ತೆಲಂಗಾಣ ರಿಯಲ್ ಎಸ್ಟೇಟ್ ವಿಭಾಗದ ಸಾಧನೆಗೆ ಮೈ ಹೋಮ್ ಗ್ರೂಪ್ ಮುಖ್ಯಸ್ಥ ಡಾ ರಾಮೇಶ್ವರ್ ರಾವ್ಗೆ ಗೌರವ
My Home Group: ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಕಟ್ಟಡಗಳನ್ನು ಯಾರೂ ಪ್ರೋತ್ಸಾಹಿಸಬಾರದು. ರಿಯಲ್ ಎಸ್ಟೇಟ್ ಕಂಪೆನಿಗಳು ಗ್ರಾಹಕರ ನಂಬಿಕೆ ಉಳಿಸಬೇಕು ಎಂದು ರಾವ್ ಕರೆ ನೀಡಿದರು.
ಹೈದರಾಬಾದ್: ಮೈ ಹೋಮ್ ಗ್ರೂಪ್ನ ಮುಖ್ಯಸ್ಥ ಡಾ. ಜುಪಲ್ಲಿ ರಾಮೇಶ್ವರ್ ರಾವ್ ಅವರಿಗೆ ತೆಲಂಗಾಣ ರಿಯಲ್ ಎಸ್ಟೇಟ್ ವಿಭಾಗದ ಜೀವಮಾನ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ತೆಲಂಗಾಣ CREDAI (Confederation of Real Estate Developers Association of India) ನಿಂದ ಪ್ರತಿಷ್ಠಿತ ಪ್ರಶಸ್ತಿ ಘೋಸಿಸಲಾಗಿತ್ತು. ಪ್ರಶಸ್ತಿಯನ್ನು ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ನೀಡಿದ್ದಾರೆ.
ರಿಯಲ್ ಎಸ್ಟೇಟ್ ವೃತ್ತಿಜೀವನದ ತಮ್ಮ ಸುದೀರ್ಘ ಪ್ರಯಾಣದಲ್ಲಿ ಜೊತೆಯಾಗಿ ಇದ್ದವರಿಗೆ ಡಾ. ರಾಮೇಶ್ವರ್ ರಾವ್ ಧನ್ಯವಾದ ತಿಳಿಸಿದರು. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಬಗ್ಗೆ ಹೇಳಿದರು. ರಿಯಲ್ ಎಸ್ಟೇಟ್ ವಿಭಾಗವನ್ನು ಕಾನೂನು ಬಾಹಿರವಾಗಿ ನಡೆಸುವುದರಿಂದ ದೂರ ಇರಬೇಕು ಎಂಬುದನ್ನು ಪ್ರಶಸ್ತಿ ಸ್ವೀಕರಿಸಿ ಮಾತನಾಡುವ ವೇಳೆ ಒತ್ತಿ ಹೇಳಿದರು.
ಮುಂಬರುವ ವರ್ಷಗಳಲ್ಲಿ ಮೈ ಹೋಮ್ ಗ್ರೂಪ್ ತನ್ನ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹೈದರಾಬಾದ್ನಲ್ಲಿ ಫ್ಲಾಟ್ ಬೇಡಿಕೆ ಉತ್ತಮವಾಗಿದೆ. ಆದರೆ, ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಕಟ್ಟಡಗಳನ್ನು ಯಾರೂ ಪ್ರೋತ್ಸಾಹಿಸಬಾರದು. ರಿಯಲ್ ಎಸ್ಟೇಟ್ ಕಂಪೆನಿಗಳು ಗ್ರಾಹಕರ ನಂಬಿಕೆ ಉಳಿಸಬೇಕು ಎಂದು ರಾವ್ ಕರೆ ನೀಡಿದರು.
ಇದೇ ವೇಳೆ, ಭಗವದ್ ಚಿನ್ನ ಜೀಯರ್ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ತಲೆ ಎತ್ತಲಿರುವ ಸಮಾನತೆಯ ಮೂರ್ತಿಯ ಬಗ್ಗೆ ಅವರು ಪ್ರಸ್ತಾಪಿಸಿದರು. 11ನೇ ಶತಮಾನದ ಸಂತ ಭಗವದ್ ರಾಮಾನುಜ ಆಚಾರ್ಯರ ಪ್ರತಿಮೆ ಫೆಬ್ರವರಿ 2022ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿರುವ ಬಗ್ಗೆ ಮಾಹಿತಿ ನೀಡಿದರು.
