AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀ ನಿರಾಕರಿಸಿದ ಡಿಸಿಗೆ ಮದ್ಯ ಕುಡಿತೀರಾ ಎಂದ ಕೃಷಿ ಸಚಿವ, ವೀಡಿಯೋ ವೈರಲ್

ಟೀ ನಿರಾಕರಿಸಿದ ಜಿಲ್ಲಾಧಿಕಾರಿ ರಾಧಾಬಿನೋದ್ ಶರ್ಮಾ ಅವರಿಗೆ ಕೃಷಿ ಸಚಿವ ಅಬ್ದುಲ್ ಸತ್ತಾರ್, ಮದ್ಯ ಸೇವಿಸುತ್ತೀರಾ ಎಂದು ಕೇಳುವ ಮೂಲಕ ಟೀಕೆಗೆ ಒಳಗಾಗುತ್ತಿದ್ದಾರೆ.

ಟೀ ನಿರಾಕರಿಸಿದ ಡಿಸಿಗೆ ಮದ್ಯ ಕುಡಿತೀರಾ ಎಂದ ಕೃಷಿ ಸಚಿವ, ವೀಡಿಯೋ ವೈರಲ್
ಕೃಷಿ ಸಚಿವ ಅಬ್ದುಲ್ ಸತ್ತಾರ್
TV9 Web
| Edited By: |

Updated on:Oct 28, 2022 | 3:00 PM

Share

ಬೀಡ್​ (ಮಹರಾಷ್ಟ್ರ): ಮಹಾರಾಷ್ಟ್ರದ ಕೃಷಿ ಸಚಿವ ಅಬ್ದುಲ್ ಸತ್ತಾರ್ (Maharashtra Agriculture Minister Abdul Sattar) ಜಿಲ್ಲಾಧಿಕಾರಿಯೊಬ್ಬರಿಗೆ ಅಣುಕಿಸಿ ಪೇಚಿಗೆ ಸಿಲುಕಿದ್ದಾರೆ. ಟೀ ನಿರಾಕರಿಸಿದ ಜಿಲ್ಲಾಧಿಕಾರಿ ರಾಧಾಬಿನೋದ್ ಶರ್ಮಾ ಅವರಿಗೆ ಅಬ್ದುಲ್ ಸತ್ತಾರ್, ಮದ್ಯ ಸೇವಿಸುತ್ತೀರಾ ಎಂದು ಕೇಳುವ ಮೂಲಕ ಟೀಕೆಗೆ ಒಳಗಾಗುತ್ತಿದ್ದಾರೆ. ಮದ್ಯ ಮಹಾರಾಷ್ಟ್ರದ ಬೀಡ್ ಜಿಲ್ಲೆಯಾದ್ಯಂತ ಅತಿಯಾಗಿ ಮಳೆಯಾಗಿ ಬೆಳೆಗಳು ಹಾನಿಯಾಗಿವೆ. ಈ ಸಂಬಂಧ ಕೃಷಿ ಸಚಿವ ಅಬ್ದುಲ್ ಸತ್ತಾರ್, ಜಿಲ್ಲಾಧಿಕಾರಿ ರಾಧಾಬಿನೋದ್ ಶರ್ಮಾ ಮತ್ತು ಅಧಿಕಾರಿಗಳು ಬೀಡ್ ಜಿಲ್ಲೆಯ ಗೆವ್ರಾಯಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಆದ ಬೆಳೆ ಹಾನಿ ಪರಿಶೀಲಿಸಲು ಅ.21ರಂದು ಬಂದಿದ್ದರು. ಈ ವೇಳೆ ಹಾಲ್​ವೊಂದರಲ್ಲಿ ಕುಳಿತಾಗ, ಟೀ ಕೊಡಲು ಬಂದಿದ್ದಾರೆ.

ಈ ವೇಳೆ ಜಿಲ್ಲಾಧಿಕಾರಿ ರಾಧಾಬಿನೋದ್ ಶರ್ಮಾ ಟೀ ನಿರಾಕರಿಸಿದ್ದಾರೆ. ಅದಕ್ಕೆ ಸಚಿವ ಅಬ್ದುಲ್ ಸತ್ತಾರ್ ಮದ್ಯ ಸೇವಿಸುತ್ತೀರಾ ಎಂದು ಅಣುಕಿಸಿರುವ ವಿಡಿಯೋ ವೈರಲ್​ ಆಗಿದೆ. ಸದ್ಯ ವಿರೋಧ ಪಕ್ಷಗಳು ಅಬ್ದುಲ್ ಸತ್ತಾರ್​ ಅವರನ್ನು ಟೀಕೆ ಮಾಡುತ್ತಿವೆ.

ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್, ಸತ್ತಾರ್ ಅವರದ್ದು ಮಳೆ ಹಾನಿ ಪರಿಶೀಲನೆ ಪ್ರವಾಸವೋ ಅಥವಾ ಮದ್ಯ ಸೇವಿಸಲು ಹೋಗಿರುವ ಪ್ರವಾಸವೋ ಎಂದು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:00 pm, Fri, 28 October 22