ಕೊವಿಡ್ 19 ಸೋಂಕಿನ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ, ಜಂಟಿ ಪ್ರವೇಶ ಪರೀಕ್ಷೆ (JEE) ಮತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)ಗಳನ್ನು ಶೀಘ್ರವೇ ನಡೆಸಲು ಕೇಂದ್ರ ಶಿಕ್ಷಣ ಇಲಾಖೆ ತೀರ್ಮಾನಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಇಂಜನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ಹೇಗೆ ನಡೆಸಬಹುದು ಎಂಬ ಬಗ್ಗೆ ಕೇಂದ್ರ ಶಿಕ್ಷಣ ಸಚಿವಾಲಯ ಶೀಘ್ರದಲ್ಲೇ ಪರಿಶೀಲನಾ ಸಭೆ ನಡೆಸಲಿದೆ ಎಂದೂ ಹೇಳಲಾಗಿದೆ. ಈ ಎರಡೂ ಪಕ್ಷಗಳು ಆಗಸ್ಟ್ನಲ್ಲಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಿಟಿಐ ತಿಳಿಸಿದೆ.
ಕೊವಿಡ್ 19 ಕಾರಣದಿಂದ ಬಹುತೇಕ ಎಲ್ಲ ಪರೀಕ್ಷೆಗಳೂ ಬಾಕಿ ಉಳಿದಿವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IITs) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NITs)ಗಳ ಪ್ರವೇಶಕ್ಕೆ ನಡೆಲಾಗುವ ಜೆಇಇ-ಸುಧಾರಿತ (JEE-Advanced) ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಈ ಪರೀಕ್ಷೆಗಳು ಜುಲೈ 3ರಂದು ನಡೆಯಬೇಕಿತ್ತು. ಮೇ 1ರಿಂದ ಪ್ರಾರಂಭವಾಗಬೇಕಿದ್ದ ನೀಟ್-ಯುಜಿ ಪರೀಕ್ಷೆಯ ನೋಂದಣಿ ಪ್ರಕ್ರಿಯೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ದೇಶಾದ್ಯಂತ ನೀಟ್ ಮತ್ತು ಜೆಇಇ ಮುಖ್ಯ ಪರೀಕ್ಷೆ ಬರೆಯಲು ಅದೆಷ್ಟೋ ಅಭ್ಯರ್ಥಿಗಳು ಕಾಯುತ್ತಿದ್ದಾರೆ. ಈ ಬಾರಿ ನೀಟ್ ಪರೀಕ್ಷೆಯ ಸ್ವರೂಪದಲ್ಲಿ ಬದಲಾವಣೆ ಇರಲಿದೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಕಳೆದ ವರ್ಷವೇ ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ. ಈ ವರ್ಷದಿಂದ ಜೆಇಇ ಮುಖ್ಯ ಪರೀಕ್ಷೆಯನ್ನು ತಿಂಗಳಿಗೆ ನಾಲ್ಕು ಬಾರಿ ಆಯೋಜಿಸಲೂ ನಿರ್ಧರಿಸಲಾಗಿತ್ತು. ಇದರಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಪರೀಕ್ಷೆಗಳು ಮುಗಿದಿವೆ. ಆದರೆ ಏಪ್ರಿಲ್ ಮತ್ತು ಮೇ ಸೆಷನ್ ಪರೀಕ್ಷೆ ಮುಂದೂಡಲ್ಪಟ್ಟಿವೆ.
ಇದನ್ನೂ ಓದಿ: ಧೋನಿಗಾಗಿ ದಾದಾ ಬೆನ್ನಿಂದೆ ಬಿದ್ದಿದ್ದೆ: ಗಂಗೂಲಿ ಮನವೊಲಿಸಲು 10 ದಿನಗಳು ಬೇಕಾಯ್ತು; ಕಿರಣ್ ಮೋರೆ