ಮೈ ಹೋಮ್ ಗ್ರೂಪ್ ಅನ್ನು ಡಾ. ರಾಮೇಶ್ವರ್ ರಾವ್ 1986 ರಲ್ಲಿ ಆರಂಭಿಸಿದರು. ಕೈಗೆಟಕುವ ದರದಲ್ಲಿ ಉತ್ತಮ ಜೀವನ ನೀಡುವ ಉದ್ದೇಶದಿಂದ ಈ ಕಾರ್ಯ ಆರಂಭಿಸಲಾಗಿತ್ತು. ಅದರಂತೆಯೇ ಉತ್ತಮ ಗುಣಮಟ್ಟದ ವಸತಿಯನ್ನು ಸುಮಾರು 10 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಕಳೆದ 35 ವರ್ಷಗಳಲ್ಲಿ ಈ ಗ್ರೂಪ್ ನೀಡಿದೆ.
ಮೈ ಹೋಮ್ ಗ್ರೂಪ್ನ ಕಿರು ಮಾಹಿತಿ ಮೈ ಹೋಮ್ ಗ್ರೂಪ್ ರಿಯಲ್ ಎಸ್ಟೇಟ್ ಜಗತ್ತಿನಲ್ಲಿ ಪರಿಚಿತ ಹೆಸರು. ಹೈದರಾಬಾದ್ನಲ್ಲಿ ಅತ್ಯುತ್ತಮ ವಸತಿ ಯೋಜನೆಗಳನ್ನು ನೀಡಿ ಮೈಹೋಮ್ ಖ್ಯಾತವಾಗಿದೆ. 21ಕ್ಕೂ ಅಧಿಕ ವಸತಿ ಹಾಗೂ ಇತರ ವಾಣಿಜ್ಯ ಯೋಜನೆಗಳನ್ನು ಮೈಹೋಮ್ ಪೂರ್ಣಗೊಳಿಸಿದೆ. ಅತಿ ಐಶಾರಾಮಿ ನಿವಾಸಗಳ ವಿಚಾರದಲ್ಲಿ ಬಂದರೆ ಮೈಹೋಮ್ಗೆ ಸುಮಾರು 30 ವರ್ಷಗಳ ಹಿನ್ನೆಲೆ ಇದೆ. ಜನರ ಸಂತೋಷ, ಉತ್ತಮ ಜೀವನ, ಕೆಲಸದಲ್ಲಿ ಪಾರದರ್ಶಕತೆ, ಸಮಯೋಚಿತ ಕೆಲಸ, ಸ್ತಳದ ಆಯ್ಕೆ, ಭದ್ರತೆ ಇವುಗಳಿಗೆ ಒತ್ತು ಕೊಟ್ಟು ಮೈಹೋಮ್ ಗ್ರೂಪ್ ಕೆಲಸ ಮಾಡುತ್ತದೆ.
ವಿಶ್ವ ದರ್ಜೆಯ ಜೀವನ ಮತ್ತು ಕೆಲಸದ ವಾತಾವರಣ ನಿರ್ಮಿಸಿಕೊಡುವುದು ಮೈಹೋಮ್ ಗ್ರೂಪ್ನ ವಿಷನ್ ಆಗಿದೆ. ಗುಣಮಟ್ಟದ ಸಿಮೆಂಟ್, ವಿದ್ಯುತ್ ಮುಂತಾದ ಸವಲತ್ತುಗಳ ಮೂಲಕ ಕನಸಿನ ಮನೆ ನಿರ್ಮಿಸಿಕೊಡುವುದು ಹಾಗೂ ಗುಣಮಟ್ಟದ ಶಿಕ್ಷಣದ ಮೂಲಕ ಜೀವನಮಟ್ಟ ಶ್ರೀಮಂತಗೊಳಿಸುವುದು ಮೈಹೋಮ್ ಗ್ರೂಪ್ ಯೋಜನೆಯಾಗಿದೆ.
ಇದನ್ನೂ ಓದಿ: ಲೈಮ್ ಸ್ಟೋನ್ ಗಣಿಗಾರಿಕೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡ ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್
ಇದನ್ನೂ ಓದಿ: ಸಮಾನತೆಯ ಮೂರ್ತಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ ಚಿನ್ನ ಜೀಯರ್ ಸ್ವಾಮೀಜಿ
Published On - 6:32 pm, Fri, 24 December 21