ಸರ್ಕಾರಿ ಅಧಿಕಾರಿಗಳನ್ನು 6 ತಿಂಗಳು ವರ್ಗ ಮಾಡಬೇಡಿ, ಅವರೊಂದಿಗೆ ಹಿಸಾಬ್ ಕಿತಾಬ್ ಚುಕ್ತ ಮಾಡಬೇಕಿದೆ: ಅಖಿಲೇಶ್​ಗೆ ಅಬ್ಬಾಸ್ ಅನ್ಸಾರಿ

ಸರ್ಕಾರಿ ಅಧಿಕಾರಿಗಳನ್ನು 6 ತಿಂಗಳು ವರ್ಗ ಮಾಡಬೇಡಿ, ಅವರೊಂದಿಗೆ ಹಿಸಾಬ್ ಕಿತಾಬ್ ಚುಕ್ತ ಮಾಡಬೇಕಿದೆ: ಅಖಿಲೇಶ್​ಗೆ ಅಬ್ಬಾಸ್ ಅನ್ಸಾರಿ
ಅಬ್ಬಾಸ್ ಅನ್ಸಾರಿ

ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅಬ್ಬಾಸ್ ಅನ್ಸಾರಿ, ಇತ್ತೀಚೆಗೆ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿ 2022ರ ಯುಪಿ ಚುನಾವಣೆಯಲ್ಲಿ ಮೈತ್ರಿಕೂಟ ಬಹುಮತ ಗಳಿಸಿದರೆ ಆರು ತಿಂಗಳವರೆಗೆ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು. ಮೊದಲು ಅವರು 'ಹಿಸಾಬ್ ಕಿತಾಬ್' ಚುಕ್ತ ಮಾಡಬೇಕು. ಬಳಿಕ ಅವರನ್ನು ಎಲ್ಲಿ ಬೇಕಾದರೂ ಕಳಿಸಲಿ ಎಂದು ಹೇಳಿದ್ದೇನೆ ಎಂದು ಬೆಂಬಲಿಗರ ಬಳಿ ಹೇಳಿಕೊಂಡಿದ್ದಾರೆ.

TV9kannada Web Team

| Edited By: Ayesha Banu

Mar 04, 2022 | 10:29 PM

ಲಖನೌ: ಹಿಂದೆ ಮಾಫಿಯಾ ಡಾನ್ ಆಗಿದ್ದ ಹಾಗೂ ರಾಜಕಾರಣಕ್ಕೆ ಇಳಿದು ರಾಜಕಾರಣಿಯಾದ ಮುಕ್ತಾರ್ ಅನ್ಸಾರಿ(Mukhtar Ansari) ಅವರ ಪುತ್ರ ಅಬ್ಬಾಸ್ ಅನ್ಸಾರಿ(Abbas Ansari) ಸದ್ಯ ಯುಪಿ ವಿಧಾನಸಭಾ ಚುನಾವಣೆ 2022ರಲ್ಲಿ(UP Assembly Election 2022) ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (SBSP)-ಸಮಾಜವಾದಿ ಪಕ್ಷ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸದ್ಯ ಈಗ ಚುನಾವಣೆ ಪ್ರಚಾರದಲ್ಲಿರುವ ಅಬ್ಬಾಸ್ ಅನ್ಸಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಸ್‌ಪಿ ಮೈತ್ರಿ ಸರ್ಕಾರ ಬಂದರೆ ಕನಿಷ್ಠ ಆರು ತಿಂಗಳ ಕಾಲ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡದಂತೆ ಅಖಿಲೇಶ್ ಯಾದವ್(Akhilesh Yadav) ಅವರಿಗೆ ಕೇಳಿಕೊಂಡಿದ್ದಾರೆ. ಏಕೆಂದರೆ ಅವರಿಗೆ ಅಧಿಕಾರಿಗಳೊಂದಿಗೆ ‘ಹಿಸಾಬ್ ಕಿತಾಬ್’ ಚುಕ್ತ ಮಾಡಲಿಕ್ಕಿದೆ ಎಂದು ಗುಡುಗಿದ್ದಾರೆ.

ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅಬ್ಬಾಸ್ ಅನ್ಸಾರಿ, ಇತ್ತೀಚೆಗೆ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿ 2022ರ ಯುಪಿ ಚುನಾವಣೆಯಲ್ಲಿ ಮೈತ್ರಿಕೂಟ ಬಹುಮತ ಗಳಿಸಿದರೆ ಆರು ತಿಂಗಳವರೆಗೆ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು. ಮೊದಲು ಅವರು ‘ಹಿಸಾಬ್ ಕಿತಾಬ್’ ಚುಕ್ತ ಮಾಡಬೇಕು. ಬಳಿಕ ಅವರನ್ನು ಎಲ್ಲಿ ಬೇಕಾದರೂ ಕಳಿಸಲಿ ಎಂದು ಹೇಳಿದ್ದೇನೆ ಎಂದು ಬೆಂಬಲಿಗರ ಬಳಿ ಹೇಳಿಕೊಂಡಿದ್ದಾರೆ.

