ಬಿಜೆಪಿಗೆ ಮತ ಹಾಕಿದರೆ ನಿಮಗೆ ತೊಂದರೆ ಗ್ಯಾರಂಟಿ ಎಂದು ಬೆದರಿಕೆ ಹಾಕಿದ ಟಿಎಂಸಿ ಶಾಸಕ; ವಿಡಿಯೋ ಶೇರ್ ಮಾಡಿದ ಬಿಜೆಪಿ ನಾಯಕ
‘ನೀವು ಬಿಜೆಪಿಗೆ ಮತ ಹಾಕಬೇಡಿ. ಬಿಜೆಪಿಗೆ ಮತ ಹಾಕದೆ ಇರುವವರು ಮಾತ್ರ ಈ ರಾಜ್ಯದಲ್ಲಿ ಉಳಿದುಕೊಳ್ಳಬಹುದು, ಉದ್ಯೋಗ ಮಾಡಬಹುದು. ಅಷ್ಟೇ ಅಲ್ಲ ಉದ್ಯಮವನ್ನೂ ಮಾಡಿಕೊಳ್ಳಬಹುದು. ಎಲ್ಲದಕ್ಕೂ ನಾವು ಸಹಾಯ ಮಾಡುತ್ತೇವೆ‘ ಎಂದು ಟಿಎಂಸಿ ಶಾಸಕ ಹೇಳಿದ್ದಾರೆ.
ಬಿಜೆಪಿಗೆ ಮತಹಾಕಬೇಡಿ ಎಂದು ಮತದಾರರಿಗೆ ಟಿಎಂಸಿ ಶಾಸಕ (TMC MLA) ನರೇನ್ ಚಕ್ರಬರ್ತಿ ಬೆದರಿಕೆ ಹಾಕುತ್ತಿರುವ ವಿಡಿಯೋವೊಂದನ್ನು ಬಿಜೆಪಿ ಪಶ್ಚಿಮ ಬಂಗಾಳ ಸಹ ಉಸ್ತುವಾರಿ ಅಮಿತ್ ಮಾಳ್ವಿಯಾ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು (Election Commission) ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಇಂಥ ಶಾಸಕರನ್ನೆಲ್ಲ ಇಟ್ಟುಕೊಂಡು ಪೋಷಿಸುತ್ತಿದ್ದಾರಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರನ್ನೂ ಟೀಕಿಸಿದ್ದಾರೆ. ಬಿಜೆಪಿ ಬೆಂಬಲಿಗರ ಬಳಿ ನರೇನ್ ಚಕ್ರವರ್ತಿ ಮಾತನಾಡಿದ ವಿಡಿಯೋ ಇದು. ‘ನೀವು ಬಿಜೆಪಿಗೆ ಮತ ಹಾಕಬೇಡಿ. ಬಿಜೆಪಿಗೆ ಮತ ಹಾಕದೆ ಇರುವವರು ಮಾತ್ರ ಈ ರಾಜ್ಯದಲ್ಲಿ ಉಳಿದುಕೊಳ್ಳಬಹುದು, ಉದ್ಯೋಗ ಮಾಡಬಹುದು. ಅಷ್ಟೇ ಅಲ್ಲ ಉದ್ಯಮವನ್ನೂ ಮಾಡಿಕೊಳ್ಳಬಹುದು. ಬಿಜೆಪಿಗೆ ಮತ ಹಾಕದೆ ಇರುವವರಿಗೆ ಟಿಎಂಸಿ ಬೆಂಬಲ ನೀಡುತ್ತದೆ’ ಎಂದು ವಿಡಿಯೋದಲ್ಲಿ ಹೇಳಿದ್ದನ್ನು ಕೇಳಬಹುದು.
TMC’s Pandaveswar (Asansol) MLA Naren Chakraborty, is seen issuing open threats to BJP voters and supporters, asking them not to come out and vote, or else face consequences. Such criminals should be behind bars but in Bengal Mamata Banerjee patronises them.
ECI must take note. pic.twitter.com/5KiPsPZHVG
— Amit Malviya (@amitmalviya) March 29, 2022
ವಿಡಿಯೋ ಶೇರ್ ಮಾಡಿಕೊಂಡಿರುವ ಅಮಿತ್ ಮಾಳ್ವಿಯಾ, ಪಾಂಡವೇಶ್ವರ (ಅಸಾನ್ಸೋಲ್) ವಿಧಾನಸಭೆ ಕ್ಷೇತ್ರದ ಟಿಎಂಸಿ ಶಾಸಕ ನರೇನ್ ಚಕ್ರವರ್ತಿ ಬಿಜೆಪಿಯ ಬೆಂಬಲಿಗರು ಮತ್ತು ಮತದಾರರಿಗೆ ಹೀಗೆ ಬಹಿರಂಗವಾಗಿಯೇ ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿಗೆ ಮತ ಹಾಕಿದರೆ ನಿಮಗೆ ತೊಂದರೆ ತಪ್ಪಿದ್ದಲ್ಲ ಎಂಬುದನ್ನು ನೇರವಾಗಿಯೇ ಹೇಳುತ್ತಿದ್ದಾರೆ. ಇಂಥ ಕ್ರಿಮಿನಲ್ಗಳು ನಿಜವಾಗಿ ಜೈಲಿನಲ್ಲಿ ಇರಬೇಕು. ಆದರೆ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಶಾಸಕರಾಗಿರುತ್ತಾರೆ. ಚುನಾವಣಾ ಆಯೋಗ ಇವರ ಬಗ್ಗೆ ಗಮನಹರಿಸಬೇಕು ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಅಸಾನ್ಸೋಲ್ ಲೋಕಸಭಾ ಕ್ಷೇತ್ರ ಮತ್ತು ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಏಪ್ರಿಲ್ 12ರಂದು ನಡೆಯಲಿದೆ. ಅದರ ಬೆನ್ನಲ್ಲೇ ಟಿಎಂಸಿ ಶಾಸಕ ಹೀಗೆ ಮಾತನಾಡಿದ ವಿಡಿಯೋವೊಂದನ್ನು ಬಿಜೆಪಿ ಶೇರ್ ಮಾಡಿಕೊಂಡಿದೆ. ಅಸಾನ್ಸೋಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ಕಳೆದ ವರ್ಷ ರಾಜೀನಾಮೆ ನೀಡಿ, ಬಿಜೆಪಿಯನ್ನು ತೊರೆದು ಟಿಎಂಸಿ ಸೇರ್ಪಡೆಯಾಗಿದ್ದಾರೆ. ಇದೀಗ ಆ ಕ್ಷೇತ್ರದ ಚುನಾವಣೆ ನಡೆಯಲಿದೆ.
ಇದನ್ನೂ ಓದಿ:ಪಠ್ಯದಲ್ಲಿ ಭಗವದ್ಗೀತೆ ಬೇಡ, ಸಂವಿಧಾನ ಕಲಿಸಿ: ಮುಖ್ಯಮಂತ್ರಿಗೆ ಬುದ್ಧಿಜೀವಿಗಳ ಪತ್ರ
Published On - 9:56 am, Tue, 29 March 22