AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದುತ್ವದ ಬಗ್ಗೆ ಅವಹೇಳನ; ರಾಹುಲ್ ಗಾಂಧಿಗೆ ಶಿಕ್ಷಿಸಲು ಪೊಳಲಿ ರಾಜರಾಜೇಶ್ವರಿ ತಾಯಿ ಮೊರೆ ಹೋದ ವಿಹೆಚ್​ಪಿ

ಹಿಂದೂ ಧರ್ಮ ಭಯ ಹೋಗಲಾಡಿಸುವ ಬಗ್ಗೆ ಮಾತ್ನಾಡುತ್ತೆ. ಆದರೆ, ಹಿಂದೂ ಹಿಂದೂ ಅಂತಾ 24 ಗಂಟೆ ಹೇಳಿಕೊಳ್ಳುವವರು ಹಿಂಸೆ, ದ್ವೇಷ ಮತ್ತು ಅಸತ್ಯದ ಬಗ್ಗೆ ಮಾತ್ನಾಡ್ತಾರೆ ಎಂದು ರಾಹುಲ್ ಗಾಂಧಿ ಸದನದಲ್ಲಿ ಗುಡುಗಿದ್ದರು. ಈ ಹಿನ್ನೆಲೆ ವಿಹೆಚ್​ಪಿ ದೇವರ ಮೊರೆ ಹೋಗಿದ್ದು ರಾಹುಲ್ ಗಾಂಧಿ ಪಾಠ ಕಳಿಸುವಂತೆ ಪ್ರಾರ್ಥಿಸಿದ್ದಾರೆ.

ಹಿಂದುತ್ವದ ಬಗ್ಗೆ ಅವಹೇಳನ; ರಾಹುಲ್ ಗಾಂಧಿಗೆ ಶಿಕ್ಷಿಸಲು ಪೊಳಲಿ ರಾಜರಾಜೇಶ್ವರಿ ತಾಯಿ ಮೊರೆ ಹೋದ ವಿಹೆಚ್​ಪಿ
ಹಿಂದುತ್ವದ ಬಗ್ಗೆ ಅವಹೇಳನ; ರಾಹುಲ್ ಗಾಂಧಿಗೆ ಶಿಕ್ಷಿಸಲು ದೇವರ ಮೊರೆ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಆಯೇಷಾ ಬಾನು|

Updated on: Jul 14, 2024 | 10:57 AM

Share

ಮಂಗಳೂರು, ಜುಲೈ.14: ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಹಿಂದುತ್ವದ ಬಗ್ಗೆ ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ವಿರುದ್ಧ ದೇವರಿಗೆ ದೂರು ನೀಡಿರುವ ಪ್ರಸಂಗ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಶ್ರೀಕ್ಷೇತ್ರ ಪೊಳಲಿ ರಾಜರಾಜೇಶ್ವರಿ (Polali Rajarajeshwari Temple) ದೇವರಿಗೆ ವಿಹೆಚ್​ಪಿ ದೂರು ನೀಡಿದೆ.

ದೇವರ ನಿಂದನೆ, ಧರ್ಮ ವಿರೋಧಿ ಹೇಳಿಕೆ ಕೊಟ್ಟು ರಾಷ್ಟ್ರೀಯತೆಗೆ ಅವಮಾನ ಮಾಡಿದ್ದಾರೆ. ರಾಹುಲ್ ಗಾಂಧಿಗೆ ಒಳ್ಳೆ ಬುದ್ದಿಕೊಟ್ಟು, ಈ ಹೇಳಿಕೆಗೆ ಶಿಕ್ಷೆ ನೀಡುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀ ಕ್ಷೇತ್ರ ಪೊಳಲಿಯಲ್ಲಿ ವಿಶ್ವ ಹಿಂದೂ ಪರಿಷತ್ ಮಠ ಮಂದಿರ ಅರ್ಚಕ್ ಪುರೋಹಿತ್ ವತಿಯಿಂದ ದೇವರಿಗೆ ದೂರು ಸಲ್ಲಿಸಲಾಗಿದೆ. ಪ್ರಧಾನ ಅರ್ಚಕರಾದ ಪದ್ಮನಾಭ ಭಟ್ ಮೂಲಕ ದೇವರಲ್ಲಿ ದೂರು ಕೊಟ್ಟು ಪ್ರಾರ್ಥನೆ ಸಲ್ಲಿಸಲಾಗಿದೆ.

ಅಧಿವೇಶನದಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?

