Swaroopanand Saraswati: ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ನಿಧನ

| Updated By: ಆಯೇಷಾ ಬಾನು

Updated on: Sep 11, 2022 | 6:26 PM

ದ್ವಾರಕಾ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ(99) ಭಾನುವಾರ ನಿಧನರಾಗಿದ್ದಾರೆ.

Swaroopanand Saraswati: ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ನಿಧನ
ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ
Follow us on

ಭೋಪಾಲ್: ಮಧ್ಯಪ್ರದೇಶದ ನರಸಿಂಗ್ಪುರದಲ್ಲಿ ದ್ವಾರಕಾ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ(99) ಭಾನುವಾರ ನಿಧನರಾಗಿದ್ದಾರೆ. ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.

ಅಯೋಧ್ಯೆ ಭೂ ವಿವಾದ ಮತ್ತು ರಾಮ ಮಂದಿರಕ್ಕೆ ಸಂಬಂಧಿಸಿದಂತೆ 2 ದಿನದಲ್ಲಿ 2 ಹಿರಿಯ ಜೀವಿಗಳು ಮೃತಪಟ್ಟಿದ್ದಾರೆ. ಶತಾಯುಷಿ ಬಿಬಿ ಲಾಲ್ ಬಳಿಕ, 99 ವರ್ಷದ ಶಂಕರಾಚಾರ್ಯ ಸ್ವರೂಪಾನಂದ ಶ್ರೀ ಇಂದು ವಿಧಿವಶರಾಗಿದ್ದಾರೆ. ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಪರಮಹಂಸಿ ಗಂಗಾ ಆಶ್ರಮದಲ್ಲಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ.

ಶಂಕರಾಚಾರ್ಯ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ. 1300 ವರ್ಷಗಳ ಹಿಂದೆ, ಆದಿ ಗುರು ಭಗವಾನ್ ಶಂಕರಾಚಾರ್ಯರು ಹಿಂದೂಗಳನ್ನು ಮತ್ತು ಧರ್ಮದ ಅನುಯಾಯಿಗಳನ್ನು ಸಂಘಟಿಸಲು ಮತ್ತು ಧರ್ಮದ ಉನ್ನತಿಗಾಗಿ ಇಡೀ ದೇಶದಲ್ಲಿ 4 ಧಾರ್ಮಿಕ ಮಠಗಳನ್ನು ಮಾಡಿದರು. ಈ ನಾಲ್ಕು ಮಠಗಳಲ್ಲಿ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ದ್ವಾರಕಾ ಮಠ ಮತ್ತು ಜ್ಯೋತಿರ್ ಮಠ ಎರಡನ್ನೂ ನೋಡಿಕೊಳ್ಳುತ್ತಿದ್ದರು. 2018 ರಲ್ಲಿ, ಜಗತ್ಗುರು ಶಂಕರಾಚಾರ್ಯರ 95 ನೇ ಜನ್ಮದಿನವನ್ನು ವೃಂದಾವನದಲ್ಲಿ ಆಚರಿಸಿದ್ದರು.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಹೋರಾಡಿದ್ದ ಸ್ವಾಮಿ ಸ್ವರೂಪಾನಂದ ಸರಸ್ವತಿ

ಸ್ವಾಮಿ ಸ್ವರೂಪಾನಂದ ಸರಸ್ವತಿಯವರು 1924ರ ಸೆಪ್ಟೆಂಬರ್ 2ರಂದು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಜಬಲ್‌ಪುರ ಸಮೀಪದ ದಿಘೋರಿ ಗ್ರಾಮದಲ್ಲಿ ಜನಿಸಿದ್ದರು. ತಂದೆ ಧನಪತಿ ಉಪಾಧ್ಯಾಯ ಮತ್ತು ತಾಯಿ ಗಿರಿಜಾ ದೇವಿ ಅವರ ಪುತ್ರರಾಗಿದ್ದು, ಪೋತಿರಾಮ್ ಉಪಾಧ್ಯಾಯ ಎಂದು ನಾಮಕರಣ ಮಾಡಿದ್ದರು. ನಂತರ ತಮ್ಮ ಒಂಬತ್ತನೆಯ ವಯಸ್ಸಿನಲ್ಲಿ ಅವರು ಮನೆ ತೊರೆದು ಧಾರ್ಮಿಕ ತೀರ್ಥಯಾತ್ರೆಗಳನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಕಾಶಿಯನ್ನು ತಲುಪಿ ವೇದ, ಧರ್ಮ ಗ್ರಂಥಗಳನ್ನು ಕಲಿತರು. ಅಲ್ಲದೇ, ಆಗ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿ ನಡೆಯುತ್ತಿತ್ತು. ಇದರಿಂದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ 19ನೇ ವಯಸ್ಸಿನಲ್ಲಿ ಕ್ರಾಂತಿಕಾರಿ ಸಾಧು ಎಂದೇ ಖ್ಯಾತಿ ಗಳಿಸಿದ್ದರು. ಈ ಸಮಯದಲ್ಲಿ ಅವರು ವಾರಣಾಸಿ ಜೈಲಿನಲ್ಲಿ ಒಂಬತ್ತು ತಿಂಗಳು ಮತ್ತು ಮಧ್ಯಪ್ರದೇಶ ಜೈಲಿನಲ್ಲಿ ಆರು ತಿಂಗಳು ಶಿಕ್ಷೆಗೆ ಒಳಗಾಗಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:11 pm, Sun, 11 September 22