AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ ಮೇಲೆ ನಂಬಿಕೆ ಕಳೆದುಕೊಂಡಿದ್ದೇನೆ..ಅಲ್ಲಿದ್ದು ಪ್ರಯೋಜನ ಇಲ್ಲ: ಪಕ್ಷ ತೊರೆದ ಹಿರಿಯ ನಾಯಕ ಎ.ವಿ.ಗೋಪಿನಾಥನ್​

ಕೇರಳ ವಿಧಾನಸಭೆ ಚುನಾವಣೆಗೂ ಮೊದಲೇ ಗೋಪಿನಾಥನ್​ ಬಂಡಾಯವೆದ್ದಿದ್ದರು. ಆದರೆ ಆಗ ಪಕ್ಷದ ಹಿರಿಯರು, ಅವರಿಗೆ ಪಾಲಕ್ಕಡ್​​ ಜಿಲ್ಲಾ ಸಮಿತಿ ಅಧ್ಯಕ್ಷನ ಸ್ಥಾನ ಕೊಟ್ಟು ಸಮಾಧಾನಪಡಿಸಿದ್ದರು.

ಕಾಂಗ್ರೆಸ್​ ಮೇಲೆ ನಂಬಿಕೆ ಕಳೆದುಕೊಂಡಿದ್ದೇನೆ..ಅಲ್ಲಿದ್ದು ಪ್ರಯೋಜನ ಇಲ್ಲ: ಪಕ್ಷ ತೊರೆದ ಹಿರಿಯ ನಾಯಕ ಎ.ವಿ.ಗೋಪಿನಾಥನ್​
ಎ.ವಿ.ಗೋಪಿನಾಥನ್​
TV9 Web
| Edited By: |

Updated on: Aug 30, 2021 | 6:12 PM

Share

ಕೇರಳ ಕಾಂಗ್ರೆಸ್​ ಹಿರಿಯ ನಾಯಕ, ಪಾಲಕ್ಕಡ್​​ ಜಿಲ್ಲಾ ಕಾಂಗ್ರೆಸ್​ ಸಮಿತಿ ಮಾಜಿ (DCC)ಅಧ್ಯಕ್ಷ ಎ.ವಿ.ಗೋಪಿನಾಥನ್​ ಅವರಿಂದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೇ ರಾಜೀನಾಮೆ ಸಲ್ಲಿಸಿರುವ ಎ.ವಿ.ಗೋಪಿನಾಥನ್ (AV Gopinathan)​, ಸದ್ಯಕ್ಕಂತೂ ಬೇರೆ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ. ಅಲತ್ತೂರಿನ ಮಾಜಿ ಶಾಸಕ, ಪೆರಿಂಗೊಟ್ಟುಕುರಿಸ್ಸಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರೂ ಆಗಿರುವ ಗೋಪಿನಾಥನ್ ಇಷ್ಟು ದಿನಗಳ ತಮ್ಮ ಇಡೀ ಜೀವನವನ್ನು ಕಾಂಗ್ರೆಸ್​ಗೆ ಮುಡಿಪಾಗಿಟ್ಟಿದ್ದರು. ಆದರೆ, ಇದೀಗ ಕಾಂಗ್ರೆಸ್​​ನಿಂದ ತುಂಬ ಬೇಸರಗೊಂಡು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.

ಕೇರಳದ 14 ಜಿಲ್ಲೆಗಳ ಕಾಂಗ್ರೆಸ್​​ ಸಮಿತಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ವಿಚಾರದಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟದಿಂದ ಬೇಸತ್ತಿರುವ ಅವರು, ಕಾಂಗ್ರೆಸ್ ನಾಯಕತ್ವದಲ್ಲಿ ನಂಬಿಕೆ ಕಳೆದುಕೊಂಡಿದ್ದೇನೆ. ಹಾಗಾಗಿ ಇಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ನಾನು ಕಾಂಗ್ರೆಸ್​ನಲ್ಲಿ ಸುಮಾರು 50 ವರ್ಷಗಳಿಂದ ಇದ್ದೇನೆ. ಆದರೆ ನಾನೀಗ ಎಲ್ಲ ಭರವಸೆಯನ್ನೂ ಕಳೆದುಕೊಂಡಿದ್ದೇನೆ. ಹಾಗಾಗಿ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ರಾಜೀನಾಮೆ ಸಂದರ್ಭದಲ್ಲಿ ಪಾಲಕ್ಕಡ್​​ನಲ್ಲಿ ತಿಳಿಸಿದ್ದಾರೆ.

