ಹೆಂಡತಿ ಯಾರೊಂದಿಗೋ ಓಡಿ ಹೋಗಿದ್ದಕ್ಕೆ ನಾದಿನಿಯ ಕೊಂದು ಆಕೆಯ ಮಗಳ ಬೆರಳು ಕತ್ತರಿಸಿದ ವ್ಯಕ್ತಿ
ವ್ಯಕ್ತಿಯೊಬ್ಬ ತನ್ನ ಪತ್ನಿ ಯಾರೊಂದಿಗೋ ಓಡಿ ಹೋಗಿರುವ ಕೋಪಕ್ಕೆ ಆಕೆಯ ಸಹೋದರಿಯನ್ನು ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮೃತರನ್ನು ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ನುಸ್ರತ್ (39) ಎಂದು ಗುರುತಿಸಲಾಗಿದ್ದು, ಗಾಯಗೊಂಡ ಅಕ್ಬರಿ (42) ಮತ್ತು ನುಸ್ರತ್ ಅವರ ಪುತ್ರಿ ಸಾನಿಯಾ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪ್ರಕರಣದ ದೂರುದಾರ ಉಸ್ಮಾನ್ (19) ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿ ಇಸ್ತೇಕರ್ ಅಹ್ಮದ್ ಅಲಿಯಾಸ್ ಬಬ್ಬು (49) ವೃತ್ತಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದು, ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 24: ಹೆಂಡತಿ ಯಾರೊಂದಿಗೋ ಓಡಿ ಹೋಗಿದ್ದಕ್ಕೆ ವ್ಯಕ್ತಿಯೊಬ್ಬ ನಾದಿನಿಯನ್ನು ಹತ್ಯೆ(Murder) ಮಾಡಿ, ಆಕೆಯ ಮಗಳ ಬೆರಳು ಕತ್ತರಿಸಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಖ್ಯಾಲಾದಲ್ಲಿ ಘಟನೆ ನಡೆದಿದೆ. ತನ್ನ ಹೆಂಡತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಓಡಿಹೋಗಲು ಅವರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿರುವ ಆತ ಈ ದುಷ್ಕೃತ್ಯವೆಸಗಿದ್ದಾನೆ. ಮೃತರನ್ನು ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ನುಸ್ರತ್ (39) ಎಂದು ಗುರುತಿಸಲಾಗಿದ್ದು, ಗಾಯಗೊಂಡ ಅಕ್ಬರಿ (42) ಮತ್ತು ನುಸ್ರತ್ ಅವರ ಪುತ್ರಿ ಸಾನಿಯಾ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ದೂರುದಾರ ಉಸ್ಮಾನ್ (19) ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿ ಇಸ್ತೇಕರ್ ಅಹ್ಮದ್ ಅಲಿಯಾಸ್ ಬಬ್ಬು (49) ವೃತ್ತಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದು, ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಗಾಜಿಯಾಬಾದ್‌ನ ಲೋನಿ ನಿವಾಸಿ ಬಬ್ಬು ಬೆಳಗ್ಗೆ 7 ಗಂಟೆ ಸುಮಾರಿಗೆ ನುಸ್ರತ್ ನಿದ್ರಿಸುತ್ತಿದ್ದಾಗ ಆಕೆಯ ಮನೆಗೆ ಹೋಗಿದ್ದಾನೆ. ಅವನು ಹೊಸದಾಗಿ ಖರೀದಿಸಿದ ಕ್ಲೀವರ್ ಅನ್ನು ಟಿಫಿನ್ ಬಾಕ್ಸ್ ಒಳಗೆ ಬಚ್ಚಿಟ್ಟಿದ್ದ. ನುಸ್ರತ್ ಎಚ್ಚರಗೊಂಡು ಅವನಿಗೆ ಚಹಾ ಕೊಟ್ಟಾಗ, ಆತ ಆಯುಧವನ್ನು ಹೊರತೆಗೆದು ಆಕೆಯ ಎದೆ ಮತ್ತು ಕುತ್ತಿಗೆಯ ಮೇಲೆ ಹಲವು ಬಾರಿ ಹಲ್ಲೆ ಮಾಡಿ ಆಕೆಯನ್ನು ಕೊಂದಿದ್ದಾನೆ.
ಮತ್ತಷ್ಟು ಓದಿ: ಪತ್ನಿ ಸ್ನಾನ ಮಾಡುವಾಗ ಹಿಂದಿನಿಂದ ಚೂರಿಯಿಂದ ಇರಿದು ಹತ್ಯೆ ಮಾಡಿ ಫೇಸ್ಬುಕ್ ಲೈವ್ ಬಂದು ತಪ್ಪೊಪ್ಪಿಕೊಂಡ ಗಂಡ
ಆಕೆಯ ಮಗಳು ಈ ಕೃತ್ಯವನ್ನು ತಡೆಯಲು ಮಧ್ಯ ಬಂದಾಗ, ಆಕೆಯ ಮೇಲೂ ಹಲ್ಲೆ ನಡೆಸಿದ್ದಾನೆ. ಪ್ರಾಥಮಿಕ ತನಿಖೆಯಿಂದ ನುಸ್ರತ್ ಮತ್ತು ಆತನ ಪತ್ನಿಯ ಇತರ ಸಂಬಂಧಿಕರು ಆಕೆ ಬೇರೊಬ್ಬ ಪುರುಷನೊಂದಿಗೆ ಓಡಿಹೋಗಲು ಸಹಾಯ ಮಾಡಿದ್ದಾರೆ ಎಂದು ಆ ವ್ಯಕ್ತಿಗೆ ಅನುಮಾನವಿತ್ತು ಎಂದು ಗೊತ್ತಾಗಿದೆ.
ನುಸ್ರತ್ ಪತಿ ಜೈಲಿನಲ್ಲಿದ್ದು, ಅವರ ಕುಟುಂಬದ ಏಕೈಕ ಆದಾರಸ್ತಂಭ ಆಕೆಯೇ ಆಗಿದ್ದರು, ಅವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯ ತಂಡವೊಂದು ಸ್ಥಳಕ್ಕೆ ಧಾವಿಸಿ, ಮನೆಯ ಎರಡನೇ ಮಹಡಿಯಲ್ಲಿ ನುಸ್ರತ್ ಮೃತಪಟ್ಟಿರುವುದು ಕಂಡುಬಂದಿತು, ಗಾಯಗೊಂಡ ಇಬ್ಬರು ಜನರನ್ನು ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಅಧಿಕಾರಿ ಹೇಳಿದರು.
ಆರೋಪಿಯನ್ನು ಕುಟುಂಬ ಸದಸ್ಯರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸ್ ತಂಡಕ್ಕೆ ಒಪ್ಪಿಸಿದ್ದಾರೆ. ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಪರಾಧದ ಹಿಂದಿನ ಉದ್ದೇಶವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು. ಪ್ರಕರಣ ದಾಖಲಿಸಲಾಗಿದ್ದು, ಅಪರಾಧ ಮತ್ತು ವಿಧಿವಿಜ್ಞಾನ ತಂಡಗಳು ಅಪರಾಧದ ಸ್ಥಳವನ್ನು ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