ಈ ವಿವಾದಾತ್ಮಕ ಹೇಳಿಕೆಯ ವೀಡಿಯೋವನ್ನು ಗಮನಿಸಿದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಪ್ರಶಾಂತ್ ಕುಮಾರ್ ಅವರು ಸಾರ್ವಜನಿಕ ರ್ಯಾಲಿಯಲ್ಲಿ ಅಬ್ಬಾಸ್ ಅನ್ಸಾರಿ ನೀಡಿದ ವಿವಾದಾತ್ಮಕ ಹೇಳಿಕೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ವೀಡಿಯೋವನ್ನು ತನಿಖೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮೌ ಪೊಲೀಸರಿಗೆ ಉನ್ನತ ಪೊಲೀಸರು ಆದೇಶ ನೀಡಿದ್ದಾರೆ. 1996ರ ನಂತರ ಮೊದಲ ಬಾರಿಗೆ ಮುಖ್ತಾರ್ ಅನ್ಸಾರಿ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಮಾಫಿಯಾ ಡಾನ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರು ಮೌ ಅಸೆಂಬ್ಲಿ ಕ್ಷೇತ್ರದಿಂದ ಕಣಕ್ಕಿಳಿದಿರುವ ತಮ್ಮ ಪುತ್ರ ಅಬ್ಬಾಸ್ ಅನ್ಸಾರಿಗೆ ಚುನಾವಣೆ ಬಿಟ್ಟುಕೊಟ್ಟಿದ್ದಾರೆ.

ಅಬ್ಬಾಸ್ ಅನ್ಸಾರಿ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಭರವಸೆಯಲ್ಲಿದ್ದಾರೆ. ಏಕೆಂದರೆ ಮೌ ಕ್ಷೇತ್ರವು ಅಬ್ಬಾಸ್ ಅನ್ಸಾರಿ ತಂದೆ ಮುಖ್ತಾರ್ ಅನ್ಸಾರಿಯ ಭದ್ರಕೋಟೆಯಾಗಿದೆ. ಮುಖ್ತಾರ್ ಈ ವಿಧಾನಸಭೆ ಕ್ಷೇತ್ರದಿಂದ ಐದು ಬಾರಿ ಗೆದ್ದಿದ್ದಾರೆ. ಗಮನಾರ್ಹವೆಂದರೆ, 2009ರ ಆಗಸ್ಟ್ನಲ್ಲಿ ಹಾಡ ಹಗಲೇ ಅಶೋಕ್ ಅವರ ಸಹೋದರ ಅಜಯ್ ಪ್ರತಾಪ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಆಗ ಮುಖ್ತಾರ್ ಅನ್ಸಾರಿ ಹತ್ಯೆಯ ಸಂಚು ರೂಪಿಸಿದ ಆರೋಪ ಹೊತ್ತಿದ್ದರು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯ ಮುಕ್ತಾರ್ ಅವರನ್ನು ಖುಲಾಸೆಗೊಳಿಸಿತ್ತು.

ಮಾರ್ಚ್ 2010 ರಲ್ಲಿ, ಅಜಯ್ ಸಿಂಗ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ರಾಮ್ ಸಿಂಗ್ ಮೌರ್ಯ ಕೂಡ ಗುಂಡೇಟಿನಿಂದ ಕೊಲ್ಲಲ್ಪಟ್ಟರು. ಈ ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿ ಅವರನ್ನು ಆರೋಪಿ ಎಂದು ಕೇಳಲಾಗಿತ್ತು. ಇದೇ ಪ್ರಕರಣದಲ್ಲಿ ರಾಮ್ ಸಿಂಗ್ ಮೌರ್ಯ ಅವರ ಗನ್ನರ್ ಕೂಡ ಗುಂಡೇಟಿಗೆ ಬಲಿಯಾದರು.

ಇದನ್ನೂ ಓದಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಮೊಟ್ಟಮೊದಲ ಬಜೆಟ್ ನಿಸ್ಸಂದೇಹವಾಗಿ ರೈತಸ್ನೇಹಿಯಾಗಿದೆ

PAK vs AUS: 24 ವರ್ಷಗಳ ಬಳಿಕ ಪಾಕ್ ನೆಲಕ್ಕೆ ಕಾಲಿಟ್ಟ ಕಾಂಗರೂಗಳಿಗೆ ಬಾಂಬ್ ದಾಳಿಯ ಸ್ವಾಗತ; ಆಸೀಸ್ ನಿಲುವೇನು?

Follow us on

Most Read Stories

Click on your DTH Provider to Add TV9 Kannada