ರೈಲ್ವೆ ನಿಲ್ದಾಣಗಳಲ್ಲಿ ನಾಮಫಲಕ ಹಳದಿ ಬಣ್ಣದಲ್ಲಿ ಮತ್ತು ಅದರ ಮೇಲಿನ ಅಕ್ಷರಗಳು ಕಪ್ಪು ಬಣ್ಣದಲ್ಲಿ ಇರುತ್ತವೆ, ಯಾಕೆ? ಅಸಲಿ ಕಾರಣ ಇಲ್ಲಿದೆ!
Indian Railway: ಭಾರತೀಯ ರೈಲ್ವೆಯಲ್ಲಿ ಅಸಂಖ್ಯಾತ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ನಿಲ್ದಾಣಗಳಲ್ಲಿ ಕೆಲವು ಮಹತ್ವದ ವಿಷಯಗಳ ಬಗ್ಗೆ ತಿಳಿದುಕೊಳ್ಳದೆ ನಿರ್ಲಕ್ಷ್ಯ ತೋರುತ್ತಾರೆ. ಸಾಮಾನ್ಯವಾಗಿ ರೈಲು ನಿಲ್ದಾಣಗಳಲ್ಲಿ ಕಾಣಬರುವ ನಿಲ್ದಾಣದ ಹೆಸರಿನ ಫಲಕಗಳು..

Indian Railway: ಭಾರತೀಯ ರೈಲ್ವೆಯಲ್ಲಿ ಅಸಂಖ್ಯಾತ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ನಿಲ್ದಾಣಗಳಲ್ಲಿ ಕೆಲವು ಮಹತ್ವದ ವಿಷಯಗಳ ಬಗ್ಗೆ ತಿಳಿದುಕೊಳ್ಳದೆ ನಿರ್ಲಕ್ಷ್ಯ ತೋರುತ್ತಾರೆ. ಸಾಮಾನ್ಯವಾಗಿ ರೈಲು ನಿಲ್ದಾಣಗಳಲ್ಲಿ ಕಾಣಬರುವ ನಿಲ್ದಾಣದ ಹೆಸರಿನ ಫಲಕಗಳು..
ಭಾರತೀಯ ರೈಲ್ವೆಯಲ್ಲಿ ಅಸಂಖ್ಯಾತ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ನಿಲ್ದಾಣಗಳಲ್ಲಿ ಕೆಲವು ಮಹತ್ವದ ವಿಷಯಗಳ ಬಗ್ಗೆ ತಿಳಿದುಕೊಳ್ಳದೆ ನಿರ್ಲಕ್ಷ್ಯ ತೋರುತ್ತಾರೆ. ಸಾಮಾನ್ಯವಾಗಿ ರೈಲು ನಿಲ್ದಾಣಗಳಲ್ಲಿ ಕಾಣಬರುವ ನಿಲ್ದಾಣದ ಹೆಸರಿನ ಫಲಕಗಳು.. ಪ್ರತಿ ನಿಲ್ದಾಣದಲ್ಲಿಯೂ ಆ ನಿಲ್ದಾಣದ ಹೆಸರಿನ ಬೋರ್ಡ್ ಇರುತ್ತದೆ. ಬೋರ್ಡ್ ಹಳದಿ ಬಣ್ಣದ್ದಾಗಿರುತ್ತದೆ. ಢಾಳಾಗಿ ಕಾಣುವ ಆ ಹಳದಿ ನಾಮಫಲಕದತ್ತ ನಮ್ಮ ಚಿತ್ತ ಅನೇಕ ಬಾರಿ ಹರಿದಿರುತ್ತದೆ. ಆದರೆ ಬೋರ್ಡ್ ಹಳದಿ ಬಣ್ಣದಲ್ಲಿಯೇ ಯಾಕೆ ಇದೆ ಎಂಬ ಅಂಶದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಹಾಗೆಯೇ, ಅದೇ ಹಳದಿ ಬಣ್ಣದ ನಿಲ್ದಾಣದ ನೇಮ್ ಬೋರ್ಡ್‌ನಲ್ಲಿ ಅಕ್ಷರಗಳು ಕಪ್ಪು ಬಣ್ಣದಲ್ಲಿರುತ್ತವೆ. ಅದರ ಬಗ್ಗೆಯೂ ನಾವು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ.
