AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಟ: ಪ್ರಸಿದ್ಧ ಚಾರ್ ಧಾಮ್ ಯಾತ್ರೆಗೆ ಭಕ್ತರ ಭೇಟಿ ಕ್ಷೀಣ, 30 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳಿಂದ 4 ಲಕ್ಷಕ್ಕೆ ಕುಸಿತ

Char Dham Devasthanam Management Board: ಸೆಪ್ಟೆಂಬರ್ 18 ಮತ್ತು ಅಕ್ಟೋಬರ್ 31 ರ ನಡುವೆ 4 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಹಿಮಾಲಯದ ಉತ್ತರಾಖಂಡ್‌ ರಾಜ್ಯದ ಚಾರ್ ಧಾಮ್ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಕೇದಾರನಾಥ ದೇವಾಲಯಕ್ಕೆ ಗರಿಷ್ಠ 2 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ ಎಂದು ಚಾರ್ ಧಾಮ್ ದೇವಸ್ಥಾನಂ ಆಡಳಿತ ಮಂಡಳಿ ಹೇಳಿದೆ.

ಕೊರೊನಾ ಕಾಟ: ಪ್ರಸಿದ್ಧ ಚಾರ್ ಧಾಮ್ ಯಾತ್ರೆಗೆ ಭಕ್ತರ ಭೇಟಿ ಕ್ಷೀಣ, 30 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳಿಂದ 4 ಲಕ್ಷಕ್ಕೆ ಕುಸಿತ
ಕೊರೊನಾ ಕಾಟ: ಪ್ರಸಿದ್ಧ ಚಾರ್ ಧಾಮ್ ಯಾತ್ರೆಗೆ ಭಕ್ತರ ಭೇಟಿ ಕ್ಷೀಣ, 30 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳಿಂದ 4 ಲಕ್ಷಕ್ಕೆ ಕುಸಿತ
S Chandramohan
| Edited By: |

Updated on:Nov 01, 2021 | 12:04 PM

Share

ಕೊರೊನಾ ಸಾಂಕ್ರಮಿಕದಿಂದ ಉತ್ತರಾಖಂಡ್‌ ರಾಜ್ಯದ ಪ್ರಸಿದ್ದ ಚಾರ್ ಧಾಮ್ ಯಾತ್ರೆಗೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯ ಮೇಲೆ ಪರಿಣಾಮ ಬೀರಿದೆ. ಈ ಹಿಂದಿನ ವರ್ಷಗಳಲ್ಲಿ ಪ್ರತಿ ವರ್ಷ ಚಾರ್ ಧಾಮ್ ಯಾತ್ರೆಗೆ 30 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡುತ್ತಿದ್ದರು. ಆದರೇ, ಈ ವರ್ಷ ಸೆಪ್ಟೆಂಬರ್ 18ರಿಂದ ಆಕ್ಟೋಬರ್ 31ರ ನಡುವೆ ಬರೀ 4 ಲಕ್ಷ ಭಕ್ತಾದಿಗಳು ಮಾತ್ರ ಭೇಟಿ ನೀಡಿದ್ದಾರೆ. ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಬಾರಿ ಕುಸಿತವಾಗಿದೆ.

ಸೆಪ್ಟೆಂಬರ್ 18 ಮತ್ತು ಅಕ್ಟೋಬರ್ 31 ರ ನಡುವೆ 4 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಹಿಮಾಲಯದ ಉತ್ತರಾಖಂಡ್‌ ರಾಜ್ಯದ ಚಾರ್ ಧಾಮ್ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಕೇದಾರನಾಥ ದೇವಾಲಯಕ್ಕೆ ಗರಿಷ್ಠ 2 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ ಎಂದು ಚಾರ್ ಧಾಮ್ ದೇವಸ್ಥಾನಂ ಆಡಳಿತ ಮಂಡಳಿ (Uttarakhand Char Dham Devasthanam Management Board) ಹೇಳಿದೆ.

