Duologue With Barun Das: ತಲೆ ಮೇಲೆ ಟಿಆರ್ಪಿ ಕಳಂಕ ಹೊತ್ತು ಹೋರಾಡಿದ್ದ ಆರ್ನಬ್: ಇಲ್ಲಿದೆ ಭಾರತೀಯ ಸುದ್ದಿಮಾಧ್ಯಮದ ಆರೋಪ ಮುಕ್ತಿ, ಗೆಲುವಿನ ಕಥನ
ಎರಡು ವರ್ಷದ ಹಿಂದೆ ಭಾರಿ ಸುದ್ದಿ ಮಾಡಿದ್ದ ಟಿಆರ್ಪಿ ಹಗರಣದ ಬಗ್ಗೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
(ಆರ್ನಬ್ ಗೋಸ್ವಾಮಿ- ಅಂತಿಮ TRP ವರದಿ ಬರುವ ಕೆಲವು ದಿನಗಳ ಮೊದಲು ನಾನು ಬರುಣ್ ಅವರೊಂದಿಗೆ ಕುಳಿತು ಈ ಡ್ಯುಯೊಲೊಗ್ ಅನ್ನು ರೆಕಾರ್ಡ್ ಮಾಡಿದ್ದೇನೆ. ನನ್ನ ಬಂಧನವಾಗಿ ಆಮೇಲೆ ಹೊರಬಂದ ನಂತರ, ಮೊದಲ ಬಾರಿಗೆ ನನ್ನ ಸೆರೆವಾಸದ ಬಗ್ಗೆ ನಾನು ಮಾತನಾಡುವಂತೆ ಮಾಡಿದವರು ಬರುಣ್. ರಿಪಬ್ಲಿಕ್ ಟಿವಿಗೆ ಏನಾಯಿತು, ನಾವು ಹೇಗೆ ಹೋರಾಡಿ ಗೆದ್ದಿದ್ದೇವೆ ಎಂಬ ಸತ್ಯವನ್ನು ಜನರು ತಿಳಿದುಕೊಳ್ಳಬೇಕು. ಈ ಅವಕಾಶ ನೀಡಿದ್ದಕ್ಕಾಗಿ ಬರುಣ್ ಅವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ.)
ಎರಡು ವರ್ಷದ ಹಿಂದೆ ಭಾರಿ ಸುದ್ದಿ ಮಾಡಿದ್ದ ಟಿಆರ್ಪಿ ಹಗರಣದ ಬಗ್ಗೆ ಪತ್ರಕರ್ತ ಆರ್ನಬ್ ಗೋಸ್ವಾಮಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಟಿಆರ್ಪಿ ಹಗರಣದಲ್ಲಿ ತನಿಖಾ ಸಂಸ್ಥೆ ಇಡಿಯಿಂದ ಕ್ಲೀನ್ಚಿಟ್ ಪಡೆದ ಬಳಿಕ ರಿಪಬ್ಲಿಕ್ ಮೀಡಿಯಾ ಲಿಮಿಟೆಡ್ನ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯವರು ಟಿವಿ9 ನೆಟ್ವರ್ಕ್ನ ಎಂಡಿ, ಸಿಇಒ ಬರುಣ್ ದಾಸ್ ಅವರೊಂದಿಗೆ ಮುಕ್ತ ಮಾತುಕತೆಯಲ್ಲಿ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಟಿಆರ್ಪಿ ಹಗರಣಕ್ಕೆ ಹೊಸ ಮಾಧ್ಯಮ ಸಂಸ್ಥೆ ಹಾಗೂ ಇಲ್ಲಿಯವರೆಗಿನ ಮಾಧ್ಯಮ ದೈತ್ಯರ ಜಗಳವೇ ಕಾರಣ, ರಿಪಬ್ಲಿಕ್ನ ಟಿಆರ್ಪಿಯನ್ನು ಸಹಿಸಿಕೊಳ್ಳಲಾಗದೆ ಇಂತಹ ಪ್ರಯತ್ನ ನಡೆಯಿತು ಎನ್ನುವ ಸ್ಫೋಟಕ ವಿಚಾರವನ್ನು ಆರ್ನಬ್ ಬಹಿರಂಗಪಡಿಸಿದ್ದಾರೆ.
ಭಾರತದ ಮಾಧ್ಯಮಗಳು ಹಾಗೂ ಇಂದಿನ ಸವಾಲುಗಳು ಹಾಗೂ ಇತರೆ ವಿಚಾರಗಳ ಬಗ್ಗೆ ಟಿವಿ9 ನೆಟ್ವರ್ಕ್ನ ಸಿಇಒ ಹಾಗೂ ಎಂಡಿ ಬರುಣ್ ದಾಸ್ ಅವರೊಂದಿಗೆ ಅರ್ನಬ್ ಗೋಸ್ವಾಮಿ ಮುಕ್ತವಾಗಿ ಮಾತನಾಡಿದ್ದಾರೆ. ಇದಲ್ಲದೆ ಎನ್ಡಿಟಿವಿ, ಟೈಮ್ಸ್ನೌ ಹಾಗೂ ರಿಪಬ್ಲಿಕ್ ದಿನಗಳಲ್ಲಿನ ನೇಷನ್ ವಾಂಟ್ಸ್ ಟು ನೋ ಕಾರ್ಯಕ್ರಮದ ಹಿಂದಿನ ಕೆಲವು ವಿವಾದಗಳ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.
ಆರ್ನಬ್ ಗೋಸ್ವಾಮಿ ಬಗ್ಗೆ ಮಾತನಾಡಿದ ಟಿವಿ9 ನೆಟ್ವರ್ಕ್ನ ಎಂಡಿ ಬರುಣ್ ದಾಸ್ ಅವರು, ಅಧ್ಯಯನಶೀಲತೆಗೆ ಸಂಬಂಧಿಸಿದಂತೆ ಗೋಸ್ವಾಮಿ ಒಬ್ಬ ಅತ್ಯದ್ಭುತ ವ್ಯಕ್ತಿ. ಅವರನ್ನು ಇಷ್ಟಪಡಿ ಅಥವಾ ದ್ವೇಷಿಸಿ, ಆದರೆ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅವರ ವಿಶೇಷವಾದ ಶಕ್ತಿ ಏನೆಂದರೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ತುಂಬಾ ನಿರ್ಭಾವುಕವಾಗಿ ಮಾತನಾಡುತ್ತಾರೆ.
ಅರ್ನಬ್ ಗೋಸ್ವಾಮಿ ಮಾತುಕತೆಯನ್ನು ಮುಂದುವರೆಸಿ, ವಿವಾದಾತ್ಮಕ ವಿಚಾರಗಳಿಗೆ ಬರುಣ್ ಅವರ ವಿಚಾರಗಳು ತುಂಬಾ ತೀಕ್ಷ್ಣವಾಗಿರುತ್ತದೆ ಮತ್ತು ನಾನು ಇಲ್ಲಿಯವರೆಗೆ ಮಾತನಾಡದ ವಿಚಾರಗಳನ್ನು ಇಂದು ಹೊರಗೆ ಹಾಕುವಂತೆ ಮಾಡಿದ್ದಾರೆ. ನ್ಯೂಸ್ಪ್ಲಸ್ ಒಟಿಟಿಗೆ ಶುಭಾಶಯವನ್ನು ಕೋರುತ್ತೇನೆ ಎಂದು ಆರ್ನಬ್ ಗೋಸ್ವಾಮಿ ಹೇಳಿದ್ದಾರೆ.
ತಮ್ಮ ಬಂಧನ ಹಾಗೂ ಕ್ಲೀನ್ಚಿಟ್ಗೆ ಸಂಬಂಧಿಸಿದಂತೆ ಮಾತನಾಡಿದ ಆರ್ನಬ್ ಗೋಸ್ವಾಮಿ, ಮೊದಲ ಬಾರಿಗೆ ಟಿಆರ್ಪಿ ಹಗರಣದ ಬಗ್ಗೆ ಮಾತನಾಡುತ್ತಿದ್ದೇನೆ, ಈ ಬಗ್ಗೆ ಮಾತನಾಡುವಂತಹ ಸ್ಥಿತಿಗೆ ಬರುಣ್ ತಂದಿದ್ದಾರೆ. ಜನರು ಈ ಬಗ್ಗೆ ಏನಾಯಿತು, ಜನರು ರಿಪಬ್ಲಿಕ್ ಜತೆಗೆ ಹೇಗೆ ನಡೆದುಕೊಂಡರು, ಕದನವನ್ನು ನಾನು ಹೇಗೆ ಗೆದ್ದೆ ಎಂದು ತಿಳಿಸುವಂತಹ ಅವಕಾಶವನ್ನು ಮಾಡಿಕೊಟ್ಟಿದ್ದಕ್ಕೆ, ಬರುನ್ಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ಒಟ್ಟು ನಾಲ್ಕು ಸಂಚಿಕೆಗಳು ಲಭ್ಯವಿದೆ -ದಿ ಡಿಸ್ರಪ್ಟರ್ಸ್ -ಫ್ರೆಂಡ್ಸ್, ಫೋಸ್ ಆಂಡ್ ಫಾರ್ಟಿಟ್ಯೂಡ್ -ಮೀಡಿಯಾ Inc -ಫ್ರ್ಯಾಂಕ್ಲಿ ಸ್ಪೀಕಿಂಗ್, ಫೈನಲಿ ಎನ್ನುವ ನಾಲ್ಕು ಸಂಚಿಕೆಗಳಿವೆ.
ಸಂಚಿಕೆಗಳನ್ನು ವೀಕ್ಷಿಸಲು, News9Plus ಅಪ್ಲಿಕೇಶನ್ ಅನ್ನು ಇಲ್ಲಿ ಡೌನ್‌ಲೋಡ್ ಮಾಡಿ: onelink.to/htmqpz
Published On - 12:12 pm, Thu, 22 September 22