ಹೈದರಾಬಾದ್: ಮೈ ಹೋಮ್ ಗ್ರೂಪ್ ಆಫ್ ಕಂಪನೀಸ್ನ ಸಂಸ್ಥಾಪಕ ಅಧ್ಯಕ್ಷ ಡಾ.ರಾಮೇಶ್ವರ ರಾವ್ ಜೂಪಲ್ಲಿ ಅವರಿಗೆ ‘ಚಾಂಪಿಯನ್ಸ್ ಆಫ್ ಚೇಂಜ್ ತೆಲಂಗಾಣ’ (Champions of Telangana) ಪುರಸ್ಕಾರ ನೀಡಿ ಗೌರವಿಸಲಾಗಿದೆ. ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮತ್ತು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಕೆ.ಜಿ.ಬಾಲಕೃಷ್ಣನ್ ಪುರಸ್ಕಾರವನ್ನು ನೀಡಿದರು. ಗಾಂಧಿ ಮೌಲ್ಯಗಳಿಗೆ ಉತ್ತೇಜನ ನೀಡಿದ ಸಾಧನೆಗಾಗಿ ರಾಮೇಶ್ವರ ರಾವ್ ಅವರಿಗೆ ಈ ಪುರಸ್ಕಾರ ಸಿಕ್ಕಿದೆ. ಸಮಾರಂಭದಲ್ಲಿ ಮಾತನಾಡಿದ ಡಾ.ರಾಮೇಶ್ವರ ರಾವ್, ತೆಲಂಗಾಣದಲ್ಲಿ ಪ್ರಸ್ತುತ ಎರಡು ಮುಖ್ಯ ಕ್ಷೇತ್ರಗಳು ಮುಂಚೂಣಿಯಲ್ಲಿವೆ. ದೇಶದ ಇತರ ರಾಜ್ಯಗಳಲ್ಲಿ ಹಿಂಜರಿಕೆಯ ವಾತಾವರಣ ಇದ್ದರೂ ರಿಯಲ್ ಎಸ್ಟೇಟ್ ಮತ್ತು ಐಟಿ ಕ್ಷೇತ್ರಗಳು ಗಣನೀಯ ಪ್ರಗತಿ ಸಾಧಿಸುತ್ತಿವೆ. ಇದಕ್ಕೆ ತೆಲಂಗಾಣ ಸರ್ಕಾರದ ಉದ್ಯಮ ಸ್ನೇಹಿ ನೀತಿ ಮತ್ತು ಹೂಡಿಕೆದಾರರ ಆಸಕ್ತಿಯೇ ಮುಖ್ಯ ಕಾರಣ ಎಂದರು.
ತೆಲಂಗಾಣ ರಾಜ್ಯದ ಅಭಿವೃದ್ಧಿಗೆ ಧೈರ್ಯ ಮತ್ತು ಸೇವಾ ಮನೋಭಾವದಿಂದ ಶ್ರಮಿಸುವವರನ್ನು ಗೌರವಿಸಲು ಚಾಂಪಿಯನ್ಸ್ ಆಫ್ ಚೇಂಜ್ ತೆಲಂಗಾಣ ಪ್ರಶಸ್ತಿ ಸ್ಥಾಪಿಸಲಾಗಿದೆ. ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಶ್ಲಾಘನೀಯ ಕೆಲಸಗಳನ್ನು ಮಾಡಿದ ಸಂಸ್ಥೆಗಳಿಗೆ ಚಾಂಪಿಯನ್ಸ್ ಆಫ್ ಚೇಂಜ್ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಐತಿಹಾಸಿಕವಾಗಿಯೂ ತೆಲಂಗಾಣ ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ತೆಲಂಗಾಣದ ಸಾಕಷ್ಟು ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇಲ್ಲಿನ ಕ್ರಾಂತಿಕಾರಿಗಳು ಮತ್ತು ಸಮಾಜ ಸುಧಾರಕರು ದೇಶದ ಅಭಿವೃದ್ಧಿಯಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಿದ್ದರು. ತೆಲಂಗಾಣದ ಜನರ ಸಾಧನೆಯನ್ನು ಗುರುತಿಸುವ ಮತ್ತೊಂದು ಮಹತ್ವದ ಪ್ರಯತ್ನ ‘ಚಾಂಪಿಯನ್ಸ್ ಆಫ್ ತೆಲಂಗಾಣ’ ಪುರಸ್ಕಾರ. ಐಎಫ್ಐಇ ಪ್ರತಿವರ್ಷ ಚಾಂಪಿಯನ್ಸ್ ಆಫ್ ಚೇಂಜ್ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಸಾಮಾನ್ಯವಾಗಿ ರಾಷ್ಟ್ರಪತಿ, ಉಪ-ರಾಷ್ಟ್ರಪತಿ, ರಾಜ್ಯಪಾಲರು ಅಥವಾ ರಾಷ್ಟ್ರಮಟ್ಟದ ಪ್ರಮುಖ ವ್ಯಕ್ತಿಗಳು ಈ ಪುರಸ್ಕಾರ ನೀಡುತ್ತಾರೆ. ಚಾಂಪಿಯನ್ಸ್ ಆಫ್ ಚೇಂಜ್ ಪುರಸ್ಕಾರದ ಸಂಸ್ಥಾಪಕ ಅಧ್ಯಕ್ಷರಾಗಿ ನಂದನ್ ಝಾ ಕಾರ್ಯನಿರ್ವಹಿಸುತ್ತಿದ್ದಾರೆ.
