AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸತ್ಯಮೇವ ಜಯತೇ’, ಸತ್ಯಕ್ಕೆ ಗೆಲುವಾಗಿದೆ: ನೀಟ್ ಕುರಿತ ಸುಪ್ರೀಂ ನಿರ್ಧಾರ ಸ್ವಾಗತಿಸಿದ ಧರ್ಮೇಂದ್ರ ಪ್ರಧಾನ್

ಎನ್‌ಟಿಎಯ ಸಂಪೂರ್ಣ ಪುನಶ್ಚೇತನಕ್ಕಾಗಿ ಆ ಸಮಿತಿಯು ಸಮರ್ಪಿತವಾಗಿ ಕೆಲಸ ಮಾಡುತ್ತಿದೆ. ಸಮಿತಿಯು ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ ವಿವಿಧ ಮಾದರಿಗಳನ್ನು ಅಧ್ಯಯನ ಮಾಡಿದೆ.ಅವರು ಶೀಘ್ರದಲ್ಲೇ ವರದಿಯನ್ನು ಸಲ್ಲಿಸಲಿದ್ದಾರೆ. ಎನ್‌ಟಿಎಯನ್ನು ದೋಷಮುಕ್ತಗೊಳಿಸಲು ನಾವು ಬದ್ಧರಾಗಿದ್ದೇವೆ, ಈ ಅಕ್ರಮಗಳಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

'ಸತ್ಯಮೇವ ಜಯತೇ', ಸತ್ಯಕ್ಕೆ ಗೆಲುವಾಗಿದೆ: ನೀಟ್ ಕುರಿತ ಸುಪ್ರೀಂ ನಿರ್ಧಾರ ಸ್ವಾಗತಿಸಿದ ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
ರಶ್ಮಿ ಕಲ್ಲಕಟ್ಟ
|

Updated on:Jul 23, 2024 | 8:42 PM

Share

ದೆಹಲಿ ಜುಲೈ 23: “ವಿದ್ಯಾರ್ಥಿಗಳ  ಪರೀಕ್ಷೆಯ ವಿಷಯಕ್ಕೆ ಬಂದಾಗ ಅದು ಉನ್ನತ ಶಿಕ್ಷಣ ಅಥವಾ ಉದ್ಯೋಗವೇ ಆಗಿರಲಿ ನಾವು ಯಾವುದೇ ರೀತಿಯ ಉಲ್ಲಂಘನೆಯನ್ನು ನಾವು ಸಹಿಸುವುದಿಲ್ಲ ಎಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ನೀಟ್ ಯುಜಿ (NEET UG) ಮರು ಪರೀಕ್ಷೆ ಇಲ್ಲ ಎಂಬ ಸುಪ್ರೀಂಕೋರ್ಟ್ (Supreme Court) ಆದೇಶವನ್ನು ಸ್ವಾಗತಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಇದನ್ನು ತಡೆಯುವುದಕ್ಕಾಗಿಯೇ ಮೋದಿ ಸರ್ಕಾರವು ಕಟ್ಟುನಿಟ್ಟಾದ ಕಾನೂನನ್ನು ಜಾರಿಗೆ ತಂದಿದೆ. ಪಬ್ಲಿಕ್ ಎಕ್ಸಾಮಿನೇಷನ್ಸ್ (ಅನ್ಯಾಯ ಮಾರ್ಗಗಳ ತಡೆ) ಕಾಯಿದೆಯನ್ನು ಸುಪ್ರೀಂಕೋರ್ಟ್ ಮುಂದೆ ಪ್ರಸ್ತುತಪಡಿಸುತ್ತಾ, ನಮ್ಮ ಸರ್ಕಾರವು ಪಾರದರ್ಶಕ, ವಂಚನೆ-ಮುಕ್ತ ಮತ್ತು ಶೂನ್ಯ-ದೋಷಗಳ ಪರೀಕ್ಷಾ ವ್ಯವಸ್ಥೆಯನ್ನು ಹೊಂದಲು ಬದ್ಧವಾಗಿದೆ ಎಂದು ನಾವು ಭರವಸೆ ನೀಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

ಎನ್‌ಟಿಎಯ ಸಂಪೂರ್ಣ ಪುನಶ್ಚೇತನಕ್ಕಾಗಿ ಆ ಸಮಿತಿಯು ಸಮರ್ಪಿತವಾಗಿ ಕೆಲಸ ಮಾಡುತ್ತಿದೆ. ಸಮಿತಿಯು ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ ವಿವಿಧ ಮಾದರಿಗಳನ್ನು ಅಧ್ಯಯನ ಮಾಡಿದೆ.ಅವರು ಶೀಘ್ರದಲ್ಲೇ ವರದಿಯನ್ನು ಸಲ್ಲಿಸಲಿದ್ದಾರೆ. ಎನ್‌ಟಿಎಯನ್ನು ದೋಷಮುಕ್ತಗೊಳಿಸಲು ನಾವು ಬದ್ಧರಾಗಿದ್ದೇವೆ, ಈ ಅಕ್ರಮಗಳಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ. ಸಿಬಿಐ ತನ್ನ ಕೆಲಸವನ್ನು ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಹೇಳಿದ್ದಾರೆ.

ಸಿಬಿಐ ಒಂದು ಸಮರ್ಥ ಸಂಸ್ಥೆ. ಅದು ತನ್ನ ಕೆಲಸವನ್ನು ಮಾಡಲಿ. ಕೋರ್ಟ್ ಕೂಡ ಸಿಬಿಐ ಬಗ್ಗೆ ಮಾತನಾಡಿದೆ. ನಮಗೆ ಸಿಬಿಐ ಮೇಲೆ ನಂಬಿಕೆ ಇದೆ ಎಂದ ಸಚಿವರು  NTA ಎರಡು ದಿನಗಳಲ್ಲಿ NEET-UG ಅಂತಿಮ ಫಲಿತಾಂಶಗಳನ್ನು ಪ್ರಕಟಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಸೆಕ್ಯುರಿಟಿಯನ್ನು ಕರೆದು ಅವರನ್ನು ಹೊರಗೆ ಕಳಿಸಿ; ಹಿರಿಯ ವಕೀಲರ ಮೇಲೆ ಗರಂ ಆದ ಸಿಜೆಐ ಡಿವೈ ಚಂದ್ರಚೂಡ್

ಸತ್ಯಮೇವ ಜಯತೇ,  ಸುಪ್ರೀಂಕೋರ್ಟ್‌ನ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ವಿದ್ಯಾರ್ಥಿಗಳು ಮತ್ತು ಅವರ ಭವಿಷ್ಯದ ಬಗ್ಗೆ ಸರ್ಕಾರ ಯೋಚಿಸುತ್ತದೆ. ನಾವು ಸುಪ್ರೀಂ ಕೋರ್ಟ್‌ಗೆ ಕೃತಜ್ಞರಾಗಿದ್ದೇವೆ. ಸಮಾಜದ ದುರ್ಬಲ ವರ್ಗಗಳು, ಎಸ್‌ಸಿ, ಎಸ್‌ಟಿ, ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಮತ್ತೆ ನೀಟ್ ನಡೆಸದಿರಲು ನಿರ್ಧರಿಸಿದೆ ಎಂದಿದ್ದಾರೆ ಸಚಿವರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:26 pm, Tue, 23 July 24