ತೆರೆದ ಜಾಗದಲ್ಲಿ ಆಹಾರ ಬಿಸಾಡಬೇಡಿ; ಬೀದಿ ನಾಯಿಗಳ ಹಾವಳಿ ಕುರಿತು ಸುಪ್ರೀಂ ಕೋರ್ಟ್ ಸೂಚನೆ

ದೆಹಲಿಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಕುರಿತು ಸುಪ್ರೀಂ ಕೋರ್ಟ್ ನಿನ್ನೆ ವಿವಾದಾತ್ಮಕ ಆದೇಶವನ್ನು ನೀಡಿತ್ತು. ಅದಾದ ಒಂದು ದಿನದ ನಂತರ, ಸುಪ್ರೀಂ ಕೋರ್ಟ್ ತನ್ನ ಆವರಣದಲ್ಲಿ ಉಳಿದ ಎಲ್ಲ ಆಹಾರವನ್ನು ಮುಚ್ಚಿದ ತೊಟ್ಟಿಗಳಲ್ಲಿ ಹಾಕಬೇಕು, ಯಾವುದೇ ಕಾರಣಕ್ಕೂ ಬೀದಿಬದಿಗಳಲ್ಲಿ ಬೀದಿ ನಾಯಿಗಳಿಗೆ ಹಾಕಬಾರದು ಎಂದು ನಿರ್ದೇಶಿಸುವ ಸುತ್ತೋಲೆಯನ್ನು ಹೊರಡಿಸಿದೆ.

ತೆರೆದ ಜಾಗದಲ್ಲಿ ಆಹಾರ ಬಿಸಾಡಬೇಡಿ; ಬೀದಿ ನಾಯಿಗಳ ಹಾವಳಿ ಕುರಿತು ಸುಪ್ರೀಂ ಕೋರ್ಟ್ ಸೂಚನೆ
Stray Dogs

Updated on: Aug 12, 2025 | 5:40 PM

ನವದೆಹಲಿ, ಆಗಸ್ಟ್ 12: ದೆಹಲಿಯಲ್ಲಿರುವ ಎಲ್ಲ ಬೀದಿ ನಾಯಿಗಳನ್ನೂ ಹಿಡಿದು ಅವುಗಳಿಗೆ ಪುನರ್ವಸತಿ ಕಲ್ಪಿಸಬೇಕೆಂದು ಸುಪ್ರೀಂ ಕೋರ್ಟ್ (Supreme Court) ನಿನ್ನೆ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಭಾರೀ ವಿರೋಧವೂ ವ್ಯಕ್ತವಾಗಿತ್ತು. ದೆಹಲಿಯಲ್ಲಿ ಬೀದಿ ನಾಯಿಗಳು (Delhi Stray Dogs) ಕಚ್ಚಿ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿತ್ತು. ಇಂದು ಮತ್ತೆ ಬೀದಿ ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿದ್ದು, ಸುಪ್ರೀಂ ಕೋರ್ಟಿನ ಆವರಣದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ಉದ್ದೇಶಿಸಿ ಸುತ್ತೋಲೆಯನ್ನು ಹೊರಡಿಸಿದೆ.

“ಸುಪ್ರೀಂ ಕೋರ್ಟ್ ಸಂಕೀರ್ಣ ಮತ್ತು ಸುತ್ತಮುತ್ತಲಿನ ಕಾರಿಡಾರ್‌ಗಳಲ್ಲಿ ಹಾಗೂ ಲಿಫ್ಟ್ ಒಳಗೆ ಬೀದಿ ನಾಯಿಗಳು ಅಲೆದಾಡುತ್ತಿರುವ ಘಟನೆ ಗಮನಾರ್ಹವಾಗಿ ಹೆಚ್ಚಾಗಿದೆ. ಹೀಗಾಗಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಸುತ್ತೋಲೆಯಲ್ಲಿ ತನ್ನ ನಿರ್ದೇಶನವನ್ನು ತಕ್ಷಣ ಜಾರಿಗೆ ತರುವಂತೆ ಆದೇಶಿಸಲಾಗಿದೆ.

ಇದನ್ನೂ ಓದಿ: 8 ವಾರದೊಳಗೆ ದೆಹಲಿಯ ಬೀದಿ ನಾಯಿಗಳನ್ನು ಹಿಡಿಯಲು ಸುಪ್ರೀಂ ಕೋರ್ಟ್ ಆದೇಶ; ಏನಿದಕ್ಕೆ ಕಾರಣ?

“ಎಲ್ಲಾ ಉಳಿದ ಆಹಾರ ಪದಾರ್ಥಗಳನ್ನು ಸರಿಯಾಗಿ ಮುಚ್ಚಿದ ಕಸದ ಬುಟ್ಟಿಗಳಲ್ಲಿ ಮಾತ್ರ ವಿಲೇವಾರಿ ಮಾಡಬೇಕು. ಯಾವುದೇ ಸಂದರ್ಭದಲ್ಲೂ ತೆರೆದ ಪ್ರದೇಶಗಳಲ್ಲಿ ಅಥವಾ ಮುಚ್ಚದ ಪಾತ್ರೆಗಳಲ್ಲಿ ಆಹಾರವನ್ನು ಎಸೆಯಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಪ್ರಾಣಿಗಳು ಆಹಾರಕ್ಕಾಗಿ ಆಕರ್ಷಿತರಾಗುವುದನ್ನು ಮತ್ತು ಕಸ ತೆಗೆಯುವುದನ್ನು ತಡೆಯಲು ಈ ಕ್ರಮವು ನಿರ್ಣಾಯಕವಾಗಿದೆ. ಇದರಿಂದಾಗಿ ನಾಯಿ ಕಚ್ಚುವ ಅಪಾಯವನ್ನು ಕಡಿಮೆ ಮಾಡಬಹುದು ಮತ್ತು ನೈರ್ಮಲ್ಯದ ಮಾನದಂಡಗಳನ್ನು ಕಾಪಾಡಿಕೊಳ್ಳಬಹುದು. ಈ ನಿರ್ದೇಶನವನ್ನು ಕಾರ್ಯಗತಗೊಳಿಸುವಲ್ಲಿ ನಿಮ್ಮ ಸಹಕಾರವು ಎಲ್ಲರ ಸುರಕ್ಷತೆಗೆ ಅತ್ಯಗತ್ಯ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ: ‘ಆಧಾರ್ ಪೌರತ್ವದ ದಾಖಲೆಯಲ್ಲ’; ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಬೆಂಬಲ

ಸುಪ್ರೀಂ ಕೋರ್ಟ್​ನಲ್ಲಿ ಬೀದಿನಾಯಿಗಳ ಸಮಸ್ಯೆಯನ್ನು ಪರಿಹರಿಸಲು, ಸುಪ್ರೀಂ ಕೋರ್ಟ್ ಆಡಳಿತವು ಇತ್ತೀಚೆಗೆ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಅಧಿಕಾರಿಗಳೊಂದಿಗೆ ಸಭೆ ನಡೆಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