ಹೆಂಡತಿ-ಅತ್ತೆ ಜೊತೆ ಜಗಳವಾಡಿ, ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಸತ್ತ ಕುಡುಕ ಪತಿ! ದಂಪತಿಗೆ ಮೂವರು ಮಕ್ಕಳು

| Updated By: ಸಾಧು ಶ್ರೀನಾಥ್​

Updated on: Oct 25, 2021 | 5:36 PM

3 ತಿಂಗಳಿಂದ ತವರು ಮನೆ ಸೇರಿದ್ದ ಹೆಂಡತಿಯನ್ನು ತವರು ಮನೆಯಿಂದ ಕರೆತರಲು ಪತಿ ಪಬುರಾಮ್​ ತನ್ನ ಮಾವನ ಊರಿಗೆ ಹೋಗಿದ್ದ. ಅಲ್ಲಿ ಹೆಂಡತಿ ಮತ್ತು ಅತ್ತೆಯ ಜೊತೆ ಜಗಳ ಶುರುವಾಗಿದೆ. ಅದಾಗುತ್ತಿದ್ದಂತೆ ಆತ ಶರಾಬು ಕುಡಿದಿದ್ದಾನೆ. ಅದೇ ಕೋಪದಲ್ಲಿ ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಸತ್ತಿದ್ದಾನೆ. ಘಟನೆ ನಡೆದಾಗ ಮನಯೆಲ್ಲಿ ಪಬುರಾಮ್​ ಮಾವ ಇರಲಿಲ್ಲ ಎಂದು ತಿಳಿದುಬಂದಿದೆ.

ಹೆಂಡತಿ-ಅತ್ತೆ ಜೊತೆ ಜಗಳವಾಡಿ, ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಸತ್ತ ಕುಡುಕ ಪತಿ! ದಂಪತಿಗೆ ಮೂವರು ಮಕ್ಕಳು
ಘೋರ ಸುದ್ದಿ: ಅಕ್ರಮ ವಿದ್ಯುತ್​ಗೆ ರೈತ ಬಲಿ; ಅದಕ್ಕೆ ವಿದ್ಯುತ್ ಅಳವಡಿಸಿದ್ದ ಜಮೀನು ಮಾಲೀಕನನ್ನು ಹೊಡೆದು ಸಾಯಿಸಿದ ಸ್ಥಳೀಯರು
Follow us on

ಜೈಸಲ್ಮೇರ್, ರಾಜಸ್ಥಾನ: ಕುಡುಕ ಪತಿಯೊಬ್ಬ ತನ್ನ ಹೆಂಡತಿಯ ಜೊತೆ ಜಗಳ ಮಾಡಿಕೊಂಡು ಹೋಗಿ ಸಮೀಪದ ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಇಹಲೋಕ ಯಾತ್ರೆ ತ್ಯಜಿಸಿದ್ದಾನೆ! ಇಲ್ಲಿನ ಬರ್ಮರ್ ಗ್ರಾಮೀಣ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಯುವಕನೊಬ್ಬ ತನ್ನ ಪತ್ನಿ ಮತ್ತು ಅತ್ತೆ ಜೊತೆ ಗಂಭೀರವಾಗಿ ಜಗಳವಾಡಿಕೊಂಡು ಅದೇ ಗುಂಗಿನಲ್ಲಿ ಸಮೀಪದ ವಿದ್ಯುತ್​ ಕಂಬಕ್ಕೆ ನೇಣು ಬಿಗಿದುಕೊಂಡು ಸತ್ತಿದ್ದಾನೆ.

ದಂಪತಿಗೆ ಮೂವರು ಮಕ್ಕಳು:
ಘಟನೆಯ ಬಳಿಕ ಸ್ಥಳೀಯ ಪೊಲೀಸರು ಪಬುರಾಮ್​ ಎಂಬ ಯುವಕನ ಶವ ಪರೀಕ್ಷೆ ನಡೆಸಿ, ದೇಹವನ್ನುಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಪಬುರಾಮ್​ ಹಾಪೋಂ ಕಿ ಧಣಿ ಪ್ರದೇಶದಲ್ಲಿ ವಾಸವಾಗಿದ್ದ. ಆರು ವರ್ಷ ಹಿಂದೆ ಆತ ದರುಡಾ ಗ್ರಾಮದ ಧೂಡಿ ದೇವಿ ಎಂಬ ಯುವತಿಯನ್ನು ವಿವಾಹವಾಗಿದ್ದ. ಮದುವೆಯ ಬಳಿಕ ದಂಪತಿಗೆ ಮೂವರು ಮಕ್ಕಳು ಇದ್ದರು.

ಕಳೆದ 2-3 ತಿಂಗಳಿಂದ ತವರು ಮನೆ ಸೇರಿದ್ದ ಹೆಂಡತಿಯನ್ನು ತವರು ಮನೆಯಿಂದ ಕರೆತರಲು ಪತಿ ಪಬುರಾಮ್​ ತನ್ನ ಮಾವನ ಊರಿಗೆ ಹೋಗಿದ್ದ. ಅಲ್ಲಿ ಹೆಂಡತಿ ಮತ್ತು ಅತ್ತೆಯ ಜೊತೆ ಜಗಳ ಶುರುವಾಗಿದೆ. ಅದಾಗುತ್ತಿದ್ದಂತೆ ಆತ ಶರಾಬು ಕುಡಿದಿದ್ದಾನೆ. ಅದೇ ಕೋಪದಲ್ಲಿ ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಸತ್ತಿದ್ದಾನೆ. ಘಟನೆ ನಡೆದಾಗ ಮನಯೆಲ್ಲಿ ಪಬುರಾಮ್​ ಮಾವ ಇರಲಿಲ್ಲ ಎಂದು ತಿಳಿದುಬಂದಿದೆ.

ಕೊನೆಗೆ, ಅಕ್ಕಪಕ್ಕದವರು ವಿದ್ಯುತ್​ ಕಂಬದಲ್ಲಿ ನೇತಾಡುತ್ತಿದ್ದ ಪಬುರಾಮ್​ ಶವವನ್ನು ನೋಡಿ, ಆತನ ಪತ್ನಿಗೆ ಮಾಹಿತಿ ನೀಡಿದ್ದಾರೆ. ಘಟನೆ ವರದಿಯಾಗುತ್ತಿದ್ದಂತೆ ಸ್ಥಳೀಯ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಪ್ರಕರಣನ್ನು ದಾಖಲಿಸಿಕೊಂಡು ತನಿಖೆ ಶುರು ಮಾಡಿರುವುದಾಗಿ ಠಾಣಾಧಿಕಾರಿ ಪರಬತ್ ಸಿಂಗ್​ ತಿಳಿಸಿದ್ದಾರೆ.

(Drunk Man Argue With Wife and Mother in-law in Barmer in Jaisalmer in Rajasthan Ends Life by Hanging Self From Electricity Tower)

Published On - 5:35 pm, Mon, 25 October 21