Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu: ವಿಧಾನಸಭೆಯಿಂದ ಉಚ್ಛಾಟನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಯತ್ನಿಸಿದ ಇ ಪಳನಿಸ್ವಾಮಿ ಬಂಧನ

ತಮಿಳುನಾಡು ವಿಧಾನಸಭೆಯಿಂದ ಉಚ್ಛಾಟನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಯತ್ನಿಸಿದ ಎಐಎಡಿಎಂಕೆಯ ಇ ಪಳನಿಸ್ವಾಮಿ ಬಂಧನ ಮಾಡಲಾಗಿದೆ.

Tamil Nadu: ವಿಧಾನಸಭೆಯಿಂದ ಉಚ್ಛಾಟನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಯತ್ನಿಸಿದ ಇ ಪಳನಿಸ್ವಾಮಿ ಬಂಧನ
E Palaniswami
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 19, 2022 | 11:32 AM

ತಮಿಳುನಾಡು: ತಮಿಳುನಾಡು (Tamil Nadu) ವಿಧಾನಸಭೆಯಿಂದ ಉಚ್ಛಾಟನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಯತ್ನಿಸಿದ ಎಐಎಡಿಎಂಕೆಯ (AIADMK) ಇ ಪಳನಿಸ್ವಾಮಿ (E Palaniswami) ಬಂಧನ ಮಾಡಲಾಗಿದೆ. ಇ ಪಳನಿಸ್ವಾಮಿ ತಮಿಳುನಾಡು ವಿಧಾನಸಭೆಯಿಂದ ಉಚ್ಛಾಟನೆಗೊಂಡಿದ್ದು, ಅವರ ಬೆಮಬಲಿಗರೊಂದಿಗೆ ಉಚ್ಛಾಟನೆಗೊಂಡಿರುವುದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಪ್ರತಿಸ್ಪರ್ಧಿ ಬಣದ ನಾಯಕ ಓ ಪನ್ನೀರಸೆಲ್ವಂ (ಒಪಿಎಸ್‌) ಅವರನ್ನು ಉಪ ಸ್ಪೀಕರ್‌ ಕೈಬಿಡದಿರುವುದನ್ನು ಖಂಡಿಸಿ ತಮಿಳುನಾಡು ವಿಧಾನಸಭೆಯ ಹೊರಗೆ ಉಪವಾಸ ಸತ್ಯಾಗ್ರಹ ನಡೆಸಲು ಯತ್ನಿಸಿದ ಪ್ರತಿಪಕ್ಷ ನಾಯಕ ಎಡಪ್ಪಡ್ಡಿ ಕೆ ಪಳನಿಸ್ವಾಮಿ (ಇಪಿಎಸ್‌) ಮತ್ತು ಇತರ ಎಐಎಡಿಎಂಕೆ ಶಾಸಕರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಎರಡರಲ್ಲಿ ಪ್ರಬಲವಾಗಿರುವ ಇಪಿಎಸ್ ಬಣ ಹೊಸ ಉಪ ನಾಯಕನನ್ನು ಆಯ್ಕೆ ಮಾಡಿದೆ ಮತ್ತು ಆದರೆ ಒಪಿಎಸ್ ಸದಸ್ಯರನ್ನು ಬೇರೆಡೆ ಕೂರಿಸುವಂತೆ ಹಲವಾರು ಪತ್ರಗಳನ್ನು ಬರೆದಿದೆ. ಈ ವಿಚಾರವಾಗಿ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಎಡಪ್ಪಡ್ಡಿ ಕೆ ಪಳನಿಸ್ವಾಮಿ ಬಣದ ನಾಯಕರನ್ನು ನಿನ್ನೆ ಸದನದಿಂದ ಹೊರಹಾಕಲಾಗಿತ್ತು.

