ಸಾಯುವ ಹೊತ್ತಲ್ಲಿ ಹೇಳಿದ ಹೇಳಿಕೆ ಅಪರಾಧ ನಿರ್ಣಯಕ್ಕೆ ಆಧಾರವಾಗಿರುವುದಿಲ್ಲ: ಸುಪ್ರೀಂಕೋರ್ಟ್

ಸಾಯುತ್ತಿರುವ ಹೊತ್ತಲ್ಲಿ ಹೇಳಿದ್ದೇ ನಿಜ ಎಂಬ ಊಹೆ, ಸಂಪೂರ್ಣವಾಗಿ ವಿಶ್ವಾಸಾರ್ಹವಾಗಿರಬೇಕು. ಅದರ ಸತ್ಯಾಸತ್ಯತೆಯ ಮೇಲೆ ಯಾವುದೇ ಅನುಮಾನವಿದ್ದರೆ.ಅಥವಾ ದಾಖಲೆಯಲ್ಲಿರುವ ಸಾಕ್ಷ್ಯವು ಸಾಯುತ್ತಿರುವಾಗ ಹೇಳಿದ್ದು ನಿಜವಲ್ಲ ಎಂದು ತೋರಿದರೆ ಅದನ್ನು ಕೇವಲ ಸಾಕ್ಷ್ಯವಾಗಿ ಪರಿಗಣಿಸಲ್ಪಡುತ್ತದೆ. ಆದರೆ ಕೇವಲ ಅಪರಾಧಕ್ಕೆ ಆಧಾರವಾಗಿರಲು ಸಾಧ್ಯವಿಲ್ಲ  ಎಂದು ನ್ಯಾಯಾಲಯ ಹೇಳಿದೆ.

ಸಾಯುವ ಹೊತ್ತಲ್ಲಿ ಹೇಳಿದ ಹೇಳಿಕೆ ಅಪರಾಧ ನಿರ್ಣಯಕ್ಕೆ ಆಧಾರವಾಗಿರುವುದಿಲ್ಲ: ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on:Aug 25, 2023 | 8:40 PM

ದೆಹಲಿ ಆಗಸ್ಟ್ 25: ಹೇಳಿಕೆಯ ನಿಖರತೆಗೆ ಸಂಬಂಧಿಸಿದಂತೆ ಸಂಶಯವಿದ್ದು ಕೊಲೆ ಪ್ರಕರಣದಲ್ಲಿ ಸಾವಿಗೀಡಾಗುವ ಮುನ್ನ ಸಂತ್ರಸ್ತ ಹೇಳಿರುವ ಹೇಳಿಕೆಗಳು ಆರೋಪಿಯ ಶಿಕ್ಷೆಗೆ ಏಕೈಕ ಆಧಾರವಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ (Supreme Court)  ಹೇಳಿದೆ. 2014ರಲ್ಲಿ ನಡೆದಿದ್ದ ಮೂವರನ್ನು ಹತ್ಯೆಗೈದ ಪ್ರಕರಣದಲ್ಲಿ ಉತ್ತರ ಪ್ರದೇಶದ (Uttar Pradesh) ವ್ಯಕ್ತಿಯೊಬ್ಬರು ತಪ್ಪಿತಸ್ಥರೆಂದು ಪರಿಗಣಿಸಿ ಮರಣದಂಡನೆ ವಿಧಿಸಲಾಗಿದ್ದು, ಈ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಈ ರೀತಿ ಹೇಳಿದೆ. ಸಾಯುತ್ತಿರುವ ಹೊತ್ತಲ್ಲಿ ನೀಡುವ ಹೇಳಿಕೆ  ಮೇಲೆ ಅವಲಂಬಿತವಾದಾಗ ಎಚ್ಚರ ವಹಿಸಬೇಕು. ನ್ಯಾಯಾಲಯವು ಈ ಹೇಳಿಕೆಗಳನ್ನು ಕಾನೂನು ತತ್ವದೊಂದಿಗೆ ವ್ಯವಹರಿಸುತ್ತದೆ ಮತ್ತು ಸಾಯುವ ಹೊತ್ತಲ್ಲಿ ಒಬ್ಬ ವ್ಯಕ್ತಿಯು ಸುಳ್ಳು ಹೇಳುವುದಿಲ್ಲ ಎಂಬ ನಂಬಿಕೆ ಬಗ್ಗೆ ಮಾತನಾಡಿದೆ.