ನಿಜ ಕಾರಣ ಇಲ್ಲಿದೆ:
VIBGYOR ಸಾಲಿನಲ್ಲಿ ಕಂಡುಬರುವ ಇತರ ಬಣ್ಣಗಳಿಗೆ ಹೋಲಿಸಿದರೆ ಹಳದಿ ಬಣ್ಣವು ಕಣ್ಣಿಗೆ ಹೆಚ್ಚು ಆಹ್ಲಾದತೆ ತರುತ್ತದೆ. ಹೆಚ್ಚು ಪ್ರತಿಫಲಿಸುವ ಹಳದಿ ಬಣ್ಣವು ಇತರರ ಗಮನವನ್ನು ಸುಲಭವಾಗಿ ಸೆಳೆಯುತ್ತದೆ. ಅದಕ್ಕಾಗಿಯೇ ರೈಲು ನಿಲ್ದಾಣದ ಬೋರ್ಡ್‌ಗಳಲ್ಲಿ ಹಳದಿ ಬಣ್ಣವನ್ನು ಬಳಸಲಾಗಿದೆ. ಹಳದಿ ನೇಮ್ ಬೋರ್ಡ್ ಅನ್ನು ಪ್ರಯಾಣಿಕರು ಅನತಿ ದೂರದಿಂದಲೇ ಗುರುತಿಸಲು ಸುಲಭವಾಗಿರುತ್ತದೆ. ಕೆಲ ಬಣ್ಣಗಳು ಹಳದಿ ಬಣ್ಣದಲ್ಲಿ ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಆದರೆ ಕಪ್ಪು ಬಣ್ಣವು ಕಾಣಿಸುತ್ತದೆ. ಅದಕ್ಕಾಗಿಯೇ ಹಳದಿ ಬಣ್ಣದಲ್ಲಿ ಕಪ್ಪು ಅಕ್ಷರಗಳಿವೆ. ರಸ್ತೆಯಲ್ಲಿ ಪ್ರಯಾಣಿಸುವಾಗ, ಹಳದಿ ಬಣ್ಣವು ಇತರ ವಸ್ತುಗಳು ಮತ್ತು ಬೋರ್ಡ್ಗಳ ಬಣ್ಣಗಳಿಗಿಂತ ಹೆಚ್ಚು ವೇಗವಾಗಿ ಕಣ್ಣನ್ನು ಸೆಳೆಯುತ್ತದೆ. ಅದಕ್ಕಾಗಿಯೇ ರೈಲ್ವೆ ಇಲಾಖೆಯು ತನ್ನ ಬೋರ್ಡ್‌ಗೆ ಹಳದಿ ಮತ್ತು ಅಕ್ಷರಗಳಿಗೆ ಕಪ್ಪು ಬಣ್ಣವನ್ನು ಬಳಸುತ್ತದೆ.
ಇನ್ನೊಂದು ವಿಷಯವೆಂದರೆ ಹಳದಿ ಬೋರ್ಡ್‌ಗಳ ಮೇಲಿನ ಹೆಸರುಗಳನ್ನು ಕಪ್ಪು ಬಣ್ಣದಲ್ಲಿ ಮಾತ್ರ ಬರೆಯಲಾಗಿದೆ. ಹಾಗೆ ಬರೆಯಲು ಕಾರಣವಿದೆ. ಬೇರೆ ಬಣ್ಣಗಳಲ್ಲಿ ಹೆಸರುಗಳನ್ನು ಬರೆಯುವುದರಿಂದ ಬೆಳಕು ಅವುಗಳ ಮೇಲೆ ಬಿದ್ದಾಗ ಪ್ರತಿಫಲಿಸುವುದಿಲ್ಲ. ಹಾಗೆ ಪ್ರತಿಬಿಂಬಿಸುವ ಸಾಮರ್ಥ್ಯ ಇರುವುದು ಕಪ್ಪು ಬಣ್ಣಕ್ಕೆ ಮಾತ್ರ. ಅದಕ್ಕಾಗಿಯೇ ರೈಲು ನಿಲ್ದಾಣಗಳ ಬೋರ್ಡ್‌ಗಳಲ್ಲಿ ಕಪ್ಪು ಅಕ್ಷರಗಳಿವೆ. ಶಾಲಾ ಕಾಲೇಜುಗಳ ಬಸ್‌ಗಳಿಗೂ ಹಳದಿ ಬಣ್ಣವನ್ನು ಬಳಸಲಾಗಿದೆ. ಗಮನವನ್ನು ಸೆಳೆಯುವುದು, ಅಪಘಾತಗಳನ್ನು ತಡೆಯುವುದು ಇದರ ಉದ್ದೇಶವಾಗಿದೆ. ಅದಕ್ಕಾಗಿಯೇ ಈ ಬಣ್ಣಗಳನ್ನು ಬಳಸಲಾಗುತ್ತದೆ.