ಈ ಬಗ್ಗೆ ಪರಿಶೀಲಿಸುವುದಾಗಿ ಸ್ಪೀಕರ್ ಎಂ ಅಪ್ಪಾವು ಹೇಳಿದ್ದರು, ಯಾವುದೇ ಆಸನದ ಮೇಲೆ ಆದೇಶ ನೀಡುವ ಮತ್ತು ಈ ಆಸನದಲ್ಲಿ ಕುಳಿತುಕೊಳ್ಳಿ ಎನ್ನುವ ಅಧಿಕಾರ ಇಲ್ಲ, ನಿಮಗೆ ಸಂವಿಧಾನ ಪ್ರಕಾರ ಏನನ್ನೂ ಸೂಚಿಸಿದೆ ಅದನ್ನು ಮಾಡಿ ಎಂದು ಹೇಳಿದ್ದಾರೆ. ಇಪಿಎಸ್ ಮತ್ತು ಒಪಿಎಸ್ ಇಬ್ಬರೂ ಮಾಜಿ ಮುಖ್ಯಮಂತ್ರಿಗಳಾಗಿದ್ದು, ಜಯಲಲಿತಾ ಅವರ ಮರಣದ ನಂತರ ಎಐಎಡಿಎಂಕೆಯನ್ನು ಜಂಟಿಯಾಗಿ ಮುನ್ನಡೆಸಿದರು. ಈ ಬಗ್ಗೆ ಅನೇಕ ಕೇಸುಗಳು ನ್ಯಾಯಾಲಯದಲ್ಲಿವೆ, ಆದರೆ ಇಪಿಎಸ್ ಬಣವು ಎಐಎಡಿಎಂಕೆ ಮೇಲೆ ಬಲವಾದ ಹಿಡಿತವನ್ನು ಹೊಂದಿದೆ.

ನಿನ್ನೆ ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇಪಿಎಸ್, ಎಐಎಡಿಎಂಕೆಯಲ್ಲಿನ ಬಹುಮತದ ನಿರ್ಧಾರವನ್ನು ಸ್ಪೀಕರ್ ಪಾಲಿಸಿಲ್ಲ, ಒಪಿಎಸ್ ಬದಲಿಗೆ ಆರ್‌ಬಿ ಉದಯಕುಮಾರ್ ಅವರನ್ನು ವಿಧಾನಸಭೆಯಲ್ಲಿ ಪಕ್ಷದ ಉಪನಾಯಕರನ್ನಾಗಿ ಆಯ್ಕೆ ಮಾಡಿದರು.

ಓ ಪನ್ನೀರಸೆಲ್ವಂ (OPS) ಮತ್ತು ಅವರ ಬೆಂಬಲಿಗರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ. ಸ್ಪೀಕರ್ ಆಡಳಿತಾರೂಢ ಡಿಎಂಕೆ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಆಸನದ ಕುರಿತು ಯಾವುದೇ ಚರ್ಚೆಗೆ ಸ್ಪೀಕರ್ ಅನುಮತಿಸಲಿಲ್ಲ, ಈ ಅವಧಿ ಜನರ ಸಮಸ್ಯೆಗಳಿಗೆ ಮೀಸಲಾಗಿದೆ. ನಂತರ ಸಮಸ್ಯೆಯನ್ನು ಪ್ರಸ್ತಾಪಿಸಲು ಅವಕಾಶ ನೀಡಲಾಗುತ್ತದೆ ಎಂದು ಸ್ಪೀಕರ್ ತಿಳಿಸಿದರು. ಆದರೆ ಇಪಿಎಸ್ ಅವರ ಮಾತು ಕೇಳದೇ ಈಗಾಗಲೇ ಅವಕಾಶ ನೀಡಿ ಎಂದಿ ಒತ್ತಾಯ ಮಾಡಿದ್ದಾರೆ.

ಇದರಿಂದ ಕೋಪಗೊಂಡ ಸ್ಪೀಕರ್ ನೀವೆಲ್ಲರೂ ಕಲಾಪಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಬಂದಿದ್ದೀರಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಎಐಎಡಿಎಂಕೆ ಸದಸ್ಯರು ನಿಂತುಕೊಂಡಾಗ, ಕೂಗಾಡಲು ಶುರು ಮಾಡಿದ್ದಾರೆ ನಂತರ ಇಪಿಎಸ್ ಮತ್ತು ಅವರ ಶಾಸಕರನ್ನು ಹೊರಹಾಕುವಂತೆ ಮಾರ್ಷಲ್‌ಗಳಿಗೆ ಸ್ಪೀಕರ್ ಸೂಚಿಸಿದರು.

Published On - 10:25 am, Wed, 19 October 22

ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್