ಸೆಕ್ಯುರಿಟಿಯನ್ನು ಕರೆದು ಅವರನ್ನು ಹೊರಗೆ ಕಳಿಸಿ; ಹಿರಿಯ ವಕೀಲರ ಮೇಲೆ ಗರಂ ಆದ ಸಿಜೆಐ ಡಿವೈ ಚಂದ್ರಚೂಡ್

ವಕೀಲರ ವರ್ತನೆಯಿಂದ ಅಸಮಾಧಾನಗೊಂಡ ಸಿಜೆಐ ಚಂದ್ರಚೂಡ್ ಸುಮ್ಮನೆ ಕಿರಿಕಿರಿ ಮಾಡಬೇಡಿ. ಇದು ಕೋರ್ಟ್, ಇಲ್ಲಿ ಉತ್ತಮ ರೀತಿಯಲ್ಲಿ ನಡೆದುಕೊಳ್ಳಿ ಎಂದು ಹೇಳಿದಾಗಲೂ ವಕೀಲರು ಪಾಲಿಸಿಲ್ಲ.  ಇದರಿಂದ ಸಿಟ್ಟುಗೊಂಡ ಸಿಜೆಐ, ಸೆಕ್ಯುರಿಟಿಯನ್ನು ಕರೆಯಿರಿ, ಅವರನ್ನು ಹೊರ ಕಳುಹಿಸಿ ಎಂದಿದ್ದಾರೆ.  ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ವಕೀಲರು, ಹೊರ ಹೋಗಲು ನನಗೆ ಹೇಳಬೇಕಾಗಿಲ್ಲ ಎಂದಿದ್ದಾರೆ.

ಸೆಕ್ಯುರಿಟಿಯನ್ನು ಕರೆದು ಅವರನ್ನು ಹೊರಗೆ ಕಳಿಸಿ; ಹಿರಿಯ ವಕೀಲರ ಮೇಲೆ ಗರಂ ಆದ ಸಿಜೆಐ ಡಿವೈ ಚಂದ್ರಚೂಡ್
ಡಿವೈ ಚಂದ್ರಚೂಡ್
Follow us
ರಶ್ಮಿ ಕಲ್ಲಕಟ್ಟ
|

Updated on: Jul 23, 2024 | 7:21 PM

ದೆಹಲಿ ಜುಲೈ 23: ಇಂದು (ಮಂಗಳವಾರ) ನಡೆದ ನೀಟ್ ಯುಜಿ (NEET UG)ಪ್ರಶ್ನೆ ಪತ್ರಿಕೆ ಸೋರಿಕೆ  ಪ್ರಕರಣದ  ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI DY Chandrachud) ಅವರು ಸುಪ್ರೀಂಕೋರ್ಟ್‌ನಲ್ಲಿರುವ (Supreme Court) ಭದ್ರತಾ ಸಿಬ್ಬಂದಿಗೆ ಹಿರಿಯ ವಕೀಲರನ್ನು ನ್ಯಾಯಾಲಯದಿಂದ ಹೊರತಳ್ಳುವಂತೆ ಆದೇಶಿಸಿದ್ದಾರೆ. ನ್ಯಾಯಮೂರ್ತಿಗಳು ಈ ರೀತಿ ಕಟುವಾಗಿ ಹೇಳಿದ ನಂತರ ವಕೀಲರು ಕೋರ್ಟ್ ರೂಂನಿಂದ ಹೊರ ನಡೆದಿದ್ದಾರೆ. ನೀಟ್-ಯುಜಿ ವಿಚಾರಣೆ ವೇಳೆ ಮತ್ತೊಬ್ಬ ವಕೀಲರ ವಾದಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಹಿರಿಯ ವಕೀಲ ಮ್ಯಾಥ್ಯೂಸ್ ನೆಡುಂಪಾರ ಅವರನ್ನು ಸಿಜೆಐ ಟೀಕಿಸಿದ್ದಾರೆ.

ಈ ಪ್ರಕರಣದಲ್ಲಿ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ನರೇಂದ್ರ ಹೂಡಾ ಅವರಿಗೆ ಅಡ್ಡಿಪಡಿಸದಂತೆ ನೆಡುಂಪಾರ ಅವರಿಗೆ ನ್ಯಾಯಮೂರ್ತಿ ಚಂದ್ರಚೂಡ್ ಪದೇ ಪದೇ ಕೇಳಿಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಆದರೆ ನೆಡುಂಪಾರ ನ್ಯಾಯಮೂರ್ತಿಯವರ ಮಾತು ಲೆಕ್ಕಿಸದೆ ಹೂಡಾ ವಾದದ ನಡುವೆ ಮಧ್ಯಪ್ರವೇಶಿಸುತ್ತಿದ್ದರು. ಹೂಡಾ ಅವರ ವಾದ ಪೂರ್ಣಗೊಳಿಸಿದ ನಂತರ ನೀವು ಮಾತನಾಡಬಹುದು ಎಂದು ಹಿರಿಯ ವಕೀಲ ನೆಡುಂಪಾರ ಅವರಿಗೆ ಸಿಜೆಐ ಹೇಳಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿದ ನೆಡುಂಪಾರ, ನಾನುನ್ಯಾಯಾಲಯದಲ್ಲಿ ಅತ್ಯಂತ ಹಿರಿಯ ವಕೀಲ ಎಂದಿದ್ದಾರೆ.

