ಬೆಳೆ ತ್ಯಾಜ್ಯ ಸುಡದ ಗ್ರಾಮ ಪಂಚಾಯಿತಿಗೆ ₹ 1 ಲಕ್ಷ ಬಹುಮಾನ: ಪಂಜಾಬ್ ಆಪ್ ಶಾಸಕ ಘೋಷಣೆ

ಕೊಟ್ಕಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ ಶಾಸಕರಾದ ಸಂಧ್ವನ್. ಬೆಳೆ ತ್ಯಾಜ್ಯ ಸುಡುವುದರಿಂದ ಭೂಮಿಯ ಫಲವತ್ತತೆ ನಷ್ಟದ ಜೊತೆಗೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ..

ಬೆಳೆ ತ್ಯಾಜ್ಯ ಸುಡದ ಗ್ರಾಮ ಪಂಚಾಯಿತಿಗೆ ₹ 1 ಲಕ್ಷ ಬಹುಮಾನ: ಪಂಜಾಬ್ ಆಪ್ ಶಾಸಕ ಘೋಷಣೆ
ಪ್ರಾತಿನಿಧಿಕ ಚಿತ್ರ
Edited By: ರಶ್ಮಿ ಕಲ್ಲಕಟ್ಟ

Updated on: Oct 23, 2022 | 9:07 PM

ಚಂಡೀಗಢ: ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಬೆಳೆ ತ್ಯಾಜ್ಯ ಸುಡುವುದನ್ನು (Stubble Burning) ತಡೆಯಲು ಪಂಜಾಬ್ ಸ್ಪೀಕರ್ (Punjab Speaker) ಕುಲ್ತಾರ್ ಸಿಂಗ್ ಸಂಧ್ವನ್ ಅವರು, ರೈತರು ಈ ಪದ್ಧತಿಯಿಂದ ದೂರವಿರುವ ಪ್ರತಿ ಗ್ರಾಮ ಪಂಚಾಯಿತಿಗೆ ₹ 1 ಲಕ್ಷ ನೀಡುವುದಾಗಿ ಭಾನುವಾರ ಘೋಷಿಸಿದ್ದಾರೆ. ಈ ಮೊತ್ತವನ್ನು ಅವರ ವಿವೇಚನಾ ಕೋಟಾದಿಂದ ನೀಡಲಾಗುವುದು ಎಂದು ಭಾನುವಾರ ಇಲ್ಲಿ ಅಧಿಕೃತ ಹೇಳಿಕೆ ತಿಳಿಸಿದೆ. ಕೊಟ್ಕಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ ಶಾಸಕರಾದ ಸಂಧ್ವನ್. ಬೆಳೆ ತ್ಯಾಜ್ಯ ಸುಡುವುದರಿಂದ ಭೂಮಿಯ ಫಲವತ್ತತೆ ನಷ್ಟದ ಜೊತೆಗೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಸಂಧ್ವನ್ ಹೇಳಿದರು. ಗುರ್ಬಾನಿಯ ತತ್ವಗಳ ಪ್ರಕಾರ ಪಂಜಾಬ್‌ನ ಜನರು ಪ್ರಕೃತಿಯನ್ನು ಹೆಚ್ಚು ಪ್ರೀತಿಸುತ್ತಾರೆ ಎಂದ ಅವರು ರಾಜ್ಯದ ಜನತೆ ಈ ಪದ್ಧತಿಯನ್ನು ಸಂಪೂರ್ಣವಾಗಿ ಕೈಬಿಡುವ ದಿನ ದೂರವಿಲ್ಲ ಎಂದರು.

ಸಂಧ್ವನ್ ಅವರು ಹೇಳಿದಂತೆ ಬೆಳೆ ತ್ಯಾಜ್ಯಗಳನ್ನು ಸುಡದ ಜನರನ್ನು ಕಳೆದ ವಾರ ಸನ್ಮಾನಿಸಿದ್ದರು.

“ಇದು ಈ ರೀತಿಯ ವಿಶಿಷ್ಟ ಉಪಕ್ರಮವಾಗಿದೆ. ಈ ಸಮಾರಂಭದಲ್ಲಿ ಫರೀದ್‌ಕೋಟ್ ಜಿಲ್ಲೆಯ 18, ಮೊಗಾದಿಂದ 13, ಸಂಗ್ರೂರ್‌ನ 10, ರೂಪನಗರದ ಒಬ್ಬರು, ಗುರುದಾಸ್‌ಪುರದ 10 ಮತ್ತು ಲೂಧಿಯಾನ ಮತ್ತು ಬರ್ನಾಲಾದಿಂದ ಏಳು ರೈತರಿಗೆ ಸನ್ಮಾನಿಸಲಾಯಿತು” ಎಂದು ಹೇಳಿಕೆ ತಿಳಿಸಿದೆ.

ಪರಿಸರ ಸಂರಕ್ಷಣೆಗಾಗಿ ರೈತರು ಹೆಚ್ಚು ಗಿಡಗಳನ್ನು ನೆಡಬೇಕು ಎಂದು ಅವರು ಮನವಿ ಮಾಡಿದರು.

Published On - 8:38 pm, Sun, 23 October 22

Web contact

TV9 Kannada

Read More
Follow Us