
ನವದೆಹಲಿ, ಜನವರಿ 13: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದ ಡ್ರೋನ್‌ಗಳು (Drone) ಮತ್ತೆ ಕಾಣಿಸಿಕೊಂಡಿವೆ. ರಾಜೌರಿ ಸೆಕ್ಟರ್‌ನ ನಿಯಂತ್ರಣ ರೇಖೆಯ ಉದ್ದಕ್ಕೂ ಇಂದು ರಾತ್ರಿ ಅನುಮಾನಾಸ್ಪದ ಡ್ರೋನ್‌ಗಳು ಕಂಡುಬಂದ ನಂತರ ಭದ್ರತಾ ಪಡೆಗಳನ್ನು ಎಚ್ಚರಿಸಲಾಯಿತು. ಕೇವಲ 48 ಗಂಟೆಗಳಲ್ಲಿ ಎರಡನೇ ಬಾರಿಗೆ ಡ್ರೋನ್‌ಗಳು ಪತ್ತೆಯಾದ ನಂತರ ಭಾರತೀಯ ಸೇನೆಯು ಬಲವಾಗಿ ಅದಕ್ಕೆ ಪ್ರತಿದಾಳಿ ನಡೆಸಿತು. ಇದರಿಂದ ಗಡಿಯಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸಲಾಗಿದೆ. ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಗಡಿಯಾಚೆಗಿನ ಪ್ರಚೋದನೆಗಳು ಮತ್ತು ಕದನ ವಿರಾಮ ಉಲ್ಲಂಘನೆಗಳ ವಿರುದ್ಧ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳ ನಂತರ ಮತ್ತೆ ಡ್ರೋನ್‌ಗಳು ಪ್ರತ್ಯಕ್ಷವಾಗಿವೆ.
ಮೂಲಗಳ ಪ್ರಕಾರ, ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ನಿಯೋಜಿಸಲಾದ ಭಾರತೀಯ ಸೇನಾ ಸಿಬ್ಬಂದಿ ಡ್ರೋನ್ ಚಟುವಟಿಕೆ ಪತ್ತೆಯಾದ ತಕ್ಷಣ ಶಂಕಿತ ಡ್ರೋನ್‌ಗಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದರು. ಡ್ರೋನ್‌ಗಳನ್ನು ಗಡಿಯಾಚೆಯಿಂದ ಕಳುಹಿಸಲಾಗಿದೆ ಎಂದು ಶಂಕಿಸಲಾಗಿದೆ. ಬಹುಶಃ ಕಣ್ಗಾವಲು ಅಥವಾ ಇತರ ಅನುಮಾನಾಸ್ಪದ ಉದ್ದೇಶಗಳಿಗಾಗಿ ಪಾಕಿಸ್ತಾನದಿಂದ ಭಾರತದೊಳಗೆ ಕಳುಹಿಸಿರುವ ಸಾಧ್ಯತೆಯಿದೆ.
BREAKING : At least 2 Pakistani drones were shot down by alert Indian Army troopers near Line of Control (LoC) in Rajouri when they tried to cross the LoC. (Sources)
(Representative Video) pic.twitter.com/VlMvqJKzyF
— Baba Banaras™ (@RealBababanaras) January 13, 2026
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡ್ರೋನ್ ಚಟುವಟಿಕೆಗಳ ಬಗ್ಗೆ ಭಾರತೀಯ ಸೇನೆಯಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ
ಈ ಘಟನೆಯ ನಂತರ ಜಮ್ಮು ಕಾಶ್ಮೀರದ ಗಡಿಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗಿದೆ. ಸೇನೆ ಮತ್ತು ಇತರ ಭದ್ರತಾ ಸಂಸ್ಥೆಗಳು ಕಾಶ್ಮೀರದಾದ್ಯಂತ ಕಣ್ಗಾವಲು ತೀವ್ರಗೊಳಿಸಿವೆ ಮತ್ತು ಶೋಧ ಕಾರ್ಯಾಚರಣೆಗಳನ್ನು ಚುರುಕುಗೊಳಿಸಿವೆ.
Another Pakistani Drone spotted near LoC at Rajouri of Jammu & Kashmir. pic.twitter.com/Wqz7BZljTc
— Cauliflower Farmer (@Cauliflower1007) January 13, 2026
ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಡ್ರೋನ್‌ಗಳ ಉಪಸ್ಥಿತಿಯ ಬಗ್ಗೆ ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಲಾಗಿದೆ. ರಾಜೌರಿ ಜಿಲ್ಲೆಯ ಕೇರಿ ಸೆಕ್ಟರ್ ಮತ್ತು ದೂಂಗಾ ಗಲಿ ಪ್ರದೇಶಗಳಲ್ಲಿ ಮಧ್ಯರಾತ್ರಿಯಲ್ಲಿ ಅನುಮಾನಾಸ್ಪದ ಡ್ರೋನ್‌ಗಳು ಹಾರುತ್ತಿರುವುದರಿಂದ ಶತ್ರು ದೇಶದಿಂದ ಬಂದ ಈ ಡ್ರೋನ್‌ಗಳು ಶಸ್ತ್ರಾಸ್ತ್ರಗಳು ಅಥವಾ ಮಾದಕವಸ್ತುಗಳನ್ನು ಸಾಗಿಸುತ್ತಿರಬಹುದು ಎಂಬ ಅನುಮಾನದ ಮೇಲೆ ಸೇನೆಗೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: Shaksgam Valley: ಭಾರತ-ಚೀನಾ ನಡುವಿನ ಹೊಸ ಸಂಘರ್ಷಕ್ಕೆ ಕಾರಣವಾದ ಶಕ್ಸ್‌ಗಮ್ ಕಣಿವೆ ಎಲ್ಲಿದೆ? ಏನಿದು ವಿವಾದ?
ಕಳೆದ 48 ಗಂಟೆಗಳಲ್ಲಿ ರಾಜೌರಿ ವಲಯದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಚಟುವಟಿಕೆಯಲ್ಲಿನ ಹೆಚ್ಚಳವು ಭದ್ರತಾ ಪಡೆಗಳಲ್ಲಿ ಕಳವಳವನ್ನು ಮೂಡಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ನಂತರ ಇಷ್ಟು ಕಡಿಮೆ ಅವಧಿಯಲ್ಲಿ ಡ್ರೋನ್‌ಗಳು ಪತ್ತೆಯಾಗಿರುವುದು ಇದೇ ಮೊದಲು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