ವಕೀಲರ ವರ್ತನೆಯಿಂದ ಅಸಮಾಧಾನಗೊಂಡ ಸಿಜೆಐ ಸುಮ್ಮನೆ ಕಿರಿಕಿರಿ ಮಾಡಬೇಡಿ. ಇದು ಕೋರ್ಟ್, ಇಲ್ಲಿ ಉತ್ತಮ ರೀತಿಯಲ್ಲಿ ನಡೆದುಕೊಳ್ಳಿ ಎಂದು ಹೇಳಿದಾಗಲೂ ವಕೀಲರು ಪಾಲಿಸಿಲ್ಲ. ಇದರಿಂದ ಸಿಟ್ಟುಗೊಂಡ ಸಿಜೆಐ, ಸೆಕ್ಯುರಿಟಿಯನ್ನು ಕರೆಯಿರಿ, ಅವರನ್ನು ಹೊರ ಕಳುಹಿಸಿ ಎಂದಿದ್ದಾರೆ.  ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ವಕೀಲರು, ಹೊರ ಹೋಗಲು ನನಗೆ ಹೇಳಬೇಕಾಗಿಲ್ಲ ಎಂದಿದ್ದಾರೆ.

ಇದಕ್ಕೆ ಸಿಜೆಐ “ನೀವು ಹಾಗೆ ಹೇಳಬೇಕಾಗಿಲ್ಲ. ನೀವು ಹೊರಡಬಹುದು. ನಾನು ಕಳೆದ 24 ವರ್ಷಗಳಿಂದ ನ್ಯಾಯಾಂಗವನ್ನು ನೋಡಿದ್ದೇನೆ. ಈ ನ್ಯಾಯಾಲಯದಲ್ಲಿ ಕಾರ್ಯವಿಧಾನವನ್ನು ನಿರ್ದೇಶಿಸಲು ವಕೀಲರಿಗೆ ನಾನು ಅವಕಾಶ ನೀಡುವುದಿಲ್ಲ,” ಎಂದಿದ್ದಾರೆ.  ನಾನು 1979 ರಿಂದ ನ್ಯಾಯಾಂಗವನ್ನು ನೋಡಿರುವೆ ಎಂದು ಹೇಳಿ ನೆಡುಂಪಾರ ಕೋರ್ಟ್ ರೂಂನಿಂದ ಹೊರ ನಡೆದಿದ್ದಾರೆ.

ಅಂದಹಾಗೆ ಸಿಜೆಐ ಅವರು ವಕೀಲರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದ್ದು ಇದೇ ಮೊದಲಲ್ಲ. ಮಾರ್ಚ್‌ನಲ್ಲಿ ಅವರು ವಕೀಲರಿಗೆ ಕೂಗಬೇಡಿ ಎಂದು ಗದರಿಗದ್ದರು.

ಇದನ್ನೂ ಓದಿ: NEET-UG 2024: ನೀಟ್​ ಮರು ಪರೀಕ್ಷೆ ಇಲ್ಲ; ಸುಪ್ರೀಂ ಕೋರ್ಟ್​ ಮಹತ್ವದ ಆದೇಶ

“ನನ್ನ ಮೇಲೆ ಕೂಗಬೇಡ! ಇದು ಹೈಡ್ ಪಾರ್ಕ್ ಕಾರ್ನರ್ ಸಭೆಯಲ್ಲ, ನೀವು ನ್ಯಾಯಾಲಯದಲ್ಲಿದ್ದೀರಿ. ನೀವು ಅಪ್ಲಿಕೇಶನ್ ಅನ್ನು ಸರಿಸಲು ಬಯಸಿದರೆ, ಅಪ್ಲಿಕೇಶನ್ ಅನ್ನು ಫೈಲ್ ಮಾಡಿ. ಮುಖ್ಯ ನ್ಯಾಯಮೂರ್ತಿಯಾಗಿ ನನ್ನ ನಿರ್ಧಾರವನ್ನು ನೀವು ಪಡೆದುಕೊಂಡಿದ್ದೀರಿ, ನಾವು ನಿಮ್ಮ ಮಾತನ್ನು ಕೇಳುತ್ತಿಲ್ಲ. ನೀವು ಅಪ್ಲಿಕೇಶನ್ ಅನ್ನು ಫೈಲ್ ಮಾಡಲು ಬಯಸಿದರೆ, ಅದನ್ನು ಇಮೇಲ್‌ ಮಾಡಿ. ಇದು ಈ ನ್ಯಾಯಾಲಯದ ನಿಯಮವಾಗಿದೆ ಎಂದು ಸಿಜೆಐ ಹೇಳಿದ್ದರು.

ನೀಟ್ ಮರು ಪರೀಕ್ಷೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