ಚಾಂಪಿಯನ್ಸ್ ಆಫ್ ಚೇಂಜ್ ಪುರಸ್ಕಾರ ಪಡೆದವರು
ಪದ್ಮಭೂಷಣ ಪುರಸ್ಕೃತರು ಮತ್ತು ಸ್ತ್ರೀರೋಗ ತಜ್ಞ ಡಾ.ನಾಗೇಶ್ವರ ರೆಡ್ಡಿ, ಕೈಗಾರಿಕೆ-ವಾಣಿಜ್ಯ-ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್, ಪದ್ಮಭೂಷಣ ಪುರಸ್ಕೃತೆ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ನಟ ಮುಕೇಶ್ ರಿಶಿ, ತೆಲುಗು ನಟ ಮಹೇಶ್ಬಾಬು, ಅಲ್ಲು ಅರ್ಜುನ್, ಲೊಹಿಯಾ ಗ್ರೂಪ್ನ ಅಧ್ಯಕ್ಷ ಕನ್ಹಯ್ಯಲಾಲ್ ಲೋಹಿಯಾ. ಇವರ ಜೊತೆಗೆ ಹಿನ್ನೆಲೆ ಗಾಯಕ ಮತ್ತು ಸಂಗೀತ ಸಂಯೋಜಕ ಕೊಮಂಡೂರಿ ರಾಮಾಚಾರಿ, ಡಾ.ಸುಕಾಂತ ಕುಮಾರ್ ಜೇನಾ, ಡಾ.ಪೆದ್ದಿರೆಡ್ಡಿ ಶ್ರೀಧರ್, ನರಸಿ ರೆಡ್ಡಿ ಪೋಷಣ್, ಬಿ.ಮಹೇಂದರ್ ರೆಡ್ಡಿ, ಡಾ.ಪೊನ್ನಿ ಎಂ ಕೊನ್ಕೆಸೊ, ಶೇಷಾದ್ರಿ ವಂಗಲಾ, ನರೇಂದ್ರ ರಾಮ್ ನಂಬುಲಾ, ಸರಸ್ವತಿ ಅನ್ನದಾತ, ಭಾರ್ಗವಿ ಅಮಿರಿನೇನಿ, ಚಿಲಗಾನಿ ಸಂಪತ್ ಕುಮಾರ ಸ್ವಾಮಿ, ಸ್ಟೀಫನ್ ರವೀಂದ್ರ, ಜ್ಯೋತ್ಸ್ನಾ ರೆಡ್ಡಿ, ಸುಧಾ ರಾಣಿ ರೆಡ್ಡಿ, ಶಶಿ ಜಲಿಗಾಮ, ಮನೀಶ್ ದೋಷಿ, ದಿರಿಸಾಲಾ ನರೇಶ್ ಚೌಧರಿ, ಡಾ.ರಾಜ ತಂಗಪ್ಪನ್ ಅವರನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.
ಇದನ್ನೂ ಓದಿ: MEIL: ಜೊಜಿಲಾ ಸುರಂಗ: ಎರಡು ಮುಖ್ಯ ಹಂತ ಪೂರ್ಣಗೊಳಿಸಿದ ಎಂಇಐಎಲ್
ಇದನ್ನೂ ಓದಿ: ತೆಲಂಗಾಣ ರಿಯಲ್ ಎಸ್ಟೇಟ್ ವಿಭಾಗದ ಸಾಧನೆಗೆ ಮೈ ಹೋಮ್ ಗ್ರೂಪ್ ಮುಖ್ಯಸ್ಥ ಡಾ ರಾಮೇಶ್ವರ್ ರಾವ್ಗೆ ಗೌರವ