ಹೈದರಾಬಾದ್‌ನಲ್ಲಿ ತೆಲಂಗಾಣ ಸಿಎಂ ಕೆಸಿಆರ್ ಭೇಟಿ ಮಾಡಿದ ಎಚ್‌ಡಿ ಕುಮಾರಸ್ವಾಮಿ; ರಾಷ್ಟ್ರ ರಾಜಕಾರಣ ಬಗ್ಗೆ ಚರ್ಚೆ
ಇಬ್ಬರು ನಾಯಕರು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೆಸಿಆರ್ ವಹಿಸಬೇಕಾದ ಪ್ರಮುಖ ಪಾತ್ರದ ಕುರಿತು ಚರ್ಚಿಸಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ ಒಂದು ವಾರದ ನಂತರ, ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ (K Chandrashekhar Rao ) ಭಾನುವಾರ ಹೈದರಾಬಾದ್‌ನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy )ಅವರನ್ನು ಭೇಟಿ ಮಾಡಿದ್ದಾರೆ. ಇಬ್ಬರು ನಾಯಕರು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೆಸಿಆರ್ ವಹಿಸಬೇಕಾದ ಪ್ರಮುಖ ಪಾತ್ರದ ಕುರಿತು ಚರ್ಚಿಸಿದರು. ಕೆಸಿಆರ್ ಅವರ ತೆಲಂಗಾಣ ರಾಷ್ಟ್ರ ಸಮಿತಿ (TRS) ರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಪಾತ್ರದ ಮೇಲೆ ಕಣ್ಣಿಟ್ಟಿರುವ ಹೊತ್ತಲ್ಲೇ ಈ ಭೇಟಿ ನಡೆದಿದೆ. ಮೇ 26 ರಂದು ಕೆಸಿಆರ್ ಅವರು ಎಚ್‌ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ್ದರು. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ರೈತರಿಗೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಸೆಪ್ಟೆಂಬರ್ 5 ರಂದು ಕೆಸಿಆರ್ ಘೋಷಿಸಿದ್ದಾರೆ.
Former CM of Karnataka Sri @hd_kumaraswamy met with CM Sri K. Chandrasekhar Rao at Pragati Bhavan today.
ಇದನ್ನೂ ಓದಿThey discussed various important issues including the role of regional parties in the current situation and the key role that CM KCR should play in national politics. pic.twitter.com/ehZbyCl0Gw
— TRS Party (@trspartyonline) September 11, 2022
ಕಳೆದೆರಡು ತಿಂಗಳುಗಳಲ್ಲಿ, ಕೆಸಿಆರ್ ಇತರ ಪ್ರಾದೇಶಿಕ ರಾಜಕೀಯ ಶಕ್ತಿಗಳನ್ನು ಒಗ್ಗೂಡಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದು ಬಿಜೆಪಿ ಮತ್ತು ಪಿಎಂ ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಎಚ್‌ಡಿ ಕುಮಾರಸ್ವಾಮಿ ಅವರು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಮತ್ತು ಕೆ ಚಂದ್ರಶೇಖರ ರಾವ್ (ಕೆಸಿಆರ್) ಸರ್ಕಾರದಲ್ಲಿ ಸಚಿವ ಕೆಟಿ ರಾಮರಾವ್ ಅವರನ್ನು ಭೇಟಿ ಮಾಡಿ ರಾಷ್ಟ್ರೀಯ ರಾಜಕೀಯದ ಬಗ್ಗೆಯೂ ಚರ್ಚಿಸಿದ್ದಾರೆ.
ತೆಲಂಗಾಣ ರಾಜ್ಯದ ಮಾನ್ಯ ಪೌರಾಡಳಿತ, ನಗರಾಭಿವೃದ್ಧಿ, ಕೈಗಾರಿಕೆ, ವಾಣಿಜ್ಯ, ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆ ಸಚಿವರಾದ ಶ್ರೀ @KTRTRS ಅವರನ್ನು ಹೈದರಾಬಾದ್ʼನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಲಾಯಿತು. ಪ್ರಖರ ದೂರದೃಷ್ಟಿಯುಳ್ಳ, ನವೀನ ವಿಚಾರಗಳ, ಸದೃಢ ನಾಯಕತ್ವ-ವ್ಯಕ್ತಿತ್ವದ ಅವರೊಂದಿನ ಚರ್ಚೆ ಬಹಳ ಅರ್ಥಪೂರ್ಣವಾಗಿತ್ತು. 1/2 pic.twitter.com/cD3EladYgQ
— H D Kumaraswamy (@hd_kumaraswamy) September 11, 2022
ಈ ಸಂದರ್ಭದಲ್ಲಿ ಕರ್ನಾಟಕ-ತೆಲಂಗಾಣ ರಾಜ್ಯಗಳ ವಿಷಯಗಳು ಹಾಗೂ ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಶ್ರೀ ಕೆಟಿಆರ್ ಅವರ ಆದರಾಭಿಮಾನ, ವಿಶ್ವಾಸ, ಗೌರವಕ್ಕೆ ನನ್ನ ಮನಸ್ಸು ತುಂಬಿಬಂದಿದೆ.2/2 pic.twitter.com/EGfv6OQwOd
— H D Kumaraswamy (@hd_kumaraswamy) September 11, 2022
ರಾಷ್ಟ್ರ ರಾಜಕಾರಣ ಮೇಲೆ ಕೆಸಿಆರ್ ಕಣ್ಣು
ಆಗಸ್ಟ್ 31 ರಂದು ಕೆಸಿಆರ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಪಟನಾದಲ್ಲಿ ಭೇಟಿಯಾಗಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಮೈತ್ರಿಯಿಂದ ಹೊರಬಂದ ನಿತೀಶ್ ಕುಮಾರ್ ‘ಮಹಾಘಟಬಂಧನ್ ಮೈತ್ರಿ’ಯ ಅಡಿಯಲ್ಲಿ ಮತ್ತೆ ಬಿಹಾರದಲ್ಲಿ ಸರ್ಕಾರವನ್ನು ರಚಿಸಿದ ಬೆನ್ನಲ್ಲೇ ಈ ಭೇಟಿ ನಡೆದಿತ್ತು. 2014 ರಲ್ಲಿ ತೆಲಂಗಾಣ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಕೆಸಿಆರ್ ಬಿಹಾರಕ್ಕೆ ಇದು ಮೊದಲ ಭೇಟಿಯಾಗಿದೆ.
ಪಟನಾದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ಪ್ರತಿಪಕ್ಷಗಳ ಏಕೀಕರಣಕ್ಕೆ ಮತ್ತೊಮ್ಮೆ ಕರೆ ನೀಡಿದರು. ನಿತೀಶ್ ಕುಮಾರ್ ಅವರು ದೇಶದ ಹಿರಿಯ ನಾಯಕರಾಗಿದ್ದು, ನಾವು ಒಟ್ಟಾಗಿ ದೇಶದ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತೇವೆ ಎಂದಿದ್ದರು.
Published On - 4:57 pm, Sun, 11 September 22