ಸಾಯುತ್ತಿರುವ ಹೊತ್ತಲ್ಲಿ ಹೇಳಿದ್ದೇ ನಿಜ ಎಂಬ ಊಹೆ, ಸಂಪೂರ್ಣವಾಗಿ ವಿಶ್ವಾಸಾರ್ಹವಾಗಿರಬೇಕು. ಅದರ ಸತ್ಯಾಸತ್ಯತೆಯ ಮೇಲೆ ಯಾವುದೇ ಅನುಮಾನವಿದ್ದರೆ.ಅಥವಾ ದಾಖಲೆಯಲ್ಲಿರುವ ಸಾಕ್ಷ್ಯವು ಸಾಯುತ್ತಿರುವಾಗ ಹೇಳಿದ್ದು ನಿಜವಲ್ಲ ಎಂದು ತೋರಿದರೆ ಅದನ್ನು ಕೇವಲ ಸಾಕ್ಷ್ಯವಾಗಿ ಪರಿಗಣಿಸಲ್ಪಡುತ್ತದೆ. ಆದರೆ ಕೇವಲ ಅಪರಾಧಕ್ಕೆ ಆಧಾರವಾಗಿರಲು ಸಾಧ್ಯವಿಲ್ಲ  ಎಂದು ನ್ಯಾಯಾಲಯ ಹೇಳಿದೆ.

ಕೊಲೆಯ ಸಂತ್ರಸ್ತ ಫಿಟ್ ಮೆಂಟಲ್ ಸ್ಟೇಟ್ ನಲ್ಲಿದ್ದಾಗ ಮಾತ್ರ ಡೈಯಿಂಗ್ ಡಿಕ್ಲರೇಶನ್‌ಗಳನ್ನು ಅಂಗೀಕರಿಸಬಹುದು, ನ್ಯಾಯಾಲಯವು ಕೇಳಿದ ವಿಷಯದಲ್ಲಿ ಅದು ಆಗದಿರಬಹುದು.

ತನ್ನ ಪುತ್ರ ಇಸ್ಲಾಮುದ್ದೀನ್ ಮತ್ತು ಇಬ್ಬರು ಸಹೋದರರಾದ ಇರ್ಷಾದ್ ಮತ್ತು ನೌಶಾದ್ ಹತ್ಯೆ ಪ್ರಕರಣದಲ್ಲಿ ಕಳೆದ ಎಂಟು ವರ್ಷಗಳಿಂದ ಜೈಲಿನಲ್ಲಿರುವ ಇರ್ಫಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ಕೆಳ ನ್ಯಾಯಾಲಯವು ಇರ್ಫಾನ್‌ಗೆ ಶಿಕ್ಷೆ ವಿಧಿಸಲು ಸಾಯುವಾಗ ವ್ಯಕ್ತಿ ನೀಡಿದ ಹೇಳಿಕೆಯನ್ನು ಅವಲಂಬಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯ ಶೈಕ್ಷಣಿಕ ಅರ್ಹತೆ ಬಗ್ಗೆ ಮಾನನಷ್ಟ ಪ್ರಕರಣ; ಅರವಿಂದ್ ಕೇಜ್ರಿವಾಲ್‌ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ಅಲಹಾಬಾದ್ ಹೈಕೋರ್ಟ್ 2018 ರಲ್ಲಿ ಯಾವುದೇ ವ್ಯತ್ಯಾಸಗಳನ್ನು ಇಲ್ಲ ಎಂದು ಕಂಡುಕೊಂಡ ನಂತರ ಶಿಕ್ಷೆಯನ್ನು ಎತ್ತಿಹಿಡಿಯಿತು. ಆದಾಗ್ಯೂ, ಪ್ರಾಸಿಕ್ಯೂಷನ್ ತನ್ನ ಪ್ರಕರಣವನ್ನು ಅನುಮಾನಾಸ್ಪದವಾಗಿ ಸಾಬೀತುಪಡಿಸಿದೆ. ಇದರಿಂದ ತೃಪ್ತಿ ಹೊಂದಿಲ್ಲ ಎಂದ ಸುಪ್ರೀಂಕೋರ್ಟ್ ಹೇಳಿದ್ದು ತಕ್ಷಣವೇ ಇರ್ಫಾನ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ. ವ್ಯಕ್ತಿಯೊಬ್ಬ ಶೇಕಡಾ 80ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿರುವಾಗ ಈ ಘೋಷಣೆಗಳನ್ನು ಮಾಡಲಾಗಿದೆ ಎಂಬ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದ್ದು, ಅವರ ಮಾನಸಿಕ ಸ್ಥಿತಿಯನ್ನು ಪ್ರಶ್ನಿಸಿದೆ.

ವ್ಯಕ್ತಿ ಸಾವಿನ ಹಂತದಲ್ಲಿದ್ದಾಗ ಮತ್ತು ಈ ಪ್ರಪಂಚದ ಪ್ರತಿಯೊಂದು ಭರವಸೆಯು ಕಳೆದುಹೋದಾಗ ಸತ್ಯವನ್ನು ಮಾತ್ರ ಮಾತನಾಡಲು ಪ್ರೇರೇಪಿಸಲ್ಪಡುತ್ತಾನೆ ಎಂಬ ಊಹೆಯ ಆಧಾರದ ಮೇಲೆ ಸಾಯುತ್ತಿರುವ ವ್ಯಕ್ತಿಯ ಹೇಳಿಕೆಮೇಲಿನ ನ್ಯಾಯಶಾಸ್ತ್ರದ ಸಿದ್ಧಾಂತವನ್ನು ನ್ಯಾಯಾಲಯವು ಅಂಗೀಕರಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:40 pm, Fri, 25 August 23

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