ಟ್ಯಾಕ್ಸ್​ ಡಿಪಾರ್ಟ್​ಮೆಂಟ್​ನಿಂದ ಈ-ಮೇಲ್ ಬಂದಿದೆ ಎಂದಾದರೆ ಅದು ಮಹತ್ವಪೂರ್ಣದ್ದೇ ಆಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಯಾವುದು ಸತ್ಯ ಹಾಗೂ ಯಾವುದು ಸುಳ್ಳು ಎಂಬುದು ತೆರಿಗೆದಾರರ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಯನ್ನು ಅರಿತ ಇನ್​ಕಂ ಟ್ಯಾಕ್ಸ್ ಡಿಪಾರ್ಟ್​ಮೆಂಟ್ ಕೆಲವು ದಿನಗಳ ಹಿಂದೆ ಈ-ಮೇಲ್ ಕಳುಹಿಸುವ ಮೂಲಕ, ತೆರಿಗೆದಾರರಿಗೆ ಈ-ಮೇಲ್ ಐಡಿ ಹಾಗೂ ಎಸ್​ಎಂ​ಎಸ್ ಸೆಂಡರ್ ಐಡಿ ಮತ್ತು ವೆಬ್​ ಸೈಟ್​ನ ಮಾಹಿತಿಯನ್ನು ನೀಡಿದೆ. ಈ-ಮೇಲ್​ನಲ್ಲಿ ಇರುವ ಲಿಸ್ಟ್ ​ಹೊರತುಪಡಿಸಿ ಬೇರೆ ಏನಾದರೂ ಸಂದೇಶಗಳು ಬಂದಲ್ಲಿ, ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದೆ.