ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅಸಂವಿಧಾನಿಕ ಹಲ್ಲೆ: ಪೆಗಾಸಸ್ ಹಸ್ತಕ್ಷೇಪದ ಬಗ್ಗೆ ಸುಪ್ರೀಂಕೋರ್ಟ್​ ನಿಗಾ ತನಿಖೆಗೆ ಎಡಿಟರ್ಸ್​ ಗಿಲ್ಡ್​ ಆಗ್ರಹ

ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವ್ಯಾಪಾರಸ್ಥರು ಮತ್ತು ರಾಜಕಾರಿಣಿಗಳ ಮೇಲೆ ಪೆಗಾಸಸ್ ಮೂಲಕ ಸರ್ಕಾರದ ಸಂಸ್ಥೆಗಳು ಕಣ್ಗಾವಲು ಇರಿಸಿರುವುದನ್ನು ಎಡಿಟರ್ಸ್​ ಗಿಲ್ಡ್​ ಖಂಡಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅಸಂವಿಧಾನಿಕ ಹಲ್ಲೆ: ಪೆಗಾಸಸ್ ಹಸ್ತಕ್ಷೇಪದ ಬಗ್ಗೆ ಸುಪ್ರೀಂಕೋರ್ಟ್​ ನಿಗಾ ತನಿಖೆಗೆ ಎಡಿಟರ್ಸ್​ ಗಿಲ್ಡ್​ ಆಗ್ರಹ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jul 21, 2021 | 10:05 PM

ದೆಹಲಿ: ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವ್ಯಾಪಾರಸ್ಥರು ಮತ್ತು ರಾಜಕಾರಿಣಿಗಳ ಮೇಲೆ ಇಸ್ರೇಲಿ ಗೂಢಚರ್ಯೆ ಸಂಸ್ಥೆ ಅಭಿವೃದ್ಧಿಪಡಿಸಿರುವ ಪೆಗಾಸಸ್ ಮೂಲಕ ಸರ್ಕಾರದ ಸಂಸ್ಥೆಗಳು ಕಣ್ಗಾವಲು ಇರಿಸಿರುವುದನ್ನು ಖಂಡಿಸಿರುವ ಎಡಿಟರ್ಸ್​ ಗಿಲ್ಡ್​, ಈ ಬಗ್ಗೆ ಸುಪ್ರೀಂಕೋರ್ಟ್​ ಕಣ್ಗಾವಲಿನಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

‘ಈ ಪ್ರಕರಣದ ಸುಪ್ರೀಂಕೋರ್ಟ್​ ಕಣ್ಗಾವಲಿನಲ್ಲಿ ತುರ್ತಾಗಿ ಸ್ವತಂತ್ರ ತನಿಖೆ ನಡೆಸಬೇಕು’ ಎಂದು ಎಡಿಟರ್ಸ್​ ಗಿಲ್ಡ್​ ಪತ್ರಿಕಾ ಹೇಳಿಕೆ ಒತ್ತಾಯಿಸಿದೆ.

ಸ್ಪೈವೇರ್ ಬಳಸಿ ಹಲವರ ಬದುಕಿನಲ್ಲಿ ಇಣುಕಿರುವುದು ವಾಕ್​ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯಗಳ ಮೇಲೆ ನಡೆದ ಹಲ್ಲೆ ಎಂದು ಹೇಳಿರುವ ಎಡಿಟರ್ಸ್​ ಗಿಲ್ಡ್​, ಪತ್ರಿಕೋದ್ಯಮ ಮತ್ತು ರಾಜಕೀಯ ಭಿನ್ನಮತವನ್ನು ಈಗ ಭಯೋತ್ಪಾದನೆಗೆ ಸಮನಾಗಿ ಪರಿಗಣಿಸಲಾಗುತ್ತಿದೆ. ವಾಕ್​ ಸ್ವಾತಂತ್ರ್ಯವನ್ನು ಸರ್ಕಾರ ಖಾತ್ರಿಪಡಿಸದಿದ್ದರೆ ಪ್ರಜಾಪ್ರಭುತ್ವ ಹೇಗೆ ಉಳಿಯಲು ಸಾಧ್ಯ ಎಂದು ಗಿಲ್ಡ್​ ಪ್ರಶ್ನಿಸಿದೆ.

ಸುಪ್ರೀಂಕೋರ್ಟ್​​ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯದ ಅರೋಪ ಮಾಡಿದ್ದ ಮಹಿಳೆ ಮತ್ತು 40 ಪತ್ರಕರ್ತರು, ರಾಜಕೀಯ ನಾಯಕರಾದ ರಾಹುಲ್ ಗಾಂಧಿ, ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರಿ ಹಲವರ ಮೇಲೆ ಪೆಗಾಸಸ್ ಮೂಲಕ ನಿಗಾ ಇರಿಸಲಾಗಿತ್ತು ಎಂದು ದಿ ವೈರ್ ಜಾಲತಾಣ ವರದಿ ಮಾಡಿತ್ತು.

(Editors Guild Seeks Supreme Court Monitored Probe Into Pegasus Snooping Allegations)

ಇದನ್ನೂ ಓದಿ: ಭಾರತದ ವಿರುದ್ಧ ಅಮ್ನೆಸ್ಟಿ, ಪೆಗಾಸಸ್​ ಹುನ್ನಾರ: ಅಶ್ವತ್ಥ ನಾರಾಯಣ ಆರೋಪ

ಇದನ್ನೂ ಓದಿ: ಕರ್ನಾಟಕ ರಾಜಕಾರಣದಲ್ಲೂ ಪೆಗಾಸಸ್ ನೆರಳು; ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಕೆಡವಲು ಸಿದ್ದರಾಮಯ್ಯ, ಡಾ ಪರಮೇಶ್ವರ್ ಫೋನ್ ಕದ್ದಾಲಿಕೆ ಆರೋಪ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada