ಟ್ರೈನಿ ಐಎಎಸ್​ ಅಧಿಕಾರಿ ಪೂಜಾಗೆ ದೃಷ್ಟಿದೋಷ ಇದೆಯೇ? ಎಂಬಿಬಿಎಸ್​ ಪ್ರವೇಶಕ್ಕೂ ಮುನ್ನ ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣಪತ್ರದಲ್ಲೇನಿದೆ?

|

Updated on: Jul 16, 2024 | 12:00 PM

ಪ್ರೊಬೆಷನರಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​ ದೈಹಿಕವಾಗಿ ಫಿಟ್​ ಆಗಿದ್ದಾರೆ ಅವರಿಗೆ ಯಾವುದೇ ದೋಷವಿಲ್ಲ ಎಂಬುದು ತಿಳಿದುಬಂದಿದೆ. 2007ರಲ್ಲಿ ಅವರು ಎಂಬಿಬಿಎಸ್​ಗೆ ಪ್ರವೇಶ ಪಡೆಯುವ ಮುನ್ನ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಇದರ ಉಲ್ಲೇಖವಿದೆ.

ಟ್ರೈನಿ ಐಎಎಸ್​ ಅಧಿಕಾರಿ ಪೂಜಾಗೆ ದೃಷ್ಟಿದೋಷ ಇದೆಯೇ? ಎಂಬಿಬಿಎಸ್​ ಪ್ರವೇಶಕ್ಕೂ ಮುನ್ನ ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣಪತ್ರದಲ್ಲೇನಿದೆ?
ಪೂಜಾ ಖೇಡ್ಕರ್
Follow us on

ವಿವಾದಿತ ಟ್ರೈನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್ ಎಂಬಿಬಿಎಸ್​ಗೆ ಸೇರುವ ಸಮಯದಲ್ಲಿ ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣಪತ್ರದಿಂದ ಅವರಿಗೆ ಯಾವ ಸಮಸ್ಯೆಯೂ ಇಲ್ಲ ದೈಹಿಕವಾಗಿ ಫಿಟ್​ ಆಗಿದ್ದಾರೆ  ಎಂಬುದು ತಿಳಿದುಬಂದಿದೆ. ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಕಲಿ ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗ (OBC) ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಕುರಿತು ತನಿಖೆ ಮಾಡಿದಾಗ ಅವರು 2007ರಲ್ಲಿ ಎಂಬಿಬಿಎಸ್​ಗೆ ಸೇರ್ಪಡೆಗೊಳ್ಳುವ ಸಮಯದಲ್ಲಿ ಸಲ್ಲಿಸಲಾದ ವೈದ್ಯಕೀಯ ಪ್ರಮಾಣಪತ್ರದಲ್ಲಿ ಅವರಿಗೆ ಯಾವ ದೋಷವೂ ಇಲ್ಲ ಅವರು ಫಿಟ್​ ಆಗಿದ್ದಾರೆಂದು ಅದರಲ್ಲಿ ಬರೆಯಲಾಗಿತ್ತು.

ಕೆಂಪು- ನೀಲಿ ಬೀಕನ್ ಲೈಟ್ ಮತ್ತು ವಿಐಪಿ ನಂಬರ್ ಪ್ಲೇಟ್‌ನೊಂದಿಗೆ ಖಾಸಗಿ ಆಡಿ ಕಾರನ್ನು ಬಳಸಿದ್ದಕ್ಕಾಗಿ ತನಿಖೆಗೆ ಖೇಡ್ಕರ್ ಅವರನ್ನು ಒಳಪಡಿಸಿದಾಗ ಅವರು ಒಬಿಸಿ ಮತ್ತು ದೃಷ್ಟಿಹೀನ ವರ್ಗಗಳ ಅಡಿಯಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಗೆ ಹಾಜರಾಗಿದ್ದರು ಮತ್ತು ಮಾನಸಿಕ ಅಸ್ವಸ್ಥತೆಯ ಪ್ರಮಾಣಪತ್ರವನ್ನೂ ಸಲ್ಲಿಸಿದ್ದಾರೆ ಎನ್ನುವುದು ಬಯಲಾಗಿದೆ.