ಏನಿದು ವಿವಾದ? ಕೇರಳ ವಿಧಾನಸಭೆ ಚುನಾವಣೆಗೂ ಮೊದಲೇ ಗೋಪಿನಾಥನ್​ ಬಂಡಾಯವೆದ್ದಿದ್ದರು. ಆದರೆ ಆಗ ಪಕ್ಷದ ಹಿರಿಯರು, ಅವರಿಗೆ ಪಾಲಕ್ಕಡ್​​ ಜಿಲ್ಲಾ ಸಮಿತಿ ಅಧ್ಯಕ್ಷನ ಸ್ಥಾನ ಕೊಟ್ಟು ಸಮಾಧಾನಪಡಿಸಿದ್ದರು. ಆದರೆ ಈಗೆರಡು ದಿನಗಳ  ಹಿಂದೆ ಕಾಂಗ್ರೆಸ್​ ಪಕ್ಷ, 14 ಜಿಲ್ಲೆಗಳ ಕಾಂಗ್ರೆಸ್​ ಸಮಿತಿಗೆ ಹೊಸ ಅಧ್ಯಕ್ಷರನ್ನು ಘೋಷಿಸಿತ್ತು. ಅದರ ಪಟ್ಟಿ ನೋಡಿ ಗೋಪಿನಾಥನ್​ ತುಂಬ ಬೇಜಾರಾಗಿದ್ದರು. ಯಾಕೆಂದರೆ ಪಾಲಕ್ಕಡ್​ಗೆ ಗೋಪಿನಾಥನ್​ ಬದಲಿಗೆ ತಂಕಪ್ಪನ್​ ಎಂಬುವನ್ನು ನೇಮಕ ಮಾಡಲಾಗಿತ್ತು. ಇವರು ಜಿಲ್ಲೆಯಲ್ಲಿ ಅಷ್ಟೇನೂ ಪರಿಚಿತರಾಗಿರಲಿಲ್ಲ. ಹೀಗಾಗಿ ಸಹಜವಾಗಿಯೇ ಗೋಪಿನಾಥನ್​ ಸ್ವಾಭಿಮಾನಕ್ಕೆ ಪೆಟ್ಟುಬಿದ್ದಿದೆ. ಈ ವಿಚಾರವಾಗಿ ಮಾಜಿ ಶಾಸಕ ಅನಿಲ್​ ಅಕ್ಕಾರೆಯವರನ್ನೂ ಗೋಪಿನಾಥನ್​ ಟೀಕಿಸಿದ್ದಾರೆ.

ಇದನ್ನೂ ಓದಿ: Tokyo Paralympics: ಅಪ್ಪನ ಆಸೆಯನ್ನು ಈಡೇರಿಸಿದ್ದೇನೆ; ಪದಕವನ್ನು ದಿವಂಗತ ತಂದೆಗೆ ಅರ್ಪಿಸಿದ ದೇವೇಂದ್ರ ಜಜಾರಿಯಾ

Tomato Rate: ಬಹುತೇಕ ರಾಜ್ಯಗಳಲ್ಲಿ ಟೊಮೆಟೊ ಬೆಲೆ ಅಪ್ಪಚ್ಚಿ; ಕೇಜಿಗೆ 4 ರೂಪಾಯಿಯಂತೆ ಪಾತಾಳ ತಲುಪಿದ ದರ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