AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ರಾಹುಲ್ ಗಾಂಧಿ, ಹೆಚ್​ಡಿ ಕುಮಾರಸ್ವಾಮಿಯನ್ನು ಭೇಟಿ ಮಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಪ್ರತಿಪಕ್ಷಗಳ ಏಕತೆಯನ್ನು ಖಚಿತಪಡಿಸಿಕೊಳ್ಳುವ ಮಾರ್ಗಗಳ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ.

ದೆಹಲಿಯಲ್ಲಿ ರಾಹುಲ್ ಗಾಂಧಿ, ಹೆಚ್​ಡಿ ಕುಮಾರಸ್ವಾಮಿಯನ್ನು ಭೇಟಿ ಮಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಜೆಡಿಯು ನಾಯಕ ನಿತೀಶ್ ಕುಮಾರ್Image Credit source: PTI
TV9 Web
| Edited By: |

Updated on:Sep 05, 2022 | 9:18 PM

Share

ದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿಪಕ್ಷಗಳ ಬಳಿ ಒಗ್ಗಟ್ಟಿನ ಮಂತ್ರ ಜಮಿಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish kumar) ಸೋಮವಾರ ದಿಲ್ಲಿ ತಲುಪಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರನ್ನು ಭೇಟಿ ಮಾಡಿ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಪ್ರತಿಪಕ್ಷಗಳ ಏಕತೆಯನ್ನು ಖಚಿತಪಡಿಸಿಕೊಳ್ಳುವ ಮಾರ್ಗಗಳ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ.

ಬಿಹಾರ ಸಿಎಂ ನಿತೀಶ್, ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ

ನಿತೀಶ್ ಕುಮಾರ್ ಅವರ ದೆಹಲಿ ಪ್ರವಾಸದಲ್ಲಿ ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಮತ್ತು ರಾಜ್ಯ ಸಚಿವರಾದ ಸಂಜಯ್ ಝಾ ಮತ್ತು ಅಶೋಕ್ ಚೌಧರಿ ಸಾಥ್ ನೀಡಿದ್ದಾರೆ. ಇದರ ನಡುವೆ ದೆಹಲಿಯಲ್ಲಿರುವ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬಿಹಾರ ಸಿಎಂ ನಿತೀಶ್ ಅವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ. ಭೇಟಿ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಉಪಸ್ಥಿತರಿದ್ದರು.

ಇನ್ನು ನಿತೀಶ್ ಕುಮಾರ್ ಭೇಟಿ ಬಳಿಕ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ಜನತಾ ಪರಿವಾರ ಮತ್ತೆ ಒಗ್ಗೂಡಬೇಕೆಂದು ಎಲ್ಲರ ಆಶಯವಾಗಿದೆ. ದೇಶ, ರಾಜ್ಯಗಳಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಜಯಪ್ರಕಾಶ ನಾರಾಯಣರವರ ಆಂದೋಲದಿಂದ ಅಂದು ಆರಂಭವಾಗಿದ್ದ ಜನತಾ ಪಾರ್ಟಿ ಒಡೆದು ಹೋಗಿದೆ. ಜನತಾ ಪರಿವಾರ ಒಂದಾಗುವ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ನಡೆದಿದೆ. ಪ್ರಾರಂಭಿಕ ಹಂತವಾಗಿ ನಿತೀಶ್​ ಕುಮಾರ್ ಭೇಟಿಯಾಗಿ ಚರ್ಚಿಸಿದ್ದೇನೆ. ದೇಶವನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಒಗ್ಗೂಡುವುದು ಒಳ್ಳೆಯದು ಎಂದರು.

ನಿತೀಶ್ ಕುಮಾರ್ ಅವರು ಮಂಗಳವಾರ ದೆಹಲಿಯಲ್ಲಿ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಎಡಪಕ್ಷಗಳ ನಾಯಕರಾದ ಡಿ ರಾಜಾ ಮತ್ತು ಸೀತಾರಾಮ್ ಯೆಚೂರಿ ಮತ್ತು ಇತರರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರ ರಾಷ್ಟ್ರಪತಿ ಹಾಗೂ ಉಪಾಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ. ಜೊತೆಗೆ ಶೀಘ್ರದಲ್ಲೇ ಮಹಾರಾಷ್ಟ್ರ, ಹರಿಯಾಣ ಮತ್ತು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿತೀಶ್ ಕುಮಾರ್ ಬಿಹಾರದಲ್ಲಿ ಎನ್‌ಡಿಎಯಿಂದ ಹೊರನಡೆದ ನಂತರ ಮತ್ತು ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಮಹಾಘಟಬಂಧನ್ ಸರ್ಕಾರವನ್ನು ರಚಿಸಿದ ನಂತರ ಇದು ಉಭಯ ನಾಯಕರ ನಡುವಿನ ಮೊದಲ ಭೇಟಿಯಾಗಿದೆ.

ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:59 pm, Mon, 5 September 22

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