AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಸೇನೆ ಸಂಸದೆ ಮನೆ, ಕಚೇರಿ ಸೇರಿ 5 ಸ್ಥಳಗಳ ಮೇಲೆ ಇಡಿ ದಾಳಿ; ಮಹತ್ವದ ದಾಖಲೆ ವಶ

ಭಾವನಾ ಗವಲಿ ವಿವಿಧ ಬ್ಯಾಂಕ್​ ಮತ್ತು ಇತರ ಹಣಕಾಸಿನ ಸಂಸ್ಥೆಗಳಿಂದ 100 ಕೋಟಿ ರೂಪಾಯಿಗಳನ್ನು ಹಣ ಸಾಲ ಪಡೆದು, ಅಕ್ರಮವಾಗಿ ಬಳಕೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದರು.

ಶಿವಸೇನೆ ಸಂಸದೆ ಮನೆ, ಕಚೇರಿ ಸೇರಿ 5 ಸ್ಥಳಗಳ ಮೇಲೆ ಇಡಿ ದಾಳಿ; ಮಹತ್ವದ ದಾಖಲೆ ವಶ
ಶಿವ ಸೇನಾ ಸಂಸದೆ ಭಾವನಾ ಗವಲಿ
TV9 Web
| Edited By: |

Updated on: Aug 30, 2021 | 7:36 PM

Share

ಮಹಾರಾಷ್ಟ್ರದ ಯಾವತ್ಮಲ್​-ವಾಶಿಂ ಸಂಸದೆ ಭಾವನಾ ಗವಲಿ (Bhavana Gawali) ಅವರಿಗೆ ಸೇರಿದ 5 ಸ್ಥಳಗಳ ಮೇಲೆ ಇಂದು ಜಾರಿ ನಿರ್ದೇಶನಾಲಯ (ED-ಇಡಿ) ದಾಳಿ ನಡೆಸಿದೆ. ಸಾಲ ಪಡೆದು ವಂಚನೆ ಮಾಡಿದ ಆರೋಪದಡಿ ಭಾವನಾ ಗವಾಲಿಯವರ ಟ್ರಸ್ಟ್​ ವಿರುದ್ಧ ತನಿಖೆ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಇ.ಡಿ.ಇಂದು ಹಲವು ದಾಖಲೆಗಳನ್ನು, ಸುಮಾರು 17 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.

ಹರೀಶ್​ ಸರ್ದಾ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ಇತ್ತೀಚೆಗೆ ಭಾವನಾ ಗವಲಿ ವಿರುದ್ಧ ಹಣದ ವಂಚನೆ ಆರೋಪ ಮಾಡಿದ್ದರು. ಭಾವನಾ, ಬಾಲಾಜಿ ಸಹಕಾರಿ ಪಾರ್ಟಿಕಲ್ ಬೋರ್ಡ್​ ಎಂಬ ಸಂಸ್ಥೆಯ ಹೆಸರಿನಲ್ಲಿ, ನ್ಯಾಷನಲ್​ ಕೋ ಆಪರೇಟಿವ್​ ಡೆವಲಪ್​ಮೆಂಟ್​ ಕಾರ್ಪೋರೇಶನ್​ (NCDC)ನಿಂದ 43.35 ಕೋಟಿ ರೂಪಾಯಿ ಸಾಲ ಪಡೆದು, ವಂಚನೆ ಮಾಡಿದ್ದಾರೆ ಎಂದು ಅವರು ಹೇಳಿದ್ದರು. ಅಷ್ಟೇ ಅಲ್ಲ, ಭಾವನಾ, ಎನ್​ಸಿಡಿಸಿಯಿಂದ 10 ವರ್ಷಗಳ ಕಾಲ ಸಾಲ ಪಡೆದಿದ್ದಾರೆ. ಕಂಪನಿ ಪ್ರಾರಂಭವಾಗುವುದಕ್ಕೂ ಮೊದಲೇ ಅದರ ಹೆಸರಲ್ಲಿ ಹಣ ಪಡೆದು ವಂಚಿಸಿದ್ದಾರೆ ಎಂದೂ ಆರೋಪ ಮಾಡಿದ್ದಾರೆ.

ಬಿಜೆಪಿ ನಾಯಕನಿಂದಲೂ ಆರೋಪ ಇನ್ನು ಭಾವನಾ ವಿರುದ್ಧ ಬಿಜೆಪಿ ನಾಯಕ ಕಿರೀತ್ ಸೋಮಯ್ಯ ಕೂಡ ಹಣ ವಂಚನೆಯ ಆರೋಪ ಮಾಡಿದ್ದಾರೆ. ಭಾವನಾ ಗವಲಿ ವಿವಿಧ ಬ್ಯಾಂಕ್​ ಮತ್ತು ಇತರ ಹಣಕಾಸಿನ ಸಂಸ್ಥೆಗಳಿಂದ 100 ಕೋಟಿ ರೂಪಾಯಿಗಳನ್ನು ಹಣ ಸಾಲ ಪಡೆದು, ಅಕ್ರಮವಾಗಿ ಬಳಕೆ ಮಾಡಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಭಾವನಾ ಗವಲಿ, 55 ಕೋಟಿ ರೂಪಾಯಿ ಮೌಲ್ಯದ ಕಾರ್ಖಾನೆಯನ್ನು 25 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ ಎಂದೂ ಆರೋಪ ಮಾಡಿದ್ದರು. ಸಿಬಿಐ, ಇಡಿಯಂತಹ ತನಿಖಾ ಸಂಸ್ಥೆಗಳು ಭಾವನಾ ಗವಲಿ ಹಣಕಾಸಿನ ವ್ಯವಹಾರದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ: Crime News: ಬುಡಕಟ್ಟು ವ್ಯಕ್ತಿಯನ್ನು ಲಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಜನರು; ಗಂಭೀರವಾಗಿ ಗಾಯಗೊಂಡಾತ ಸಾವು

ಮುಕುಲ್ ರಾಯ್ ನಂತರ ತೃಣಮೂಲ ಕಾಂಗ್ರೆಸ್ ಸೇರಿದ ಬಿಜೆಪಿ ಶಾಸಕ ತನ್ಮಯ್ ಘೋಷ್