
ಮುಂಬೈ, ಅಕ್ಟೋಬರ್ 2: ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಇಂದು ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಮಗೆ ಹಿಂದುತ್ವದ (Hindutva) ಬಗ್ಗೆ ಉಪನ್ಯಾಸ ನೀಡಬೇಡಿ ಎಂದು ಎಚ್ಚರಿಸಿದ್ದಾರೆ. ಯಾವುದೇ ಹೆಸರುಗಳನ್ನು ತೆಗೆದುಕೊಳ್ಳದೆ, ಪಕ್ಷ ಮತ್ತು ಚಿಹ್ನೆಯನ್ನು ಕದ್ದವರು ಎಂದಿಗೂ ಮೂಲ ಶಿವಸೇನೆ ಪಕ್ಷದ ಮುಖ್ಯಸ್ಥ ಆಗಲು ಸಾಧ್ಯವಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಕೆಸರು ಮತ್ತು ಮಳೆಯ ಹೊರತಾಗಿಯೂ ನೀವೆಲ್ಲರೂ ಇಲ್ಲಿಗೆ ಬಂದಿದ್ದೀರಿ. ಇದು ಯಾರಿಗೆ ಜನರ ಬೆಂಬಲವಿದೆ ಎಂಬುದನ್ನು ತೋರಿಸುತ್ತದೆ ಎಂದು ಮುಂಬೈನ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ನಡೆದ ತಮ್ಮ ರ‍್ಯಾಲಿಯಲ್ಲಿ ಉದ್ಧವ್ ಠಾಕ್ರೆ ಹೇಳಿದರು.
ಇದನ್ನೂ ಓದಿ: ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ‘ಮಹಾ’ ಸಂಗಮ: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ
“ಎರಡು ಸಮುದಾಯಗಳ ನಡುವೆ ಶಾಂತಿಯನ್ನು ಕಾಪಾಡಿಕೊಳ್ಳಲು ಆರ್‌ಎಸ್‌ಎಸ್ ಮುಖ್ಯಸ್ಥರು ಮುಸ್ಲಿಂ ನಾಯಕರೊಂದಿಗೆ ಸಭೆಗಳನ್ನು ನಡೆಸಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಏನು ಹೇಳುತ್ತಾರೆಂದು ನನಗೆ ಕುತೂಹಲವಿದೆ. ನೀವು ಮೋಹನ್ ಭಾಗವತ್ ಅವರನ್ನೂ ಪ್ರಶ್ನಿಸುತ್ತೀರಾ?” ಎಂದು ಅವರು ಕೇಳಿದ್ದಾರೆ.
VIDEO | Mumbai: Shiv Sena (UBT) chief Uddhav Thackeray (@uddhavthackeray) at Dussehra rally said, “BJP is again trying to create divide between Hindus and Muslims ahead of Mumbai civic polls.”
(Full video available on PTI Videos – https://t.co/n147TvrpG7)#Dussehra #Mumbai pic.twitter.com/2pSXYWFBwV
— Press Trust of India (@PTI_News) October 2, 2025
“ಬಿಜೆಪಿ ನಮಗೆ ಹಿಂದುತ್ವವನ್ನು ಕಲಿಸಲು ಪ್ರಯತ್ನಿಸುತ್ತಿದ್ದರೆ, ಆ ಧೈರ್ಯ ಮಾಡಬೇಡಿ. ಹಿಂದುತ್ವದ ವಿಷಯದ ಬಗ್ಗೆ ನಮ್ಮ ವಿರುದ್ಧ ಮಾತನಾಡಲು ನೀವು ಧೈರ್ಯ ಮಾಡಬೇಡಿ ಎಂದು ನಾನು ಇಂದು ಬಿಜೆಪಿಗೆ ಎಚ್ಚರಿಕೆ ನೀಡುತ್ತಿದ್ದೇನೆ” ಎಂದು ಉದ್ಧವ್ ಠಾಕ್ರೆ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 pm, Thu, 2 October 25