ಉತ್ತರಾಖಂಡ ಹೈಕೋರ್ಟ್ ಸರ್ಕಾರದ ಸಿದ್ಧತೆಗಳಿಂದ ತೃಪ್ತರಾಗುವವರೆಗೆ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿದ್ದರಿಂದ ಯಾತ್ರೆ ನಾಲ್ಕು ತಿಂಗಳ ವಿಳಂಬವಾಗಿ ಆರಂಭವಾಯಿತು. ಪ್ರಸ್ತುತ ನಿರ್ಬಂಧಗಳ ಪ್ರಕಾರ, ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಅಥವಾ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರುವವರು ಮಾತ್ರ ದೇಗುಲಗಳಿಗೆ ಭೇಟಿ ನೀಡಲು ಅನುಮತಿ ನೀಡಲಾಗಿದೆ. ದೇವಸ್ಥಾನಂ ಮಂಡಳಿಯ ಮಾಧ್ಯಮ ಉಸ್ತುವಾರಿ ಹರೀಶ್ ಗೌರ್ ಮಾತನಾಡಿ, “ಗರಿಷ್ಠ ಯಾತ್ರಿಕರು ಕೇದಾರನಾಥಕ್ಕೆ ಭೇಟಿ ನೀಡಿದರು, ನಂತರ ಬದರಿನಾಥ್, ಯಮುನೋತ್ರಿ ಮತ್ತು ಗಂಗೋತ್ರಿ ದೇಗುಲಗಳಿಗೆ ಭೇಟಿ ನೀಡಿದರು.” ಎಂದರು.

ಸುಮಾರು 2.2 ಲಕ್ಷ ಯಾತ್ರಾರ್ಥಿಗಳು ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ್ದರೆ, 1.2 ಲಕ್ಷ ಮಂದಿ ಬದರಿನಾಥಕ್ಕೆ ಭೇಟಿ ನೀಡಿದ್ದಾರೆ. ಯಮುನೋತ್ರಿ ಮತ್ತು ಗಂಗೋತ್ರಿ ದೇಗುಲಗಳಿಗೆ ತಲಾ 32,000 ಯಾತ್ರಿಕರು ಭೇಟಿ ನೀಡಿದ್ದಾರೆ ಎಂದು ದೇವಸ್ಥಾನಂ ಮಂಡಳಿ ತಿಳಿಸಿದೆ.

ಏತನ್ಮಧ್ಯೆ, ವಿಶ್ವದ ಅತಿ ಎತ್ತರದ ಶಿವ ದೇವಾಲಯವಾದ ತುಂಗನಾಥನ ದ್ವಾರಗಳನ್ನು ಶನಿವಾರ ಚಳಿಗಾಲಕ್ಕಾಗಿ ಮುಚ್ಚಲಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹೂಗಳ ಕಣಿವೆಯನ್ನು ಭಾನುವಾರದಿಂದ ಪ್ರವಾಸಿಗರಿಗೆ ಮುಚ್ಚಲಾಗಿದೆ. “ಈ ವರ್ಷ, ಕನಿಷ್ಠ 5,500 ಯಾತ್ರಿಕರು ರುದ್ರಪ್ರಯಾಗದ ಚೋಪ್ಟಾ ಬಳಿ 3,470 ಮೀಟರ್ ಎತ್ತರದಲ್ಲಿರುವ ತುಂಗನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ” ಎಂದು ಗೌರ್ ಹೇಳಿದರು.

2017ರಲ್ಲಿ ಸುಮಾರು 22 ಲಕ್ಷ ಭಕ್ತರು ಚಾರ್ ಧಾಮ್ ದೇಗುಲಗಳಿಗೆ ಭೇಟಿ ನೀಡಿದ್ದರು. ಈ ಸಂಖ್ಯೆ 2018 ರಲ್ಲಿ 26 ಲಕ್ಷಕ್ಕೆ ಏರಿತು ಮತ್ತು 2019 ರಲ್ಲಿ 32 ಲಕ್ಷಕ್ಕೆ ತಲುಪಿತು. 2020 ರಲ್ಲಿ, ಸಾಂಕ್ರಾಮಿಕ ರೋಗದಿಂದ ವಿಧಿಸಲಾದ ನಿರ್ಬಂಧಗಳಿಂದಾಗಿ, ವಾರ್ಷಿಕ ತೀರ್ಥಯಾತ್ರೆಗೆ ಕೇವಲ 3 ಲಕ್ಷ ಯಾತ್ರಾರ್ಥಿಗಳು ಬಂದರು. ಉತ್ತರಾಖಂಡ ಹೈಕೋರ್ಟ್ ಸರ್ಕಾರದ ಸಿದ್ಧತೆಗಳಿಂದ ತೃಪ್ತರಾಗುವವರೆಗೆ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿದ್ದರಿಂದ ಯಾತ್ರೆ ನಾಲ್ಕು ತಿಂಗಳ ವಿಳಂಬವಾಗಿ ಆರಂಭವಾಯಿತು.

(Due to covid 19 pandemic char dham devotees visit reduced Char Dham Devasthanam Management Board)

Published On - 11:17 am, Mon, 1 November 21

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?