ಜುಲೈ ತಿಂಗಳ ಆರಂಭದಲ್ಲಿ ಶುರುವಾದ ಸದನದಲ್ಲಿ ರಾಹುಲ್‌ ಗಾಂಧಿ ನೀಟ್‌ ಎಕ್ಸಾಂ ಅಕ್ರಮದ ಬಗ್ಗೆ ಮಾತನಾಡಿದರು. ಆಗ ಚರ್ಚೆಗೆ ಅವಕಾಶ ಸಿಗದಿದ್ದಕ್ಕೆ ವಿಪಕ್ಷಗಳು ಸದನವನ್ನ ಬಹಿಷ್ಕರಿಸಿದ್ವು. ಇದೇ ವೇಳೆ ಮಾತಿಗೆ ನಿಂತ ರಾಹುಲ್‌ ಗಾಂಧಿ, ಹಿಂದೂ ಧರ್ಮ ಭಯ ಹೋಗಲಾಡಿಸುವ ಬಗ್ಗೆ ಮಾತ್ನಾಡುತ್ತೆ. ಆದರೆ, ಹಿಂದೂ ಹಿಂದೂ ಅಂತಾ 24 ಗಂಟೆ ಹೇಳಿಕೊಳ್ಳುವವರು ಹಿಂಸೆ, ದ್ವೇಷ ಮತ್ತು ಅಸತ್ಯದ ಬಗ್ಗೆ ಮಾತ್ನಾಡ್ತಾರೆ. ಅಸಲಿಗೆ ನೀವು ಹಿಂದೂಗಳೇ ಅಲ್ಲ.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ಕೇಸ್: ಶಾಸಕ ಭರತ್ ಶೆಟ್ಟಿಗೆ ಬಿಗ್ ರಿಲೀಫ್

ಈ ದೇಶ ಅಹಿಂಸೆಯ ದೇಶ. ಈ ದೇಶ ಹೆದರಿಸುವ ದೇಶವಲ್ಲ. ನಮ್ಮ ಎಲ್ಲ ಮಹಾಪುರುಷರು ಅಹಿಂಸೆಯ ಮಾತಾಡಿದ್ದಾರೆ. ಭಯ ದೂರವಾಗಿಸುವ ಬಗ್ಗೆ ಮಾತಾಡಿದ್ದಾರೆ. ಹೆದರಬೇಡಿ, ಹೆದರಿಸಬೇಡಿ.. ಭಗವಾನ್ ಶಿವ ಹೇಳುವುದು ಏನಂದ್ರೆ ಹೆದರಬೇಡಿ, ಹೆದರಿಸಬೇಡಿ. ಅದಕ್ಕಾಗಿಯೇ ನಾವು ಕೈ ಮುದ್ರೆ ತೋರಿಸ್ತೇವೆ. ಅಹಿಂಸೆಯ ಮಾತ್ನಾಡ್ತಾರೆ. ತ್ರಿಶೂಲವನ್ನ ಭೂಮಿಯಲ್ಲಿ ಚುಚ್ಚಿ ಹೇಳ್ತೇವೆ. ಆದರೆ, ಯಾವ ಜನರು ತಮ್ಮನ್ನ ಹಿಂದೂ ಅಂತಾ ಹೇಳಿಕೊಳ್ತಾರೋ. 24 ಗಂಟೆಯೂ ಹಿಂಸೆ ಹಿಂಸೆ. ಹಿಂಸೆ ಅಂತಾರೆ. ದ್ವೇಷ.. ದ್ವೇಷ.. ದ್ವೇಷ.. ಅಸತ್ಯ.. ಅಸತ್ಯ.. ಅಸತ್ಯ.. ನೀವು ಹಿಂದೂಗಳೇ ಅಲ್ಲ. ಹಿಂದೂ ಧರ್ಮದಲ್ಲಿ ಸರಳವಾಗಿ ಬರೆದಿದ್ದಾರೆ. ಸತ್ಯದ ಜತೆಗೆ ನಿಲ್ಲಬೇಕು. ಸತ್ಯಕ್ಕೆ ವಿಮುಖವಾಗಿರಬಾರದು. ಸತ್ಯಕ್ಕೆ ಹೆದರಿಕೊಳ್ಳಬಾರದು. ಅಹಿಂಸೆ ನಮ್ಮ ಪ್ರತೀಕವಾಗಿದೆ. ಅದಕ್ಕಾಗಿಯೇ ಈ ಮುದ್ರೆ ಎಂದು ಹಸ್ತ ಮುದ್ರೆ ತೋರಿಸಿದ್ದರು. ಈ ವಿಚಾರ ಗಲಾಟೆಗೆ ಕಾರಣವಾಗಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