ಸೈಬರ್ ವಂಚನೆ ಪ್ರಕರಣ, ದಾಳಿಗೆ ತೆರಳಿದ್ದಾಗ ಇಡಿ ಅಧಿಕಾರಿಗಳ ಮೇಲೆ ಹಲ್ಲೆ
ಸೈಬರ್ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತಂಡವೊಂದು ಗುರುವಾರ ದೆಹಲಿಯ ಬಿಜ್ವಾಸನ್‌ನ ಸ್ಥಳದಲ್ಲಿ ದಾಳಿ ನಡೆಸುತ್ತಿದ್ದಾಗ ಇಡಿ ಅಧಿಕಾರಿಗಳ ಮೇಲೆ ಕೆಲವರು ದಾಳಿ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.
ದೆಹಲಿಯಲ್ಲಿ ಸೈಬರ್ ವಂಚನೆ ಪ್ರಕರಣದಲ್ಲಿ ದಾಳಿಗೆಂದು ತೆರಳಿದ್ದಾಗ ಇಡಿ ಅಧಿಕಾರಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ದಾಳಿ ವೇಳೆ ಆರೋಪಿಗಳು ತಂಡದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಪಿಪಿಪಿವೈಎಲ್ ಸೈಬರ್ ಆ್ಯಪ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ್ ಶರ್ಮಾ ಮತ್ತು ಅವರ ಸಹೋದರನ ಅಡಗುತಾಣದ ಮೇಲೆ ದಾಳಿ ನಡೆಸಲು ಇಡಿ ತಂಡ ತೆರಳಿತ್ತು. ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.
ಪಿಪಿಪಿವೈಎಲ್ ಸೈಬರ್ ಆ್ಯಪ್ ವಂಚನೆ ಪ್ರಕರಣದ ತನಿಖೆಯಲ್ಲಿ ಆರೋಪಿಗಳ ಮೇಲೆ ದಾಳಿ ನಡೆಸಲು ಹೋಗಿದ್ದರು ಎಂದು ಇಡಿ ಮೂಲಗಳು ತಿಳಿಸಿವೆ. ಆದರೆ, ಈ ವೇಳೆ ಸೈಬರ್ ಕ್ರಿಮಿನಲ್‌ಗಳಾದ ಅಶೋಕ್ ಶರ್ಮಾ ಮತ್ತು ಆತನ ಸಹೋದರ ತಂಡದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಅಧಿಕಾರಿಗಳು ದಾಳಿ ನಡೆಸುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಇಡಿ ತಂಡ ದಾಳಿಗೆ ಆಗಮಿಸಿದ್ದ ಪ್ರಕರಣದಲ್ಲಿ ಫಿಶಿಂಗ್ ಹಗರಣ, ಕ್ಯೂಆರ್ ಕೋಡ್ ವಂಚನೆ, ಪಾರ್ಟ್ ಟೈಮ್ ಜಾಬ್ ಹಗರಣದಂತಹ ಸಾವಿರಾರು ಸೈಬರ್ ಅಪರಾಧಗಳು ದೇಶಾದ್ಯಂತ ದಾಖಲಾಗಿವೆ ಎಂದು ಇಡಿ ಮೂಲಗಳು ತಿಳಿಸಿವೆ.ಈ ದಾಳಿಯಲ್ಲಿ ಸಹಾಯಕ ನಿರ್ದೇಶಕ ಗಾಯಗೊಂಡಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರಿನ ಉದ್ಯಮಿಗಳು, ಬಿಲ್ಡರ್ಗಳಿಗೆ ಐಟಿ ಶಾಕ್: ದಾಳಿ
ದಾಳಿ ವೇಳೆ ಒಬ್ಬ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಪೊಲೀಸ್ ತಂಡ ಆಗಮಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಯುತ್ತಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಲಾಗಿದೆ ಮತ್ತು ಈ ಕಾರ್ಡ್‌ಗಳನ್ನು ಬಳಸಿಕೊಂಡು ಯುಎಇ ಮೂಲದ ಪಿವೈಪಿಎಲ್ ಪೇಮೆಂಟ್ ಅಗ್ರಿಗೇಟರ್‌ನಲ್ಲಿ ಟಾಪ್-ಅಪ್ ವರ್ಚುವಲ್ ಖಾತೆಗಳಿಗೆ ಹಣವನ್ನು ರವಾನೆ ಮಾಡಲಾಗಿದೆ, ಕ್ರಿಪ್ಟೋಕರೆನ್ಸಿ ಖರೀದಿಸಲು ಪೈಪಿಎಲ್‌ನಿಂದ ಹಣವನ್ನು ಬಳಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಇಡೀ ನೆಟ್‌ವರ್ಕ್ ಅನ್ನು ಚಾರ್ಟರ್ಡ್ ಅಕೌಂಟೆಂಟ್‌ಗಳು ನಡೆಸುತ್ತಿದ್ದಾರೆ ಮತ್ತು ಹುಡುಕಾಟ ಇನ್ನೂ ನಡೆಯುತ್ತಿವೆ ಎಂದು ಇಡಿ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