2007ರಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆಯುವಾಗ ಪೂಜಾ ಖೇಡ್ಕರ್ ಅವರು ಕಾಶಿಬಾಯಿ ನವ್ಲೆ ವೈದ್ಯಕೀಯ ಕಾಲೇಜಿಗೆ ಸಲ್ಲಿಸಿದ್ದರು . ಫಿಟ್‌ನೆಸ್ ಪ್ರಮಾಣಪತ್ರದಲ್ಲಿ ದೈಹಿಕ ಅಥವಾ ಮಾನಸಿಕ ಯಾವುದೇ ಅಂಗವೈಕಲ್ಯತೆಯ ಉಲ್ಲೇಖವಿಲ್ಲ.

ಮತ್ತಷ್ಟು ಓದಿ: ಟ್ರೈನಿ ಐಎಎಸ್ ಅಧಿಕಾರಿ​ ಪೂಜಾ ಖೇಡ್ಕರ್​ ತಾಯಿ ಪಿಸ್ತೂಲ್​ ಹಿಡಿದು ರೈತರ ಹೆದರಿಸುತ್ತಿರುವ ವಿಡಿಯೋ ವೈರಲ್

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಗೆ ತನ್ನ ಅಫಿಡವಿಟ್‌ನಲ್ಲಿ, ಮಹಾರಾಷ್ಟ್ರ ಕೇಡರ್‌ನ 2023-ಬ್ಯಾಚ್ ಐಎಎಸ್ ಅಧಿಕಾರಿ ಖೇಡ್ಕರ್ ಅವರು ತಮಗೆ ದೃಷ್ಟಿದೋಷವಿದೆ ಎಂದು ಹೇಳಿಕೊಂಡಿದ್ದಾರೆ.

ಏಪ್ರಿಲ್ 2022ರಲ್ಲಿ ಖೇಡ್ಕರ್ ಅವರ ಅಂಗವೈಕಲ್ಯ ಪ್ರಮಾಣಪತ್ರದ ಪರಿಶೀಲನೆಗಾಗಿ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ (AIIMS) ವರದಿ ಮಾಡಲು ಕೇಳಲಾಯಿತು. ಆದರೆ ಕೋವಿಡ್ ಸೋಂಕನ್ನು ಉಲ್ಲೇಖಿಸಿ ಅವರು ತಪಾಸಣೆಗೆ ಹಾಜರಾಗಲಿಲ್ಲ. ಅನಂತರ, ಅವರು ಖಾಸಗಿಯಾಗಿ ಎಂಆರ್ ಐ ಸ್ಕ್ಯಾನಿಂಗ್ ಪ್ರಮಾಣಪತ್ರವನ್ನು ತಯಾರಿಸಿದ್ದಾರೆ. ಬಳಿಕ ಅವರ ಐಎಎಸ್ ನೇಮಕಾತಿಯನ್ನು ದೃಢೀಕರಿಸಲು ಸ್ವೀಕರಿಸಲಾಯಿತು.

ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಅವರು ರಾಜ್ಯ ಸರ್ಕಾರದ ಮಾಜಿ ಅಧಿಕಾರಿ. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಅವರು ತಮ್ಮ ಆಸ್ತಿ ಮೌಲ್ಯ 40 ಕೋಟಿ ರೂ. ಎಂದು ಘೋಷಿಸಿದ್ದಾರೆ.

ಆದರೂ ಪೂಜಾ ಖೇಡ್ಕರ್ ಒಬಿಸಿ ವರ್ಗದ ಅಡಿಯಲ್ಲಿ ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಿದ್ದರು. ಅಲ್ಲಿ ಕ್ರೀಮಿ ಲೇಯರ್ ಪ್ರಮಾಣಪತ್ರದ ಮಿತಿಯು ಪೋಷಕರ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಯಾಗಿದೆ. ಆದರೆ ಇವರ ತಂದೆ ಕೋಟ್ಯಧೀಶರಾಗಿದ್ದರೂ ಒಬಿಸಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 3ರಂದು ಪುಣೆಯಲ್ಲಿ ಸಹಾಯಕ ಕಲೆಕ್ಟರ್ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಖೇಡ್ಕರ್ ಪುಣೆ ಜಿಲ್ಲಾಧಿಕಾರಿಯೊಂದಿಗೆ ವಾಟ್ಸಾಪ್ ಸಂಭಾಷಣೆಯ ಮೂಲಕ ಹಲವು ಬೇಡಿಕೆಗಳನ್ನು ಇಟ್ಟಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:59 am, Tue, 16 July 24